ವೆಲ್ಲಿಂಗ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟಿ-20 ಪಂದ್ಯದಲ್ಲಿ ರೋಹಿತ್ ಪಡೆ ಹಿಂದೆಂದು ಕಾಣದ ರೀತಿಯಲ್ಲಿ ಸೋಲುಂಡಿದೆ. 80 ರನ್ಗಳಿಂದ ಗೆದ್ದು ಬೀಗಿದ ಕಿವೀಸ್ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಮಧ್ಯೆ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಹಿಡಿದ ಅದ್ಭುತ ಕ್ಯಾಚ್ವೊಂದು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 15ನೇ ಓವರ್ನ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಡ್ಯಾರೆಲ್ ಮಿಚೆಲ್ ಅವರು ಚೆಂಡನ್ನು ಸಿಕ್ಸ್ಗೆ ಅಟ್ಟಲು ಯತ್ನಿಸುತ್ತಾರೆ. ಆದರೆ, ಬೌಂಡರಿ ಗೆರೆ ಬಳಿ ನಿಂತಿದ್ದ ಕಾರ್ತಿಕ್ ಚೆಂಡು ಸಿಕ್ಸ್ಗೆ ಹೋಗುವುದನ್ನು ತಡೆದು ಕ್ಯಾಚ್ ಪಡೆದರು.
ಈ ಸಂದರ್ಭ ಸರಿಯಾಗಿ ಬ್ಯಾಲೆನ್ಸ್ ಸಿಗದೆ ಚೆಂಡು ಕೈಯಲ್ಲಿರುವಾಗಲೆ ಕಾರ್ತಿಕ್ ಬೌಂಡರಿ ಗೆರೆಯನ್ನು ದಾಟಲಿದ್ದರು. ಆಗ ಚೆಂಡನ್ನು ಗಾಳಿಯಲ್ಲಿ ಎಸೆದು, ಮತ್ತೆ ಡೈವ್ ಹೊಡೆದು ಅದ್ಭುತ ಕ್ಯಾಚ್ ಪಡೆದಿದ್ದಾರೆ. ಕ್ಯಾಚ್ ಹಿಡಿದ ತಕ್ಷಣ ಸ್ವತಃ ಕಾರ್ತಿಕ್ ಅವರಿಗೆ ಇದು ಔಟ್ ಅಥವಾ ನಾಟೌಟ್ ಎಂಬುದು ನಂಬಲಾಗಿಲ್ಲ. ಬಳಿಕ ಥರ್ಡ್ ಅಂಪೈರ್ ಮೊರೆಹೋಗಿ ಔಟ್ ಎಂದು ಸ್ಪಷ್ಟೀಕರಿಸಲಾಯಿತು.
ಕಾರ್ತಿಕ್ ಹಿಡಿದ ಈ ಅದ್ಭು ಕ್ಯಾಚ್ನ ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ: ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಹೀನಾಯ ಸೋಲು; ಕಿವೀಸ್ ಭರ್ಜರಿ ಶುಭಾರಂಭ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿತು. 220 ರನ್ಗಳ ಗುರಿ ಬೆನ್ನತ್ತಿದ ಭಾರತ 19.2 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 139 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿದೆ. ಈ ಮೂಲಕ 80 ರನ್ಗಳ ಜಯದೊಂದಿ ಕಿವೀಸ್ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ