ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ 3 ಪಂದ್ಯಗಳ ಸರಣಿಯ 2ನೇ ಏಕದಿನ ಪಂದ್ಯ ಇಂದು ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Shaheed Veer Narayan Singh International Cricket Stadium, Raipur) ನಡೆಯಿತು. ಕಿವೀಸ್ ನೀಡಿದ ಅಲ್ಪಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 20.1 ಓವರ್ಗಳಿಗೆ 2 ವಿಕೆಟ್ಗೆ 111 ರನ್ಗಳಿಸುವ ಮೂಲಕ 8 ವಿಕೆಟ್ಗಳ ಜಯ ದಾಖಲಿಸಿದೆ. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಇನ್ನು 1 ಪಂದ್ಯ ಬಾಕಿ ಇರುವಂತೆಯೇ ಜಯ ದಾಖಲಿಸಿದೆ.
ಭರ್ಜರಿ ಬ್ಯಾಟಿಂಗ್ ಮಾಡಿದ ರೋಹಿತ್:
ಇನ್ನು, ಕಿವೀಸ್ ನೀಡಿದ ಸಣ್ಣ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ 20.1 ಓವರ್ಗಳಿಗೆ 2 ವಿಕೆಟ್ಗೆ 111 ರನ್ಗಳಿಸುವ ಮೂಲಕ 8 ವಿಕೆಟ್ಗಳ ಜಯ ದಾಖಲಿಸಿದೆ. ಭಾರತದ ಪರ ನಾಯಕ ರೋಹಿತ್ ಶರ್ಮಾ 50 ಎಸೆತದಲ್ಲಿ 7 ಪೋರ್ 2 ಸಿಕ್ಸ್ ಮೂಲಕ 51 ರನ್ ಗಳಿಸಿದರು. ಉಳಿದಂತೆ ಶುಭ್ಮನ್ ಗಿಲ್ 40 ರನ್, ವಿರಾಟ್ ಕೊಹ್ಲಿ 11 ರನ್ ಮತ್ತು ಇಶಾನ್ ಕಿಶನ್ 8 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Bowlers inspire India's ODI series win against New Zealand in Raipur 💪#INDvNZ | 📝 Scorecard: https://t.co/laPYXU43A1 pic.twitter.com/rmIYa6r0NM
— ICC (@ICC) January 21, 2023
ಟಾಸ್ ಗೆದ್ದು ರೋಹಿತ್ ಶರ್ಮಾ ತಪ್ಪು ನಿರ್ಧಾರ ತೆಗೆದುಕೊಂಡರು ಎಂದು ಅನೇಕ ವಿಶ್ಲೇಷಕರು ಹೇಳುತ್ತಿರುವ ನಡುವೆಯೇ ಭಾರತೀಯ ಬೌಲರ್ಗಳು ಭರ್ಜರಿ ಬೌಲಿಂಗ್ ಮಾಡಿದರು. ಭಾರತದ ಪರ ಮೊಹಮ್ಮದ್ ಶಮಿ 6 ಓವರ್ ಬಾಲ್ ಮಾಡಿ 18 ರನ್ಗೆ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು. ಜೊತೆಗೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. ಈ ಮೂಲಕ ಭಾರತ ತಂಡದ ಬೌಲರ್ಗಳು ಇಂದು ನ್ಯೂಜಿಲ್ಯಾಂಡ್ ವಿರುದ್ಧ ಸಂಘಟಿತ ದಾಳಿ ನಡೆಸಿದರು.
ಅಲ್ಪಮೊತ್ತಕ್ಕೆ ಕುಸಿದಿದ್ದ ಕಿವೀಸ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡವು ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು. ತಂಡವು ಕೇವಲ 15 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡಿತು. ಬಳಿಕ 34.3 ಓವರ್ಗಳಿಗೆ 10 ವಿಕೆಟ್ ನಷ್ಟಕ್ಕೆ 108 ರನ್ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 0 ರನ್, ಡೆವೊನ್ ಕಾನ್ವೇ 7 ರನ್, ಹೆನ್ರಿ ನಿಕೋಲ್ಸ್ 2 ರನ್, ಡೇರಿಲ್ ಮಿಚೆಲ್ 1 ರನ್, ಟಾಮ್ ಲ್ಯಾಥಮ್ 1 ರನ್, ಗ್ಲೆನ್ ಫಿಲಿಪ್ಸ್ 36 ರನ್, ಮೈಕೆಲ್ ಬ್ರೇಸ್ವೆಲ್ 22 ರನ್, ಹೆನ್ರಿ ಶಿಪ್ಲಿ 2 ರನ್, ಮಿಚೆಲ್ ಸ್ಯಾಂಟ್ನರ್ 27 ರನ್, ಲಾಕಿ ಫರ್ಗುಸನ್ 1 ರನ್ ಮತ್ತು ಬ್ಲೇರ್ ಟಿಕ್ನರ್ 2 ರನ್ ಗಳಿಸಿದರು.
ಅದ್ಭುತ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ:
ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ಇನಿಂಗ್ಸ್ ನ 10ನೇ ಓವರ್ ಬೌಲ್ ಮಾಡಿದರು. ಡೆವೊನ್ ಕಾನ್ವೆ ನಾಲ್ಕನೇ ಎಸೆತದಲ್ಲಿ ನೇರ ಶಾಟ್ ಹೊಡೆದರು. ಈ ಚೆಂಡು ಗಾಳಿಯಲ್ಲಿ ನೆಲದ ಮಟ್ಟದಲ್ಲಿ ಇರುವಾಗ ಪಾಂಡ್ಯ ಒಂದು ಕೈಯಿಂದ ಡೈವಿಂಗ್ ಮಾಡಿ ಅತ್ಯುತ್ತಮ ಕ್ಯಾಚ್ ಹಿಡಿದರು. ಕಾನ್ವೇ 16 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು. ಇದು ಕಿವೀಸ್ ತಂಡದ ನಾಲ್ಕನೇ ವಿಕೆಟ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ