ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ: ಗೆಲುವಿಗೆ ಕೊಹ್ಲಿ ಪಡೆ ಹೀಗೆ ಮಾಡಿದ್ರೆ ಸಾಕು!

ನ್ಯೂಜಿಲೆಂಡ್​​ ಟಾಪ್ ಆರ್ಡರ್ ತುಂಬಾ ದೊಡ್ಡದಾಗಿದ್ದು, ಜೊತೆಗೆ ಬಲಿಷ್ಠವಾಗಿದೆ. ಹೀಗಾಗಿ ಹೊಸ ಬಾಲ್ ತನ್ನ ಕಳೆ ಕಳೆದುಕೊಳ್ಳುವ ಮುನ್ನ ಶಮಿ ಹಾಗೂ ಭುವಿ ಕಿವೀಸ್​ನ ಪ್ರಮುಖ ವಿಕೆಟ್ ಪಡೆಯಬೇಕು.

Vinay Bhat | news18
Updated:January 25, 2019, 3:32 PM IST
ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ: ಗೆಲುವಿಗೆ ಕೊಹ್ಲಿ ಪಡೆ ಹೀಗೆ ಮಾಡಿದ್ರೆ ಸಾಕು!
ಟೀಂ ಇಂಡಿಯಾ
  • News18
  • Last Updated: January 25, 2019, 3:32 PM IST
  • Share this:

ಮೌಂಟ್ ಮೌಂಗನ್ಯುಯಿಯ: ನೇಪಿಯರ್​ನ ಮೆಕ್​ಲೀನ್ ಪಾರ್ಕ್​​ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಕಿವೀಸ್ ನಾಡಲ್ಲಿ ಕೊಹ್ಲಿ ಪಡೆ ಶುಭಾರಂಭ ಮಾಡಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.


ಸದ್ಯ ಎರಡನೇ ಏಕದಿನ ಪಂದ್ಯಕ್ಕೆ ಉಭಯ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿದ್ದು ನಾಳಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲು ಟೀಂ ಇಂಡಿಯಾ ಗೆಲ್ಲಬೇಕಾದರೆ ಈರೀತಿ ಮಾಡಿದರೆ ಸಾಕು ಷ್ಟೆ.


ಆದಷ್ಟು ಬೇಗ ವಿಕೆಟ್ ಕಿತ್ತರೆ ಉತ್ತಮಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ನ ಓಪನರ್​ಗಳಾದ ಕಾಲಿನ್ ಮುನ್ರೊ ಹಾಗೂ ಗಪ್ಟಿಲ್ ಬೇಗನೆ ಔಟ್ ಆಗಿದ್ದು, ತಂಡಕ್ಕೆ ದೊದ್ದ ಹೊಡೆತ ಬಿಂದಂತಾಯಿತು. ಹೊಸ ಬಾಲ್​​​ನಲ್ಲಿ ಶಮಿ ಎಸೆದ ಬೆಂಕಿಯ ಚೆಂಡಿಗೆ ಇಬ್ಬರು ಬೇಗನೆ ಪೆವಿಲಿಯನ್ ಹಾದಿ ಹಿಡಿದರು. ನ್ಯೂಜಿಲೆಂಡ್​​ ಟಾಪ್ ಆರ್ಡರ್ ತುಂಬಾ ದೊಡ್ಡದಾಗಿದ್ದು, ಜೊತೆಗೆ ಬಲಿಷ್ಠವಾಗಿದೆ. ಹೀಗಾಗಿ ಹೊಸ ಬಾಲ್ ತನ್ನ ಕಳೆ ಕಳೆದುಕೊಳ್ಳುವ ಮುನ್ನ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಮ್ಯಾಜಿಕ್​​ನಿಂದ ಕಿವೀಸ್​ನ ಪ್ರಮುಖ ವಿಕೆಟ್ ಪಡೆಯಬೇಕು.


ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್​​ನ ನಂಬರ್ 1 ತಂಡ ಕೇವಲ 77 ರನ್​ಗೆ ಆಲೌಟ್

ಭಾರತದ ಸ್ಪಿನ್ ಮ್ಯಾಜಿಕ್


ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಮೊದಲ ಪಂದ್ಯದ ನಿಜವಾದ ಹೀರೋಗಳು. ಅದರಲ್ಲು ಚಹಾಲ್ ಪ್ರಮುಖವಾದ ಎರಡು ವಿಕೆಟ್ ಕಿತ್ತಿದ್ದು ತಂಡದ ಗತಿಯನ್ನೆ ಬದಲಿಸಿತು. ಈ ಇಬ್ಬರು ವಿಕೆಟ್ ಟೇಕಿಂಗ್ ಬೌಲರ್ಸ್​​ಗಳು ಪ್ರತಿ ಪಂದ್ಯದಲ್ಲಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅದರಂತೆ ನಾಳೆಯು ತಮ್ಮ ಸ್ಪಿನ್ ತಂತ್ರ ತೋರಿಸಿದರೆ ಎದುರಾಳಿ ಮತ್ತೊಮ್ಮೆ ಪೆವಿಲಿಯನ್ ಹಾದಿ ಹಿಡಿಯುವುದು ಖಚಿತ.

ಇದನ್ನೂ ಓದಿ: ಐಪಿಎಲ್ 2019: ಇದೆ ಮೊದಲ ಬಾರಿ ಐಪಿಎಲ್​ನಲ್ಲಿ ಮಿಂಚಲಿದ್ದಾರೆ ಈ ಸ್ಟಾರ್ ಆಟಗಾರರು

ಹೊಸ ಚೆಂಡನ್ನು ಎದುರಿಸುವಾಗ ಎಚ್ಚರ


ಮೊದಲ ಏಕದಿನ ಪಂದ್ಯದಲ್ಲಿ 158 ರನ್​​​ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲಿ ರನ್ ಕಲಹಾಕಲು ಪರದಾಡಿತು. ನಾಳಿನ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡುವುದಾದರೆ ಎಚ್ಚರಿಕೆಯಿಂದ ಆಡಬೇಕಿದೆ. ಸ್ಟಾರ್ ಬೌಲರ್​ಗಳಾದ ಟ್ರೆಂಟ್ ಬೌಲ್ಟ್​ ಹಾಗೂ ಟಿಮ್ ಸೌಧಿ ಅವರು ಹೊಸ ಬಾಲ್​​ನಲ್ಲಿ ಸ್ವಿಂಗ್ ಮೂಲಕ ಭಾರತಕ್ಕೆ ಮಾರಕವಾಗಿ ಪರಿಣಮಿಸುವುದು ಕಂಡಿತ. ಹೀಗಾಗಿ ಓಪನರ್​​​ಗಳು ಸಮಯೋಚಿತ ಆಟ ಪ್ರದರ್ಶಿಸಿದರೆ ದೊಡ್ಡ ಮೊತ್ತ ಕಲೆಹಾಕಬಹುದು.


 
First published:January 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading