india vs new zealand 3rd t20: ನ್ಯೂಜಿಲೆಂಡ್​ ಅಬ್ಬರದ ಬ್ಯಾಟಿಂಗ್

ಮತ್ತೊಂದೆಡೆ ಕಾಲಿನ್ ಮುನ್ರೋ ಕೂಡ ಆರಂಭದಲ್ಲೇ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು. 6 ಬೌಂಡರಿ ಮತ್ತು 5 ಭರ್ಜರಿ ಸಿಕ್ಸ್​ಗಳ ಮೂಲಕ ಭಾರತೀಯ ಬೌಲರ್​ಗಳನ್ನು ದಂಡಿಸಿದರು.

zahir | news18
Updated:February 10, 2019, 1:50 PM IST
india vs new zealand 3rd t20: ನ್ಯೂಜಿಲೆಂಡ್​ ಅಬ್ಬರದ ಬ್ಯಾಟಿಂಗ್
.
zahir | news18
Updated: February 10, 2019, 1:50 PM IST
ಹ್ಯಾಮಿಲ್ಟನ್: ಇಲ್ಲಿನ ಸೆಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ ಅತ್ಯುತ್ತಮ ಆರಂಭ ಪಡೆದಿದೆ. ಟಾಸ್​ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕಿವೀಸ್ ಆರಂಭಿಕರಾದ ಟಿಮ್ ಸೀಫ‌ರ್ಟ್‌ ಮತ್ತು ಕಾಲಿನ್‌ ಮುನ್ರೊ ತಂಡಕ್ಕೆ ಉತ್ತಮ ಅಡಿಪಾಯ ಒದಗಿಸಿಕೊಟ್ಟರು.

ಸ್ಫೋಟಕ ಆರಂಭವನ್ನು ಒದಗಿಸಿದ ಟಿಮ್​ ಸೀಫರ್ಟ್​ ಕೇವಲ 25 ಎಸೆತಗಳಲ್ಲಿ 43 ರನ್​ ಸಿಡಿಸಿದರು. ಇದರಲ್ಲಿ 3 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್​ಗಳು ಒಳಗೊಂಡಿತ್ತು. ತಂಡದ ಮೊತ್ತ 80 ರನ್​ಗಳಿದ್ದಾಗ ​​ ಕುಲ್ದೀಪ್​ ಯಾದವ್​ ಅವರ ಎಸೆತವನ್ನು ಗುರುತಿಸುವಲ್ಲಿ ವಿಫಲರಾದ ಸೀಫರ್ಟ್​ರನ್ನು ಸ್ಟಪಿಂಗ್ ಮೂಲಕ ಪೆವಿಲಿಯನ್​ಗೆ ಕಳುಹಿಸುವಲ್ಲಿ ಧೋನಿ ಯಶಸ್ವಿಯಾದರು.

ಮತ್ತೊಂದೆಡೆ ಕಾಲಿನ್ ಮುನ್ರೋ ಕೂಡ ಆರಂಭದಲ್ಲೇ ಉತ್ತಮವಾಗಿ ಬ್ಯಾಟ್ ಬೀಸಿದ್ದರು. 6 ಬೌಂಡರಿ ಮತ್ತು 5 ಭರ್ಜರಿ ಸಿಕ್ಸ್​ಗಳ ಮೂಲಕ ಭಾರತೀಯ ಬೌಲರ್​ಗಳನ್ನು ದಂಡಿಸಿದರು. 40 ಎಸೆತಗಳಲ್ಲಿ 76 ರನ್​ ಬಾರಿಸಿದ ಮುನ್ರೋ ಕುಲ್ದಿಪ್​ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ನಿರ್ಗಮಿಸಿದರು.

ಈ ವೇಳೆಗೆ ನ್ಯೂಜಿಲೆಂಡ್​ ತಂಡದ ಮೊತ್ತವು  10ರ ಸರಾಸರಿಯಲ್ಲಿ 14 ಓವರ್​ಗೆ 140 ರನ್​ಗಳ ಗಡಿದಾಟಿತ್ತು. ಇನ್ನು ನಾಯಕ ಕೇನ್ ವಿಲಿಯಮ್ಸನ್‌ (27) ಅವರನ್ನು ಯುವ ಬೌಲರ್​ ಖಲೀಲ್​ ಅಹ್ಮದ್​ ಪೆವಿಲಿಯನ್​ಗಟ್ಟಿದ್ದರು. ಸದ್ಯ ಕ್ರೀಸ್​ನಲ್ಲಿ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ (3) ಮತ್ತು ಡಾರಿನ್ ಮಿಚೆಲ್(1) ಆಡುತ್ತಿದ್ದಾರೆ.

ಇತ್ತೀಚಿನ ನ್ಯೂಜಿಲೆಂಡ್​ ಸ್ಕೋರ್-158/3 (15.2 Ovs)
First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626