• Home
  • »
  • News
  • »
  • sports
  • »
  • IND vs NZ ODI: ಭಾರತ-ನ್ಯೂಜಿಲ್ಯಾಂಡ್​ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ, ಇಲ್ಲಿದೆ ಹವಾಮಾನ ವರದಿ

IND vs NZ ODI: ಭಾರತ-ನ್ಯೂಜಿಲ್ಯಾಂಡ್​ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ, ಇಲ್ಲಿದೆ ಹವಾಮಾನ ವರದಿ

IND vs NZ ODI

IND vs NZ ODI

IND vs NZ ODI: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ ಬೆಳಗ್ಗೆ ಆಕ್ಲೆಂಡ್‌ನಲ್ಲಿ ನಡೆಯಲಿದೆ. ಸ್ಥಳೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶುಕ್ರವಾರ ಆಕ್ಲೆಂಡ್‌ನಲ್ಲಿ ಹವಾಮಾನ ಸ್ಪಷ್ಟವಾಗಿರುತ್ತದೆ.

  • Share this:

ಟಿ20 ವಿಶ್ವಕಪ್ ಮುಗಿದ ಐದು ದಿನಗಳ ನಂತರ ಭಾರತದ ನ್ಯೂಜಿಲೆಂಡ್ (IND vs NZ) ಪ್ರವಾಸ ಆರಂಭವಾಗಿದೆ. ಆದರೆ ಈ ಪ್ರವಾಸದ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್‌ನಲ್ಲಿನ ಕೆಟ್ಟ ವಾತಾವರಣ ಉಭಯ ತಂಡಗಳ ಮೇಲೂ ಪರಿಣಾಮ ಬೀರಿತು. ಈ ಸರಣಿಯಲ್ಲಿ ಒಂದು ಪಂದ್ಯವನ್ನು ಮಾತ್ರ ಪೂರ್ಣಗೊಳಿಸಲು ಸಾಧ್ಯವಾಯಿತು. ವೆಲ್ಲಿಂಗ್ಟನ್‌ನ ಮೊದಲ ಪಂದ್ಯವು ಮಳೆಯಿಂದಾಗಿ ಒಂದು ಚೆಂಡನ್ನು ಆಡದೆಯೇ ರದ್ದುಗೊಳಿಸಲಾಯಿತು. ನೇಪಿಯರ್‌ನ ಮೂರನೇ ಪಂದ್ಯ ಮಳೆಯ ಅಡಚಣೆಯಿಂದಾಗಿ ರದ್ದಾಯಿತು. ಅಂತಿಮವಾಗಿ ಅದು ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಟೈನಲ್ಲಿ ಕೊನೆಗೊಂಡಿತು ಮತ್ತು ಭಾರತವು 1-0 ಅಂತರದಿಂದ ಸರಣಿ ಗೆದ್ದಿತು. ಇದೀಗ ಉಭಯ ತಂಡಗಳಲ್ಲಿ ನಾಳೆಯಿಂದ ODI  ಸರಣಿ ಆರಂಭವಾಗಲಿದೆ. ಆದರೆ ಈ ಸರಣಿಗೂ ಮಳೆ (Rain) ಅಡ್ಡಿಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.


ಭಾರತ-ಕಿವೀಸ್​ ಪಂದ್ಯಕ್ಕೆ ಮಳೆ ಅಡ್ಡಿ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ ಬೆಳಗ್ಗೆ ಆಕ್ಲೆಂಡ್‌ನಲ್ಲಿ ನಡೆಯಲಿದೆ. ಸ್ಥಳೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶುಕ್ರವಾರ ಆಕ್ಲೆಂಡ್‌ನಲ್ಲಿ ಹವಾಮಾನ ಸ್ಪಷ್ಟವಾಗಿರುತ್ತದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳು ಪಂದ್ಯವನ್ನು ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗುತ್ತದೆ. ಟಿ20 ಸರಣಿಯಲ್ಲಿ ಅಭಿಮಾನಿಗಳು ಸಾಕಷ್ಟು ನಿರಾಸೆ ಅನುಭವಿಸಿದ್ದರು. ಆದರೆ ನಾಳೆ ಒಂದೇ ದಿನದಲ್ಲಿ ಪೂರ್ಣ ಓವರ್‌ಗಳ ಆಟವನ್ನು ನಿರೀಕ್ಷಿಸಲಾಗಿದೆ.



ಧವನ್ ನೇತೃತ್ವದ ಟೀಂ ಇಂಡಿಯಾ:


ನ್ಯೂಜಿಲೆಂಡ್‌ನಲ್ಲಿ ಟೀಂ ಇಂಡಿಯಾದ ಏಕದಿನ ದಾಖಲೆ ವಿಶೇಷವಾಗಿಲ್ಲ. ನ್ಯೂಜಿಲೆಂಡ್‌ನಲ್ಲಿ ಭಾರತ ಕೊನೆಯ 5 ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಆದ್ದರಿಂದ ಧವನ್ ನೇತೃತ್ವದ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಏಕದಿನ ಸರಣಿ ಗೆದ್ದರೆ ಭಾರತ ತಂಡ ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರಲಿದೆ.


ಪಂದ್ಯದ ಪ್ರಸಾರ ಎಲ್ಲಿ?:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಹಾಗಾಗಿ 6.30ಕ್ಕೆ ಟಾಸ್ ಆಗಲಿದೆ. ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಮತ್ತು ಕೇನ್ ವಿಲಿಯಮ್ಸನ್ ಇಂದು ಆಕ್ಲೆಂಡ್‌ನಲ್ಲಿ ಈ ಏಕದಿನ ಸರಣಿಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಟ್ರೋಫಿಯೊಂದಿಗೆ ಉಭಯ ನಾಯಕರ ಫೋಟೋ ಶೂಟ್ ಮಾಡಲಾಯಿತು. ಈ ಸರಣಿಯ ನೇರಪ್ರಸಾರವು ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಪ್ರಸಾರವಾಗಲಿದೆ.


ಇದನ್ನೂ ಓದಿ: ಹರಾಜಿಗೂ ಮುನ್ನ RCB ಅಭಿಮಾನಿಗಳಿಗೆ ಬಿಗ್​ ಶಾಕ್​, ಐಪಿಎಲ್​ 2023ಕ್ಕೆ ಸ್ಟಾರ್​ ಆಟಗಾರ ಆಡೋದೇ ಡೌಟ್​?


ಭಾರತ-ಕಿವೀಸ್​ ಏಕದಿನ ತಂಡ:


ಭಾರತ ತಂಡ: ಶಿಖರ್ ಧವನ್ (ನಾಯಕ), ರಿಷಭ್ ಪಂತ್ (ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಉಮ್ರಾನ್ ಮಲಿಕ್ , ಅರ್ಶ್ದೀಪ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್.


ನ್ಯೂಜಿಲ್ಯಾಂಡ್​ ಸಂಭಾವ್ಯ ತಂಡ:  ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (WK), ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (WK), ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ.

Published by:shrikrishna bhat
First published: