ಮೌಂಟ್ ಮೌಂಗನ್ಯುಯಿ: ನೇಪಿಯರ್ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ 2ನೇ ಏಕದಿನ ಪಂದ್ಯವನ್ನೂ ಸುಲಭವಾಗಿಯೆ ಗೆದ್ದುಕೊಂಡಿದೆ. ತವರಿನ ಅಂಗಳದಲ್ಲೇ ಸತತ 2ನೇ ಪಂದ್ಯದಲ್ಲಿ ನೆಲಕಚ್ಚಿದ ಕಿವೀಸ್ ಟೀಂ, ಭಾರೀ ಮುಜುಗರ ಎದುರಿಸಿದೆ.
ಬೇ ಓವಲ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಅಬ್ಬರಕ್ಕೆ ನ್ಯೂಜಿಲೆಂಡ್ ತಂಡ ಬೆವರಿಹೋಯಿತು. 50 ಓವರ್ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 324 ರನ್ ಬಾರಿಸಿದ ಕೊಹ್ಲಿ ಪಡೆ ಸವಾಲಿನ ಮೊತ್ತ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಟೀಂ ಮತ್ತದೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಬಾರಿ ನ್ಯೂಜಿಲೆಂಡ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಕೂಡ ಆಧಾರವಾಗಲಿಲ್ಲ. ರಾಸ್ ಟೇಲರ್ ಅಂತು, ಧೋನಿಯ ಅದ್ಭುತ ಸ್ಟಂಪಿಂಗ್ಗೆ ಬಲಿಯಾದರು. ಅಂತಿಮವಾಗಿ ನ್ಯೂಜಿಲೆಂಡ್ 234 ರನ್ಗೆ ಆಲೌಟ್ ಆಗುವ ಮೂಲಕ ನೆಲಕಚ್ಚಿತು. 90 ರನ್ಗಳಿಂದ ಗೆದ್ದು ಬೀಗಿದ ಭಾರತ, 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಭಾರತೀಯರು: ಸರಣಿಯಲ್ಲಿ 2-0 ಮುನ್ನಡೆ
ಪಂದ್ಯದ ಸಂಪೂರ್ಣ ಹೈಲೈಟ್ಸ್ ಇಲ್ಲಿದೆ ನೋಡಿ:
ಧೋನಿಯ ಅದ್ಭುತ ಸ್ಟಂಪಿಂಗ್:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ