ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ: ಗೆಲುವಿನ ಓಟ ಮುಂದುವರಿಸುವತ್ತ ಕೊಹ್ಲಿ ಪಡೆ ಚಿತ್ತ

ನೇಪಿಯರ್​​ನಲ್ಲಿ ನೆಲ ಕಚ್ಚಿದ್ದ ಆತಿಥೇಯ ನ್ಯೂಜಿಲೆಂಡ್​​ಗೆ ಮತ್ತೊಮ್ಮೆ ಶಾಕ್ ನೀಡಲು ಟೀಂ ಇಂಡಿಯಾ ಸಜ್ಜಾಗಿದೆ. ಮೌಂಟ್ ಮೌಂಗನ್ಯುಯಿಯ ಬೇ ಓವಲ್ ಮೈದಾನದಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ.

Vinay Bhat | news18
Updated:January 25, 2019, 5:32 PM IST
ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ: ಗೆಲುವಿನ ಓಟ ಮುಂದುವರಿಸುವತ್ತ ಕೊಹ್ಲಿ ಪಡೆ ಚಿತ್ತ
ಕಳೆದ ವರ್ಷ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದಾಗ ಏಕದಿನ ಸರಣಿಯಲ್ಲಿ 1-4 ಅಂತರದಿಂದ ಸೋಲುಂಡಿತ್ತು. ಮತ್ತು ಟಿ-20 ಯಲ್ಲಿ 2-1 ಅಂತರದಿಂದ ಗೆದ್ದಿತ್ತು ಎಂಬುವುದನ್ನು ಇಲ್ಲಿ ನೆನೆಯಬಹುದು.
  • News18
  • Last Updated: January 25, 2019, 5:32 PM IST
  • Share this:
ಮೌಂಟ್ ಮೌಂಗನ್ಯುಯಿ (ಜ. 25): ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ ನಾಳೆ 2ನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ್ದ ಕಿವೀಸ್ ಟೀಂ ಎದುರಾಳಿಗೆ ತಿರುಗೇಟು ನೀಡಲು ಸಿದ್ಧತೆ ಮಾಡಿಕೊಂಡಿದೆ.

ಇತ್ತ ನೇಪಿಯರ್​​ನಲ್ಲಿ ನೆಲ ಕಚ್ಚಿದ್ದ ಆತಿಥೇಯ ನ್ಯೂಜಿಲೆಂಡ್​​ಗೆ ಮತ್ತೊಮ್ಮೆ ಶಾಕ್ ನೀಡಲು ಟೀಂ ಇಂಡಿಯಾ ಸಜ್ಜಾಗಿದೆ. ಮೌಂಟ್ ಮೌಂಗನ್ಯುಯಿಯ ಬೇ ಓವಲ್ ಮೈದಾನದಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಮೊದಲ ಪಂದ್ಯದಲ್ಲೇ ಆತಿಥೇಯರನ್ನು ಕೇವಲ 38 ಓವರ್​​ಗಳಲ್ಲಿ ಆಲೌಟ್ ಮಾಡಿರುವ ಟೀಂ ಇಂಡಿಯಾದ ಆತ್ಮವಿಶ್ವಾಸ ದುಪ್ಟಟ್ಟಾಗಿದೆ.

ನ್ಯೂಜಿಲೆಂಡ್​​ಗೆ ಕಾಲಿಟ್ಟ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿರುವುದರಿಂದ ಕೊಹ್ಲಿ ಪಡೆ ಈ ಪಂದ್ಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಮೊದಲ ಮೂರು ಪಂದ್ಯಗಳಿಗೆ ಮಾತ್ರ ಕೊಹ್ಲಿ ಲಭ್ಯವಾಗಿರುವುದರಿಂದ ನೇಪಿಯರ್​​ನಲ್ಲಿ​​ಆಡಿದ ತಂಡವೇ ಬೇ ಓವಲ್ ಅಂಗಳದಲ್ಲಿಆಡುವುದು ಬಹುತೇಕ ಖಚಿತ. ಬಲಿಷ್ಠ ಬ್ಯಾಟಿಂಗ್ ಪಡೆಯೊಂದಿಗೆ ವ್ರಿಸ್ಟ್ ಸ್ಪಿನ್ನರ್​​ಗಳಾದ ಚಹಾಲ್-ಕುಲ್ದೀಪ್ ಮೋಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ: ಗೆಲುವಿಗೆ ಕೊಹ್ಲಿ ಪಡೆ ಹೀಗೆ ಮಾಡಿದ್ರೆ ಸಾಕು!

ಇತ್ತ ಕಿವೀಸ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್​​ಗೆ ತಲೆನೋವಾಗಿರುವ ವಿಷಯ ಬ್ಯಾಟ್ಸ್​​​ಮನ್​​​ಗಳ ವೈಫಲ್ಯ. ಮೊದಲ ಪಂದ್ಯದಲ್ಲಿ ಅದರಲ್ಲು ತವರಲ್ಲೇ ಕೇವಲ 157 ರನ್​​ಗಳಿಗೆ ಆಲೌಟ್ ಆಗಿರುವುದು ಭಾರೀ ಮುಜುಗರ ತಂದಿದೆ. ಟೀಂ ಇಂಡಿಯಾದ ಅವಳಿ ಸ್ಪಿನ್ನರ್ಸ್ ಎದುರಿಸುವುದು ದೊಡ್ಡ ಸವಾಲಾಗಿದೆ. ಆದರೀಗ ವಿಡಿಯೋ ತಂತ್ರಜ್ಞರ ಮೂಲಕ ವ್ರಿಸ್ಟ್ ಸ್ಪಿನ್ ಎದುರಿಸಲು ಸಜ್ಜಾಗಿರುವ ನ್ಯೂಜಿಲೆಂಡ್,  ಮಾಸ್ಟರ್ ಪ್ಲಾನ್​​ನೊಂದಿಗೆ ಕಣಕ್ಕಿಳಿಯುತ್ತಿದೆ.

ಇನ್ನು ಕಿವೀಸ್ ತಂಡದಲ್ಲಿ ಕೆಲವು ಬದಲಾವಣೆ ಆಗುವ ಸಾಧ್ಯತೆಯಿದ್ದು, ಡಗ್ ಬ್ರಾಸ್ವೆಲ್ ಬದಲು ಆಲ್ರೌಂಡರ್ ಕಾಲಿನ್ ಡಿ ಗ್ರ್ಯಾಂಡ್​​ಹೋಮ್​ಗೆ ಅವಕಾಶ ಸಿಗುವ ಅಂದಾಜಿದೆ. ಅಂತೆಯೆ ಮಿಚೆಲ್ ಸ್ಯಾಂಟ್​ನರ್​​ ಬದಲು ಲೆಗ್ ಸ್ಪಿನ್ನರ್ ಇಶ್ ಸೋಧಿ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಒಟ್ಟಿನಲ್ಲಿ ಬೇ ಓವಲ್ ಕದನ ಅಭಿಮಾನಿಗಳಲ್ಲಂತೂ ಸಾಕಷ್ಟು ಕುತೂಹಲ ಮೂಡಿಸಿದೆ.

ಪಂದ್ಯ ಆರಂಭ: ಬೆಳಗ್ಗೆ 7:30ಕ್ಕೆ
First published:January 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading