ಭಾರತ ಮತ್ತು ನ್ಯೂಜಿಲ್ಯಾಂಡ್ (IND vs NZ ) ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯವು ಇಂದು ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Sports City) ನಡೆಯುತ್ತಿದೆ. ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂತು. ಆದರೆ ಕಿವೀಸ್ ನಾಯಕನ ನಿರ್ಧಾರವನ್ನು ಭಾರತೀಯ ಬೌಲರ್ಗಳು ತಲೆಕೆಳಗಾಗಿಸಿದರು. ಟೀಂ ಇಂಡಿಯಾ (Team India) ದಾಳಿಗೆ ಕಿವೀಸ್ ತತ್ತರಿಸಿತು. ಅಂತಿಮವಾಗಿ ನ್ಯೂಜಿಲ್ಯಾಂಡ್ ತಂಡವು ನಿಗದಿತ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 99 ರನ್ಗಳಿಸುವ ಮೂಲಕ ಭಾರತಕ್ಕೆ 100 ರನ್ಗಳ ಸುಲಭ ಟಾರ್ಗೆಟ್ ನೀಡಿದೆ. ಇನ್ನು, ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಭಾರತ ತಂಡಕ್ಕೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಅಲ್ಪ ಮೊತ್ತಕ್ಕೆ ಕುಸಿದ ಕಿವೀಸ್:
ಇನ್ನು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯಿತು. ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 11 ರನ್, ಡೆವೊನ್ ಕಾನ್ವೇ 11 ರನ್, ಮಾರ್ಕ್ ಚಾಪ್ಮನ್ 14 ರನ್, ಡೇರಿಲ್ ಮಿಚೆಲ್ 8 ರನ್, ಗ್ಲೆನ್ ಫಿಲಿಪ್ಸ್ 5 ರನ್, ಮಿಚೆಲ್ ಸ್ಯಾಂಟ್ನರ್ 19 ರನ್, ಮೈಕೆಲ್ ಬ್ರೇಸ್ವೆಲ್ 14 ರನ್, ಇಶ್ ಸೋಧಿ 1 ರನ್, ಲಾಕಿ ಫರ್ಗುಸನ್ ಶೂನ್ಯ ಮತ್ತು ಜಾಕೋಬ್ ಡಫಿ 6 ರನ್ ಗಳಿಸಲಷ್ಟೇ ಶಕ್ತರಾದರು. ವಿಶೆಷ ಎಂಬಂತೆ ಯಾವೊಬ್ಬ ಬ್ಯಾಟ್ಸ್ಮನ್ ಸಹ 20ರ ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ.
.@arshdeepsinghh scalped 2⃣ wickets & was our top performer from the first innings of the second #INDvNZ T20I 👌 👌 #TeamIndia | @mastercardindia
Here's a summary of his bowling display 🔽 pic.twitter.com/UYs6LE9VUC
— BCCI (@BCCI) January 29, 2023
ಟಾಸ್ ಸೋತರೂ ಸಹ ಭಾರತೀಯ ಬೌಲರ್ಗಳು ಇಂದು ಕಿವೀಸ್ ವಿರುದ್ಧ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಆರಂಬದಿಂದಲೂ ಕಿವೀಸ್ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಬೌಲರ್ಗಳು ಯಶಸ್ವಿಯಾದರು. ಅಲ್ಲದೇ ಈಗಾಗಲೇ ಹಾರ್ದಿಕ್ ನಾಯಕತ್ವದಲ್ಲಿ ಯಾವುದೇ ಸರಣಿಯನ್ನು ಭಾರತ ತಂಡ ಸೋತಿಲ್ಲ. ಹೀಗಾಗಿ ಹಾರ್ದಿಕ್ ಸಹ ಇಂದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಜೀವಂತಾಗಿರಲು ಪ್ರಯತ್ನಿಸಲಿದೆ.
ಇದನ್ನೂ ಓದಿ: WU19 T20 WC: ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ, ಹಿಸ್ಟರಿ ರಿಪೀಟ್ ಮಾಡಿದ ವುಮೆನ್ಸ್
ಭಾರತದ ಪರ ಅರ್ಷದೀಪ್ ಸಿಂಗ್ ಇಂದು 2 ಓವರ್ ಬೌಲ್ ಮಾಡಿ ಕೇವಲ 8 ರನ್ ನೀಡುವ ಮೂಲಕ ಪ್ರಮುಖ 2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಮಾಡಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಚಹಾಲ್, ದೀಪಕ್ ಹೂಡ ಮತ್ತು ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆಯುವ ಮೂಲಕ ಮಿಂಚಿದರು.
ಭಾರತ - ನ್ಯೂಜಿಲ್ಯಾಂಡ್ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ) ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.
ನ್ಯೂಜಿಲ್ಯಾಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ