India vs New Zealand 3rd T20: ಗೆಲುವಿನ ಸನಿಹದಲ್ಲಿ ಮುಗ್ಗರಿಸಿದ ಭಾರತ; ಟಿ-20 ಸರಣಿ ನ್ಯೂಜಿಲೆಂಡ್​ ಪಾಲು

ಬೃಹತ್​ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಕಾಡಿತ್ತು. ಶಿಖರ್​ ಧವನ್​ ಕೇವಲ ಐದು ರನ್​ಗೆ ವಿಕೆಟ್​ ಒಪ್ಪಿಸಿದರು. ನಂತರ ರೋಹಿತ್​ ಶರ್ಮಾ ಹಾಗೂ ವಿಜಯ್​ ಶಂಕರ್​ ಜಾಗರೂಕ ಆಟವಾಡಿದರು. ರೋಹಿತ್​ (38), ವಿಜಯ್​ ಶಂಕರ್​ (43) ರನ್​ ಗಳಿಸಿ ನಿರ್ಗಮಿಸಿದರು. 

Rajesh Duggumane | news18india
Updated:February 10, 2019, 4:18 PM IST
India vs New Zealand 3rd T20: ಗೆಲುವಿನ ಸನಿಹದಲ್ಲಿ ಮುಗ್ಗರಿಸಿದ ಭಾರತ; ಟಿ-20 ಸರಣಿ ನ್ಯೂಜಿಲೆಂಡ್​ ಪಾಲು
ನ್ಯೂಜಿಲೆಂಡ್ ತಂಡ
Rajesh Duggumane | news18india
Updated: February 10, 2019, 4:18 PM IST
ಹ್ಯಾಮಿಲ್ಟನ್ (ಫೆ.10): ಇಲ್ಲಿನ ಸೆಡನ್ ಪಾರ್ಕ್‌ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್​ 4ರನ್​ಗಳ ಗೆಲುವು ಸಾಧಿಸಿತು. ಈ ಮೂಲಕ 2-1 ಅಂತರದಲ್ಲಿ ನ್ಯೂಜಿಲೆಂಡ್​ ಸರಣಿಯನ್ನು ತನ್ನದಾಗಿಸಿಕೊಂಡಿತು. 

ಟಾಸ್​ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್​ಗೆ ಇಳಿದ ಕಿವೀಸ್​ ತಂಡದ ಆರಂಭಿಕರಾರದ ಟಿಮ್ ಸೀಫ‌ರ್ಟ್‌ ಮತ್ತು ಕಾಲಿನ್‌ ಮುನ್ರೊ ಉತ್ತಮ ಅಡಿಪಾಯ ಒದಗಿಸಿಕೊಟ್ಟರು. ಮೊದಲ ವಿಕೆಟ್​ಗೆ 80 ರನ್​ಗಳ ಜೊತೆಯಾಟವಾಡಿದರು. 25 ಎಸೆತಗಳಲ್ಲಿ 43 ರನ್​ ಸಿಡಿಸಿದ ಸೀಫರ್ಟ್,​ ಕುಲ್ದೀಪ್​ ಬೌಲಿಂಗ್​ನಲ್ಲಿ ಸ್ಟಂಪ್​ ಆಗುವ ಮೂಲಕ ಹೊರ ನಡೆದರು. ಇನ್ನು 6 ಬೌಂಡರಿ ಮತ್ತು 5 ಭರ್ಜರಿ ಸಿಕ್ಸ್​ಗಳ ಮೂಲಕ ಭಾರತೀಯ ಬೌಲರ್​ಗಳನ್ನು ದಂಡಿಸಿದ ಮುನ್ರೋ 40 ಎಸೆತಗಳಲ್ಲಿ 76 ರನ್​ಗಳಿಸಿ ಕುಲ್ದೀಪ್​ ಎಸೆತದಲ್ಲಿ ಪಾಂಡ್ಯಗೆ ಕ್ಯಾಚಿತ್ತು ನಿರ್ಗಮಿಸಿದರು.

ನಾಯಕ ಕೇನ್ ವಿಲಿಯಮ್ಸನ್‌ ಅವರು 27 ರನ್​ಗಳಿಸಿ ಯುವ ಬೌಲರ್​ ಖಲೀಲ್​ ಅಹ್ಮದ್​ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 212 ರನ್​ಗಳ ಬೃಹತ್ ಮೊತ್ತವನ್ನು ನ್ಯೂಜಿಲೆಂಡ್​ ತಂಡ ಟೀಂ ಇಂಡಿಯಾ ಮುಂದಿಟ್ಟಿತ್ತು.

ಬೃಹತ್​ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಕಾಡಿತ್ತು. ಶಿಖರ್​ ಧವನ್​ ಕೇವಲ ಐದು ರನ್​ಗೆ ವಿಕೆಟ್​ ಒಪ್ಪಿಸಿದರು. ರೋಹಿತ್​ ಶರ್ಮಾ ಹಾಗೂ ವಿಜಯ್​ ಶಂಕರ್​ ಜಾಗರೂಕ ಆಟವಾಡಿದರು. ರೋಹಿತ್​ (38), ವಿಜಯ್​ ಶಂಕರ್​ (43) ರನ್​ ಗಳಿಸಿ ನಿರ್ಗಮಿಸಿದರು.

ರಿಷಭ್​ ಪಂತ್ (25)​, ಹಾರ್ದಿಕ್​ ಪಾಂಡ್ಯಾ (21), ಎಂಎಸ್​ ಧೋನಿ (2) ಅವರಿಂದ ಉತ್ತಮ ಪ್ರದರ್ಶನ ಸಿಗಲಿಲ್ಲ.  ಕೊನೆಯ ಓವರ್​ಗಳಲ್ಲಿ  ದಿನೇಶ್​ ಕಾರ್ತಿಕ್ (27)​, ಕುನಾಲ್​ ಪಾಂಡ್ಯಾ (26) ಉತ್ತಮ ಆಟವಾಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಯದಾಗಿ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 208 ರನ್​ ಕಲೆ ಹಾಕಲಷ್ಟೇ ಸಾಧ್ಯವಾಯಿತು. ಈ ಮೂಲಕ ಗೆಲುವಿನ ಸನಿಹದಲ್ಲಿ ಭಾರತ ಮುಗ್ಗರಿಸಿತು. ಕೊಲಿನ್​ ಮುನ್ರೋ ಪಂದ್ಯ ಶ್ರೇಷ್ಠ ಹಾಗೂ ಟಿಮ್​ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ