• Home
  • »
  • News
  • »
  • sports
  • »
  • IND vs NZ 1st T20: ಕಿವೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬದಲು ಈ ಆಟಗಾರರಿಗೆ ಸಿಗಬಹುದು ಚಾನ್ಸ್? ಲಿಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

IND vs NZ 1st T20: ಕಿವೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬದಲು ಈ ಆಟಗಾರರಿಗೆ ಸಿಗಬಹುದು ಚಾನ್ಸ್? ಲಿಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs NZ 1st T20: ಟೀಂ ಇಂಡಿಯಾ ಇಂದಿನಿಂದ ನ್ಯೂಜಿಲೆಂಡ್ ವಿರುದ್ಧ T20 ಸರಣಿಯನ್ನು ಪ್ರಾರಂಭಿಸಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ವಿರಾಟ್ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು 3 ಆಟಗಾರರು ತಂಡದ ಆಡಳಿತದ ಮೊದಲ ಆಯ್ಕೆಯಾಗಬಹುದು.

ಮುಂದೆ ಓದಿ ...
  • Share this:

ಟಿ20 ವಿಶ್ವಕಪ್ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಟೀಂ ಇಂಡಿಯಾವು ನ್ಯೂಜಿಲ್ಯಾಂಡ್ (IND vs NZ)​ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡಲು ಸಿದ್ಧವಾಗಿದೆ. ಇಂದಿನಿಂದ ಸರಣಿ ಆರಂಭವಾಗಲಿದೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಈ ಸರಣಿಯ ಭಾಗವಾಗುವುದಿಲ್ಲ. ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಿರುವಾಗ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಅವರ ಸ್ಥಾನದಲ್ಲಿ ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ . 2022 ರ ಟಿ 20 ವಿಶ್ವಕಪ್‌ನಲ್ಲಿ (T20 World Cup) ಅದ್ಭುತ ಬ್ಯಾಟಿಂಗ್ ಮಾಡುವಾಗ, ಕೊಹ್ಲಿ ನಾಲ್ಕು ಅರ್ಧ ಶತಕಗಳ ಸಹಾಯದಿಂದ 296 ರನ್ ಗಳಿಸಿದ್ದರು.


ಕೊಹ್ಲಿ ಸ್ಥಾನಕ್ಕೆ ಯಾರು?:


ಸಂಜು ಸ್ಯಾಮ್ಸನ್: ಟೀಮ್ ಇಂಡಿಯಾದ ಅತ್ಯುತ್ತಮ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಆರಂಭಿಕ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಅವರು ಯಾವುದೇ ಸಂಖ್ಯೆಯಲ್ಲಾದರೂ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಇತ್ತೀಚೆಗೆ, ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ‘ಎ’ ವಿರುದ್ಧದ ಏಕದಿನ ಸರಣಿಯನ್ನೂ ಗೆದ್ದಿದ್ದರು. ಅಲ್ಲಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದೀಗ ನಾಲ್ಕನೇ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಮೊದಲ ಆಯ್ಕೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು.


ಶ್ರೇಯಸ್ ಅಯ್ಯರ್: ವಿರಾಟ್ ಕೊಹ್ಲಿ ಬದಲಿಗೆ ಶ್ರೇಯಸ್ ಅಯ್ಯರ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ, ಶ್ರೀಲಂಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಸತತ ಮೂರು ಅರ್ಧಶತಕಗಳನ್ನು ಗಳಿಸಿದರು. ಅಯ್ಯರ್ ಟಿ20 ವಿಶ್ವಕಪ್‌ನಲ್ಲಿ ಸ್ಟ್ಯಾಂಡ್‌ಬೈ ಆಟಗಾರನಾಗಿ ಪಾಲ್ಗೊಂಡಿದ್ದರು. 2024 ರ ವಿಶ್ವಕಪ್‌ಗಾಗಿ, ತಂಡದ ಮ್ಯಾನೇಜ್‌ಮೆಂಟ್ ಅವರನ್ನು 3 ನೇ ಸ್ಥಾನದಲ್ಲಿ ಆಡಿಸುವ ಮೂಲಕ ದೀರ್ಘಕಾಲಾವದಿಯಲ್ಲಿ ಪ್ರಯತ್ನಿಸಬಹುದು.


ಇದನ್ನೂ ಓದಿ: SuryaKumar Yadav: ಮತ್ತೊಂದು ಇತಿಹಾಸ ನಿರ್ಮಿಸುತ್ತಾರಾ ಸೂರ್ಯಕುಮಾರ್ ಯಾದವ್? ಕಿವೀಸ್​ ವಿರುದ್ಧ ಅಬ್ಬರಿಸಿದ್ರೆ ರಿಜ್ವಾನ್ ದಾಖಲೆ ಉಡೀಸ್​!


ದೀಪಕ್ ಹೂಡಾ: ದೀಪಕ್ ಹೂಡಾ ಕೂಡ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನೆಚ್ಚಿನ ಆಟಗಾರನಾಗಬಹುದು. ಅವರು ಐರ್ಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಶತಕ ಗಳಿಸಿದರು. ಆದರೆ, ಟಿ20 ಮಾದರಿಯಲ್ಲಿ ಅವರು ಸ್ಥಿರವಾಗಿಲ್ಲ. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿದ್ದಾರೆ.


ಪಂದ್ಯದ ವಿವರ: 


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಸರಣಿಯ ಮೊದಲ ಪಂದ್ಯವು ಇಂದು ನ್ಯೂಜಿಲ್ಯಾಂಡ್​ನ ವೆಲ್ಲಿಂಗ್ಟನ್​ನಲ್ಲಿ ನಡೆಯಲಿದೆ. ಟಿ20 ಪಂದ್ಯಗಳ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 12 ರಿಂದ ನಡೆಯಲಿವೆ. ಟಿ20 ಪಂದ್ಯಗಳ ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಹಾಗೂ ಪಂದ್ಯದ ನೇರಪ್ರಸಾರವನ್ನು ಡಿಡಿ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹುದು.


IND vs NZ ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಮತ್ತು ಯುಜ್ವೇಂದ್ರ ಚಾಹಲ್.


ನ್ಯೂಜಿಲ್ಯಾಂಡ್​ ಸಂಭಾವ್ಯ ಪ್ಲೇಯಿಂಗ್​ 11: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಲೂಕಿ ಫರ್ಗುಸನ್, ಟಿಮ್ ಸೌಥಿ ಮತ್ತು ಇಶ್ ಸೋಧಿ.

Published by:shrikrishna bhat
First published: