• Home
  • »
  • News
  • »
  • sports
  • »
  • India vs New Zealand: ಭಾರತ-ಕಿವೀಸ್​ 3ನೇ ಟಿ20 ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

India vs New Zealand: ಭಾರತ-ಕಿವೀಸ್​ 3ನೇ ಟಿ20 ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND sv NZ

IND sv NZ

India vs New Zealand: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಸರಣಿಯ ಮೂರನೇ T20 ಅಂತರಾಷ್ಟ್ರೀಯ ಪಂದ್ಯ ನೇಪಿಯರ್‌ನ ಮೆಕ್ಲೀನ್ ಪಾರ್ಕ್‌ನಲ್ಲಿ ನಡೆಯಲಿದೆ. ಮಂಗಳವಾರ ನೇಪಿಯರ್‌ನಲ್ಲಿ ನಡೆಯಲಿದೆ.

  • Share this:

ಟಿ20 ಸರಣಿ ಗೆಲ್ಲುವ ಉದ್ದೇಶದಿಂದ ಭಾರತ ಕ್ರಿಕೆಟ್ ತಂಡ ಮಂಗಳವಾರ ನೇಪಿಯರ್‌ನ ಮ್ಯಾಕ್ಲೀನ್ ಪಾರ್ಕ್‌ನಲ್ಲಿ (Mclean Park) ಆತಿಥೇಯ ನ್ಯೂಜಿಲೆಂಡ್ (India vs New Zealand) ವಿರುದ್ಧ ಸೆಣಸಲಿದೆ. ಸರಣಿಯ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 65 ರನ್‌ಗಳಿಂದ ಗೆದ್ದುಕೊಂಡಿದ್ದು, ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಈಗಾಗಲೇ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿದ್ದು, ಇಂದಿನ ಪಂದ್ಯ ಗೆದ್ದಲ್ಲಿ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಮೊದಲ ಸರಣಿ ಜಯ ಸಾಧಿಸಲಿದೆ. ಆದರೆ ಕಿವೀಸ್ ತಂಡಕ್ಕೆ ಇದು ಫೈಟ್ ಆರ್ ಡೈ ಎಂಬಂತಾಗಿದೆ. ಈ ಪಂದ್ಯದಿಂದ ತಂಡದ ನಿಯಮಿತ ನಾಯಕ ಕೇನ್ ವಿಲಿಯಮ್ಸನ್ (Kane Williamso) ಅವರನ್ನು ಹೊರಗಿಟ್ಟಿರುವ ಕಾರಣ ಆತಿಥೇಯರು ಭಾರಿ ಹಿನ್ನಡೆ ಅನುಭವಿಸಿದ್ದಾರೆ.


ಪಂದ್ಯದ ವಿವರ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಟಿ20 ಸರಣಿಯ 2ನೇ ಪಂದ್ಯವು ಇಂದು ನ್ಯೂಜಿಲ್ಯಾಂಡ್​ನ ನೇಪಿಯರ್‌ನ ಮ್ಯಾಕ್ಲೀನ್ ಪಾರ್ಕ್‌ನಲ್ಲಿ ನಡೆಯಲಿದೆ. ಟಿ20 ಪಂದ್ಯಗಳ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 11:30ಕ್ಕೆ ಟಾಸ್ ಮತ್ತು 12 ರಿಂದ ಪಂದ್ಯ ನಡೆಯಲಿವೆ. ಟಿ20 ಪಂದ್ಯಗಳ ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಹಾಗೂ ಪಂದ್ಯದ ನೇರಪ್ರಸಾರವನ್ನು ಡಿಡಿ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹುದು.



ಪಿಚ್​ ವರದಿ: 


ಈ ಮೈದಾನದಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 196 ರನ್ ಆಗಿದೆ. ವೇಗಿಗಳಿಗೆ ಈ ಪಿಚ್​ ಹೆಚ್ಚು ಸಹಕಾರಿಯಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ 75 ಪ್ರತಿಶತ ವಿಕೆಟ್‌ಗಳನ್ನು ವೇಗಿಗಳು ಪಡೆದಿದ್ದಾರೆ. ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯ ಲಭ್ಯವಿದ್ದರೂ, ಮೈದಾನದ ಆಯಾಮಗಳು ಅವರಿಗೆ ವಿರುದ್ಧವಾಗಿರುತ್ತವೆ. ಚೇಸಿಂಗ್ ಆದ್ಯತೆಯ ಆಯ್ಕೆಯಾಗಿರಬಹುದು, ಆಟದ ಅವಧಿಯಲ್ಲಿ ಪಿಚ್ ಹೆಚ್ಚು ಬದಲಾಗುವುದಿಲ್ಲ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.


ಇದನ್ನೂ ಓದಿ: Andre Russell: ಮೈಮೇಲೆ ಬಟ್ಟೆಯಿಲ್ಲದೇ KKR ಆಟಗಾರನ ಬೆತ್ತಲೆ ಪೋಸ್! ಯಮ್ಮೊ ಯಮ್ಮೊ ನೋಡಿದ್ವಿ ನೋಡಿದ್ವಿ ಎಂದು ಕಾಲೆಳೆದ ಫ್ಯಾನ್ಸ್!


ಎರಡೂ ತಂಡಗಳಲ್ಲಿ ಬದಲಾವಣೆ ಸಾಧ್ಯತೆ:


ಇನ್ನು, ಭಾರತ ಮತ್ತು ಕಿವೀಸ್​ 3ನೇ ಟಿ20 ಪಂದ್ಯದಲ್ಲಿ ಉಭಯ ತಂಡಗಳಲ್ಲಿ ಕೆಲ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಕಿವೀಸ್​ ತಂಡದ ನಾಯಕ ಕೇನ್​ ವಿಲಿಯಮ್ಸ್ ಅವರನ್ನು ಹೊರಗಿಟ್ಟಿದ್ದು, ಬದಲಿಗೆ ಟೀಮ್​ ಸೌಥಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಅದೇ ರೀತಿ ಭಾರತ ತಂಡದಲ್ಲಿ ಸಹ ಇಂದು ಸಂಜು ಸ್ಯಾಮ್ಸನ್​ಗೆ ಹಾಗೂ ಉಮ್ರಾನ್ ಮಲ್ಲಿಕ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ.


IND vs NZ ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (C/WK), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್​, ದೀಪಕ್ ಹೂಡ, ವಾಷಿಂಗ್ಟನ್‌ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್.


ನ್ಯೂಜಿಲ್ಯಾಂಡ್​ ಸಂಭಾವ್ಯ ಪ್ಲೇಯಿಂಗ್​ 11: ಡೆವೊನ್ ಕಾನ್ವೇ (WK), ಫಿನ್ ಅಲೆನ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಲಾಕಿ ಫರ್ಗುಸನ್, ಟಿಮ್ ಸೌಥಿ (ನಾಯಕ) ಮತ್ತು ಇಶ್ ಸೋಧಿ.

Published by:shrikrishna bhat
First published: