ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ 3 ಪಂದ್ಯಗಳ ಸರಣಿಯ 2ನೇ ಏಕದಿನ ಪಂದ್ಯ ಇಂದು ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Shaheed Veer Narayan Singh International Cricket Stadium, Raipur) ನಡೆಯುತ್ತಿದೆ. ಟಾಸ್ ಸೋತ ನ್ಯೂಜಿಲ್ಯಾಂಡ್ (New Zealand) ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಭಾರತೀಯ ಬೌಲರ್ಗಳ ಸಂಘಟಿತ ದಾಳಿಗೆ ಕಿವೀಸ್ ಪಡೆ ತತ್ತರಿಸಿ ಹೋಯಿತು. ಈ ಮೂಲಕ ತಂಡವು 34.3 ಓವರ್ಗಳಿಗೆ 10 ವಿಕೆಟ್ ನಷ್ಟಕ್ಕೆ 108 ರನ್ಗಳಿಸುವ ಮೂಲಕ ಭಾರತಕ್ಕೆ 109 ರನ್ಗಳ ಅಲ್ಪಮೊತ್ತದ ಟಾರ್ಗೆಟ್ ನೀಡಿದೆ. ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ ಒಟ್ಟು 6 ಐಪಿಎಲ್ ಪಂದ್ಯಗಳು ನಡೆದಿವೆ.
ಪೆವಿಲಿಯನ್ ಪರೇಡ್ ನಡೆಸಿದ ಕಿವೀಸ್ ಪಡೆ:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡವು ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು. ತಂಡವು ಕೇವಲ 15 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡಿತು. ಬಳಿಕ 34.3 ಓವರ್ಗಳಿಗೆ 10 ವಿಕೆಟ್ ನಷ್ಟಕ್ಕೆ 108 ರನ್ಗಳಿಸಲಷ್ಟೇ ಶಕ್ತವಾಯಿತು.
Innings Break!
A brilliant bowling performance from #TeamIndia 👏 👏
3⃣ wickets for @MdShami11
2⃣ wickets each for @hardikpandya7 & @Sundarwashi5
1⃣ wicket each for @mdsirajofficial, @imkuldeep18 & @imShard
Scorecard ▶️ https://t.co/tdhWDoSwrZ #INDvNZ | @mastercardindia pic.twitter.com/0NHFrDbIQT
— BCCI (@BCCI) January 21, 2023
ಇದನ್ನೂ ಓದಿ: Kaviya Maran: ಐಪಿಎಲ್ ಸುಂದರಿಗೆ ಮೈದಾನದಲ್ಲಿಯೇ ಮದುವೆ ಪ್ರಪೋಸಲ್! ಓಕೆ ಅಂತಾರಾ ಕೋಟಿ ಸಂಪತ್ತಿನ ಒಡತಿ?
ಟೀಂ ಇಂಡಿಯಾ ಭರ್ಜರಿ ಬೌಲಿಂಗ್ ದಾಳಿ:
ಟಾಸ್ ಗೆದ್ದು ರೋಹಿತ್ ಶರ್ಮಾ ತಪ್ಪು ನಿರ್ಧಾರ ತೆಗೆದುಕೊಂಡರು ಎಂದು ಅನೇಕ ವಿಶ್ಲೇಷಕರು ಹೇಳುತ್ತಿರುವ ನಡುವೆಯೇ ಭಾರತೀಯ ಬೌಲರ್ಗಳು ಭರ್ಜರಿ ಬೌಲಿಂಗ್ ಮಾಡಿದರು. ಭಾರತದ ಪರ ಮೊಹಮ್ಮದ್ ಶಮಿ 6 ಓವರ್ ಬಾಲ್ ಮಾಡಿ 18 ರನ್ಗೆ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು. ಜೊತೆಗೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. ಈ ಮೂಲಕ ಭಾರತ ತಂಡದ ಬೌಲರ್ಗಳು ಇಂದು ನ್ಯೂಜಿಲ್ಯಾಂಡ್ ವಿರುದ್ಧ ಸಂಘಟಿತ ದಾಳಿ ನಡೆಸಿದರು.
ಭಾರತ-ನ್ಯೂಜಿಲ್ಯಾಂಡ್ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ನ್ಯೂಜಿಲ್ಯಾಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ