ಭಾರತ ಮತ್ತು ನ್ಯೂಜಿಲ್ಯಾಂಡ್ (IND vs NZ ) ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯವು ಇಂದು ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Sports City) ನಡೆಯಿತು. ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ. ಈ ಮೂಲಕ ಭಾರತ ತಂಡಕ್ಕೆ (Team India) ಸರಣಿ ಆಸೆ ಇನ್ನೂ ಜೀವಂತವಾಗಿಸಿಕೊಂಡಿದೆ. ಇನ್ನು, ಕಿವೀಸ್ ನೀಡಿದ ಅಲ್ಪಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಸಹ ಕಷ್ಟಪಟ್ಟು ಗೆಲುವನ್ನು ಸಾಧಿಸಿದೆ. ಭಾರತ ತಂಡ ನಿಗದಿತ 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 101 ರನ್ಗಳಿಸುವ ಮೂಲಕ 6 ವಿಕೆಟ್ಗಳ ಜಯ ದಾಖಲಿಸಿದೆ. ಆದರೆ ಇಂದು ಭಾರತ ಬೌಲಿಂಗ್ನಲ್ಲಿ ಮಿಂಚಿದರೂ ಬ್ಯಾಟಿಂಗ್ನಲ್ಲಿ ಮತ್ತೆ ವಿಫಲವಾಯಿತು. ಅದರಲ್ಲಿಯೂ ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ಅಂತಿಮವಾಗಿ ಗೆಲುವು ಕಂಡರು.
ನಿಧಾನಗತಿಯ ಬ್ಯಾಟಿಂಗ್ ಮಾಡಿದ ಭಾರತ:
ಇನ್ನು, ಕಿವೀಸ್ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ ನಿಧಾನಗತಿಯ ಬ್ಯಾಟಿಂಗ್ ಮಾಡಿತು. ಭಾರತ ತಂಡ ಭಾರತದ ಪರ ಶುಭ್ಮನ್ ಗಿಲ್ 11 ರನ್, ಇಶಾನ್ ಕಿಶನ್ 19 ರನ್, ರಾಹುಲ್ ತ್ರಿಪಾಠಿ 13 ರನ್, ವಾಷಿಂಗ್ಟನ್ ಸುಂದರ್ 10 ರನ್, ಸೂರ್ಯಕುಮಾರ್ ಯಾದವ್ 26 ರನ್ ಮತ್ತು ಹಾರ್ದಿಕ್ ಪಾಂಡ್ಯ 15 ರನ್ ಗಳಿಸುವ ಮೂಲಕ ಅಂತಿಮವಾಗಿ ತಂಡಕ್ಕೆ ಜಯ ತಂದುಕೊಡುವಲ್ಲಿ ಸಹಾಯಕರಾದರು.
.@surya_14kumar hits the winning runs as #TeamIndia secure a 6-wicket win in Lucknow & level the #INDvNZ T20I series 1️⃣-1️⃣
Scorecard ▶️ https://t.co/p7C0QbPSJs#INDvNZ | @mastercardindia pic.twitter.com/onXTBVc2Wu
— BCCI (@BCCI) January 29, 2023
ಅಲ್ಪಮೊತ್ತವನ್ನೂ ಸಹ ಕಿವೀಸ್ ಬೌಲರ್ಗಳು ಉತ್ತಮ ರೀತಿಯಲ್ಲಿ ಡಿಪೆನ್ಸ್ ಮಾಡಿಕೊಂಡರು. ಪಂದ್ಯವನ್ನು ಕೊನೆಯ ಎಸೆತದವರೆಗೂ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಕಿವೀಸ್ ಪರ ಇಶ್ ಸೋಧಿ ಮತ್ತು ಮೈಕೆಲ್ ಬ್ರೇಸ್ವೆಲ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: WU19 T20 WC: ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ, ಹಿಸ್ಟರಿ ರಿಪೀಟ್ ಮಾಡಿದ ವುಮೆನ್ಸ್
ರನ್ ಗಳಿಸಲು ಕಷ್ಟಪಟ್ಟ ಕಿವೀಸ್ ಪ್ಲೇಯರ್:
ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 11 ರನ್, ಡೆವೊನ್ ಕಾನ್ವೇ 11 ರನ್, ಮಾರ್ಕ್ ಚಾಪ್ಮನ್ 14 ರನ್, ಡೇರಿಲ್ ಮಿಚೆಲ್ 8 ರನ್, ಗ್ಲೆನ್ ಫಿಲಿಪ್ಸ್ 5 ರನ್, ಮಿಚೆಲ್ ಸ್ಯಾಂಟ್ನರ್ 19 ರನ್, ಮೈಕೆಲ್ ಬ್ರೇಸ್ವೆಲ್ 14 ರನ್, ಇಶ್ ಸೋಧಿ 1 ರನ್, ಲಾಕಿ ಫರ್ಗುಸನ್ ಶೂನ್ಯ ಮತ್ತು ಜಾಕೋಬ್ ಡಫಿ 6 ರನ್ ಗಳಿಸಲಷ್ಟೇ ಶಕ್ತರಾದರು. ವಿಶೆಷ ಎಂಬಂತೆ ಯಾವೊಬ್ಬ ಬ್ಯಾಟ್ಸ್ಮನ್ ಸಹ 20ರ ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ.
ಅರ್ಷದೀಪ್ ಸಿಂಗ್ ಭರ್ಜರಿ ಬೌಲಿಂಗ್:
ಇಂದಿನ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭಾರತ ತಂಡ ಉತ್ತಮ ಬೌಲಿಂಗ್ ದಾಳಿ ನಡೆಸಿತು. ಭಾರತದ ಪರ ಅರ್ಷದೀಪ್ ಸಿಂಗ್ ಇಂದು 2 ಓವರ್ ಬೌಲ್ ಮಾಡಿ ಕೇವಲ 8 ರನ್ ನೀಡುವ ಮೂಲಕ ಪ್ರಮುಖ 2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಮಾಡಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಚಹಾಲ್, ದೀಪಕ್ ಹೂಡ ಮತ್ತು ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆಯುವ ಮೂಲಕ ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ