ರಿಷಭ್ ಪಂತ್​ರ ಈ ವಿಭಿನ್ನ ಶಾಟ್​ಗೆ ಏನೆಂದು ಹೆಸರಿಡಬಹುದು?: ವಿಡಿಯೋ ವೈರಲ್

ರಿಷಭ್ ಪಂತ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, ವಿಭಿನ್ನ ರೀತಿಯಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಎಡಗೈ ಬ್ಯಾಟ್ಸ್​ಮನ್​ ಆಗಿರುವ ಪಂತ್ ರೈಟ್ ಹ್ಯಾಂಡ್​​ನಲ್ಲಿ ನಿಂತು ಚೆಂಡನ್ನು ಸಿಕ್ಸ್​ಗೆ ಅಟ್ಟಲು ಹೊಸ ರೀತಿಯಲ್ಲಿ ಪ್ರಯತ್ನಿಸಿದ್ದಾರೆ.

Vinay Bhat | news18
Updated:February 5, 2019, 2:30 PM IST
ರಿಷಭ್ ಪಂತ್​ರ ಈ ವಿಭಿನ್ನ ಶಾಟ್​ಗೆ ಏನೆಂದು ಹೆಸರಿಡಬಹುದು?: ವಿಡಿಯೋ ವೈರಲ್
ರಿಷಭ್ ಪಂತ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, ವಿಭಿನ್ನ ರೀತಿಯಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಎಡಗೈ ಬ್ಯಾಟ್ಸ್​ಮನ್​ ಆಗಿರುವ ಪಂತ್ ರೈಟ್ ಹ್ಯಾಂಡ್​​ನಲ್ಲಿ ನಿಂತು ಚೆಂಡನ್ನು ಸಿಕ್ಸ್​ಗೆ ಅಟ್ಟಲು ಹೊಸ ರೀತಿಯಲ್ಲಿ ಪ್ರಯತ್ನಿಸಿದ್ದಾರೆ.
  • News18
  • Last Updated: February 5, 2019, 2:30 PM IST
  • Share this:
ವೆಲ್ಲಿಂಗ್ಟನ್​​ (ಫೆ. 05): ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ವಿಶ್ರಾಂತಿ ಹೊಂದಿದ್ದ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಸದ್ಯ ಟಿ-20 ಸರಣಿಗಾಗಿ ಕಿವೀಸ್ ನಾಡಿಗೆ ಕಾಲಿಟ್ಟಿದ್ದಾರೆ. ನಾಳೆ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಿದ್ದಾರೆ.

ಅಂತೆಯೆ ರಿಷಭ್ ಪಂತ್ ಕೂಡ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, ವಿಭಿನ್ನ ರೀತಿಯಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಎಡಗೈ ಬ್ಯಾಟ್ಸ್​ಮನ್​ ಆಗಿರುವ ಪಂತ್ ರೈಟ್ ಹ್ಯಾಂಡ್​​ನಲ್ಲಿ ನಿಂತು ಚೆಂಡನ್ನು ಸಿಕ್ಸ್​ಗೆ ಅಟ್ಟಲು ಹೊಸ ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪಂತ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಹೊಡೆತವನ್ನು ಸ್ವಿಚ್ ಹಿಟ್ ಎಂದು ಹೇಳಲಾಗಿದ್ದು, ಇದಕ್ಕೂ ಮುನ್ನ ಕೆವಿನ್ ಪೀಟರ್ಸನ್ ಹಾಗೂ ಡೇವಿಡ್ ವಾರ್ನರ್ ಈ ಹೊಡೆತವನ್ನು ಪ್ರಯೋಗ ಮಾಡಿದ್ದರು. ಸದ್ಯ ಪಂತ್ ಕೂಡ ಸ್ವಿಚ್ ಹಿಟ್​​ ಶಾಟ್​​ನ್ನು ನೆಟ್​​ನಲ್ಲಿ ಅಭ್ಯಾಸ ಮಾಡುತ್ತಿದ್ದು, ನಾಳಿನ ಪಂದ್ಯದಲ್ಲಿ ಪಂತ್​ರಿಂದ ಅಮೊಘ ಹೊಡೆತಗಳನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಒದಿ: ನ್ಯೂಜಿಲ್ಯಾಂಡ್​ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ

 ಟೀಂ ಇಂಡಿಯಾ ಈಗಾಗಲೇ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4-1ರ ಮುನ್ನಡೆ ಸಾಧಿಸಿ ಸರಣಿ ಗೆದ್ದ ದಾಖಲೆ ಮಾಡಿದೆ. ಇನ್ನೆನಿದ್ದರು ಉಳಿದಿರುವ ಮೂರು ಟಿ-20 ಪಂದ್ಯಗಳ ಸರಣಿ ಮೇಲೆ ಭಾರತ ಕಣ್ಣಿಟ್ಟಿದೆ.

First published:February 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading