India vs New Zealand 3rd T20: ಟಾಸ್​ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಏಕದಿನ ಸರಣಿಯಲ್ಲಿ   1-4ರಿಂದ ಸೋತು ಭಾರೀ ಮುಖಭಂಗ ಅನುಭವಿಸಿದ್ದ ನ್ಯೂಜಿಲೆಂಡ್ ತಂಡ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಮಣ್ಣುಮುಕ್ಕಿಸಿ 80 ರನ್​ಗಳಿಂದ ಗೆದ್ದು ಬೀಗಿತ್ತು. 

zahir | news18
Updated:February 10, 2019, 1:19 PM IST
India vs New Zealand 3rd T20: ಟಾಸ್​ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ
ಸಾಂದರ್ಭಿಕ ಚಿತ್ರ
zahir | news18
Updated: February 10, 2019, 1:19 PM IST
ಹ್ಯಾಮಿಲ್ಟನ್ : ಭಾರತ ಹಾಗೂ ನ್ಯೂಜಿಲೆಂಡ್ ನಡುವಿನಅಂತಿಮ ಟಿ20 ಪಂದ್ಯ ಇಂದು ನಡೆಯಲಿದೆ. ಮೂರು ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯವು ನಿರ್ಣಾಯಕ ಪಾತ್ರವಹಿಸಲಿದೆ. ಸೆಡನ್​ ಪಾರ್ಕ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್​ ಗೆದ್ದು, ಬೌಲಿಂಗ್​ ಅನ್ನು ಆಯ್ಕೆ ಮಾಡಿಕೊಂಡಿದೆ.

ಏಕದಿನ ಸರಣಿಯಲ್ಲಿ   1-4ರಿಂದ ಸೋತು ಭಾರೀ ಮುಖಭಂಗ ಅನುಭವಿಸಿದ್ದ ನ್ಯೂಜಿಲೆಂಡ್ ತಂಡ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಮಣ್ಣುಮುಕ್ಕಿಸಿ 80 ರನ್​ಗಳಿಂದ ಗೆದ್ದು ಬೀಗಿತ್ತು. 2ನೇ ಟಿ-20 ಪಂದ್ಯದಲ್ಲಿ 7 ವಿಕೆಟ್​​ಗಳಿಂದ ಗೆದ್ದು ರೋಹಿತ್ ಪಡೆ ಮೊದಲ ಪಂದ್ಯದ ಸೋಲಿಗೆ  ಸೇಡು ತೀರಿಸಿಕೊಂಡಿತ್ತು. ಈ ಮೂಲಕ ಸರಣಿಯನ್ನು ಸಮಬಲ ಸಾಧಿಸಿದ ಉಭಯ ತಂಡಗಳು ಇಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.




ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ಕಿವೀಸ್​ ನೆಲದಲ್ಲಿ ಟಿ20 ಸರಣಿ ಗೆದ್ದ ಹೆಗ್ಗಳಿಕೆ ರೋಹಿತ್​ ಶರ್ಮಾ ಪಡೆ ಪಾಲಾಗಲಿದೆ. ಇತ್ತೀಚಿನ ವರದಿ ಬಂದಾಗ 10 ಓವರ್​ನಲ್ಲಿ ನ್ಯೂಜಿಲೆಂಡ್​ ತಂಡ 1 ವಿಕೆಟ್​ ನಷ್ಟಕ್ಕೆ 96 ರನ್​ಗಳಿಸಿದೆ.


Loading...

ಉಭಯ ತಂಡಗಳು ಇಂತಿವೆ:



ಭಾರತ
ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಮಹೇಂದ್ರ ಸಿಂಗ್‌ ಧೋನಿ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರಿಷಬ್‌ ಪಂತ್‌, ವಿಜಯ್‌ ಶಂಕರ್‌, ಕ್ರುನಾಲ್ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಾಹಲ್‌, ಖಲೀಲ್‌ ಅಹ್ಮದ್‌.

ಇದನ್ನೂ ಓದಿ: ಯಜಮಾನ vs ಮಿಠಾಯಿ ಸೂರಿ: ಖತರ್ನಾಕ್ ಖಳನಾಗಿ ಡಾಲಿ ಧನಂಜಯ್!

ನ್ಯೂಜಿಲೆಂಡ್
ಕೇನ್‌ ವಿಲಿಯಮ್ಸನ್‌ (ನಾಯಕ), ಟಿಮ್‌ ಸೀಫ‌ರ್ಟ್‌, ಕಾಲಿನ್‌ ಮುನ್ರೊ,  ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಡ್ಯಾರಿಲ್‌ ಮಿಚೆಲ್‌, ರಾಸ್‌ ಟಯ್ಲರ್‌,  ಐಶ್‌ ಸೋಧಿ, ಸ್ಕಾಟ್‌ ಕುಗೆಲೀನ್‌. ಟಿಮ್‌ ಸೌಥಿ, ಬ್ಲೇರ್‌ ಟಿಕ್ನರ್‌.

ಇದನ್ನೂ ಓದಿ: TRAILER: ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು :ಯಜಮಾನನ ಮಾಸ್​ ಎಂಟ್ರಿ


First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...