ಆರಂಭದ ಪರೀಕ್ಷೆ ಮುಗಿಯಿತು, ನಿಜವಾದ ಆಟ ಈಗ ಆರಂಭ’: ಭಾರತಕ್ಕೆ ಕಿವೀಸ್ ಮಾಜಿ ಆಟಗಾರ ಚಾಲೆಂಜ್

ಸರಣಿ ಗೆಲುವಿನ ವಿದಾಯದೊಂದಿಗೆ ಆಸ್ಟ್ರೇಲಿಯಾಕ್ಕೆ ಗುಡ್​ಬೈ ಹೇಳಿರುವ ಭಾರತ ಸದ್ಯ ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದು, ಐದು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನು ಆಡಲಿದೆ.

Vinay Bhat | news18
Updated:January 20, 2019, 12:13 PM IST
ಆರಂಭದ ಪರೀಕ್ಷೆ ಮುಗಿಯಿತು, ನಿಜವಾದ ಆಟ ಈಗ ಆರಂಭ’: ಭಾರತಕ್ಕೆ ಕಿವೀಸ್ ಮಾಜಿ ಆಟಗಾರ ಚಾಲೆಂಜ್
ವಿರಾಟ್ ಕೊಹ್ಲಿ
Vinay Bhat | news18
Updated: January 20, 2019, 12:13 PM IST
ಆಸ್ಟ್ರೇಲಿಯಾ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ ಸದ್ಯ ನ್ಯೂಜಿಲೆಂಡ್ ಕಡೆ ಮುಖಮಾಡಿದೆ. ಕಾಂಗರೂಗಳ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿರುವ ಕೊಹ್ಲಿ ಪಡೆ ಟೆಸ್ಟ್​ ಹಾಗೂ ಏಕದಿನ ಸರಣಿ ಗೆದ್ದು ಬೀಗಿತ್ತು.

ಹೀಗೆ ಸರಣಿ ಗೆಲುವಿನ ವಿದಾಯದೊಂದಿಗೆ ಆಸ್ಟ್ರೇಲಿಯಾಕ್ಕೆ ಗುಡ್​ಬೈ ಹೇಳಿರುವ ಭಾರತ ಸದ್ಯ ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದು, ಐದು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನು ಆಡಲಿದೆ.

ಈ ಮಧ್ಯೆ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಟೀಂ ಇಂಡಿಯಾಕ್ಕೆ ಚಾಲೆಂಜ್ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೀಡಿದ ಪ್ರದರ್ಶನವನ್ನೆ ನೀವು ಇಲ್ಲಿ ಕೂಡ ನೀಡಿ. ಆರಂಭದ ಪರೀಕ್ಷೆ ಮುಗಿಯಿತು. ನಿಜವಾದ ಆಟ ಈಗ ಆರಂಭವಾಗಲಿದೆ ಎಂಬಂತೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಧೋನಿಯನ್ನು ಕಳೆದ 16 ತಿಂಗಳಿಂದ ಕೊಹ್ಲಿ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಗೊತ್ತಾ?

 ಜನವರಿ 23 ರಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ನೇಪಿಯರ್​​​​ನ ಮಕ್ಲೀನ್ ಪಾರ್ಕ್​​ನಲ್ಲಿ ನಡೆಯಲಿದೆ.

ಏಕದಿನ ಸರಣಿ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕೇದರ್ ಜಾಧವ್, ಎಂ ಎಸ್ ಧೋನಿ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ಶುಭ್ಮನ್ ಗಿಲ್.

ಟಿ-20 ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದರ್ ಜಾಧವ್, ಎಂ ಎಸ್ ಧೋನಿ, ಕ್ರುನಾಲ್ ಪಾಂಡ್ಯ ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್,  ಭುವನೇಶ್ವರ್ ಕುಮಾರ್, ಸಿದ್ಧಾರ್ಥ್​ ಕೌಲ್, ಖಲೀಲ್ ಅಹ್ಮದ್, ವಿಜಯ್ ಶಂಕರ್, ಶುಭ್ಮನ್ ಗಿಲ್.

First published:January 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...