• Home
  • »
  • News
  • »
  • sports
  • »
  • IND vs NZ 2022: ಭಾರತ-ನ್ಯೂಜಿಲ್ಯಾಂಡ್​ ಪಂದ್ಯಕ್ಕೆ ಮಳೆ? ಇಲ್ಲಿದೆ ವೆಲ್ಲಿಂಗ್ಟನ್‌ ವೆದರ್ ರಿಪೋರ್ಟ್

IND vs NZ 2022: ಭಾರತ-ನ್ಯೂಜಿಲ್ಯಾಂಡ್​ ಪಂದ್ಯಕ್ಕೆ ಮಳೆ? ಇಲ್ಲಿದೆ ವೆಲ್ಲಿಂಗ್ಟನ್‌ ವೆದರ್ ರಿಪೋರ್ಟ್

IND vs NZ

IND vs NZ

IND vs NZ 2022: ನ್ಯೂಜಿಲೆಂಡ್ ಪ್ರವಾಸದ ಮೊದಲ T20 ಪಂದ್ಯವು ವೆಲ್ಲಿಂಗ್ಟನ್‌ನಲ್ಲಿ ನವೆಂಬರ್ 18 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಮಳೆ ವಿಲನ್ ಆಗಬಹುದು. ಏಕೆಂದರೆ ಸ್ಥಳೀಯ ಹವಾಮಾನ ಇಲಾಖೆಯು ವೆಲ್ಲಿಂಗ್ಟನ್‌ನಲ್ಲಿ ಮಳೆಯ ಮುನ್ಸೂಚನೆ ನೀಡಿದೆ.

  • Share this:

ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ (IND vs NZ 2022) ಸಂಪೂರ್ಣ ಸಜ್ಜಾಗಿದೆ. ಈ ಪ್ರವಾಸದ ಮೊದಲ ಪಂದ್ಯ ನಾಳೆ (ನವೆಂಬರ್ 18) ನಡೆಯಲಿದೆ. ಈ ಪಂದ್ಯದ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಆದರೆ ಈ ಮೊದಲ ಪಂದ್ಯದಕ್ಕೆ ಮಳೆಯ ಕಾಟ ಹೆಚ್ಚಿದೆ. ವೆಲ್ಲಿಂಗ್ಟನ್​ನಲ್ಲಿ (Wellington) ಪಂದ್ಯ ನಡೆಯಲಿದ್ದು, ಗುರುವಾರ (ಇಂದು) ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಬೆಳಗ್ಗೆ ಮಳೆ ಸುರಿದಿದ್ದು, ಮೋಡ ಕವಿದ ವಾತಾವರಣವಿತ್ತು. ಹೀಗಿರುವಾಗ ಪಂದ್ಯದ ದಿನ ಮಳೆ (Rain) ವಿಲನ್ ಆಗಬಹುದು ಎಂಬ ನಂಬಿಕೆ ಇದೆ. ಏಕೆಂದರೆ ನವೆಂಬರ್ 18 ರಂದು ವೆಲ್ಲಿಂಗ್ಟನ್‌ನಲ್ಲಿಯೂ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಹೀಗಾಗಿ ಟಿ20 ವಿಶ್ವಕಪ್​ (T20 World Cup)​ ಬಳಿಕ ನಡೆಯುತ್ತಿರುವ ಭಾರತದ ಮೊದಲ ಪಂದ್ಯಕ್ಕೆ ವರುಣನ ಅವಕೃಪೆ ಇದ್ದಂತೆ ಕಾಣುತ್ತಿದೆ.


ಹೇಗಿದೆ ವೆಲ್ಲಿಂಗ್ಟನ್‌ ವೆದರ್ ರಿಪೋರ್ಟ್​?:


ವೆಲ್ಲಿಂಗ್ಟನ್ ಹವಾಮಾನ ಇಲಾಖೆಯ ವರದಿಯ ಪ್ರಕಾರ, ನವೆಂಬರ್ 18 ರಂದು ಅಂದರೆ ನಾಳೆ ವೆಲ್ಲಿಂಗ್ಟನ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸುಮಾರು ಶೇ.22ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ರಾತ್ರಿ 10ರ ವೇಳೆಗೆ ಮಳೆ ಸಾಧ್ಯತೆ ಶೇ.76ಕ್ಕೆ ಏರಿಕೆಯಾಗಲಿದೆ. 12ರ ನಂತರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅದೇ ಸಮಯದಲ್ಲಿ, ಗಾಳಿಯು 10-15 ಕಿಮೀ ವೇಗದಲ್ಲಿ ಬೀಸುತ್ತದೆ ಮತ್ತು ತೇವಾಂಶವು 52 ಪ್ರತಿಶತದವರೆಗೆ ಇರುತ್ತದೆ. ತಾಪಮಾನವು 20 ಡಿಗ್ರಿಗಳಷ್ಟು ಇರುತ್ತದೆ, ಅಂದರೆ ಮಳೆ, ಬಲವಾದ ಗಾಳಿ ಜೊತೆಗೆ ಚಳಿ ಇರುತ್ತದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಒಂದು ವೇಳೆ ಮಳೆ ಬಂದರೆ ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆ ಇದೆ.


ನ್ಯೂಜಿಲ್ಯಾಂಡ್​ ಪ್ರವಾಸದ ವೇಳಾಪಟ್ಟಿ:


ಈ ಪ್ರವಾಸದಲ್ಲಿ ಭಾರತವು ಮೂರು T20 ಪಂದ್ಯಗಳು ಮತ್ತು ಮೂರು ODI ಪಂದ್ಯಗಳನ್ನು ಆಡಲಿದೆ. ಟಿ20 ಸರಣಿಗಾಗಿ ಟೀಂ ಇಂಡಿಯಾದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಕೈಗೆ ನೀಡಲಾಗಿದೆ. ಆದರೆ, ಶಿಖರ್ ಧವನ್ ಏಕದಿನ ತಂಡದ ನಾಯಕತ್ವ ವಹಿಸಲಿದ್ದಾರೆ.


ಇದನ್ನೂ ಓದಿ: IND vs NZ: ಈ ಮೂವರು ಕಿವೀಸ್ ವಿರುದ್ಧ ಅಬ್ಬರಿಸಲೇ ಬೇಕು; ಆಡಿದ್ರೆ ಪಾಸ್, ಇಲ್ಲಾಂದ್ರೆ ಟೀಂ ಇಂಡಿಯಾದಿಂದ ಗೇಟ್‌ಪಾಸ್!


ಮೊದಲ ಟಿ20 ಪಂದ್ಯ - ನವೆಂಬರ್ 18 - ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂ
ಎರಡನೇ ಟಿ20 ಪಂದ್ಯ - ನವೆಂಬರ್ 20 - ಬೇ ಓವಲ್ ಮೌಂಟ್ ಮೌಂಗನುಯಿ
ಮೂರನೇ ಟಿ20 ಪಂದ್ಯ - ನವೆಂಬರ್ 22 - ಮೆಕ್ಲೀನ್ ಪಾರ್ಕ್, ಸ್ಕೈ ಸ್ಟೇಡಿಯಂ


ಮೊದಲ ODI - 25 ನವೆಂಬರ್ - ಈಡನ್ ಪಾರ್ಕ್, ಆಕ್ಲೆಂಡ್
ಎರಡನೇ ODI - ನವೆಂಬರ್ 27 - ಸೆಡನ್ ಪಾರ್ಕ್, ಹ್ಯಾಮಿಲ್ಟನ್
ಮೂರನೇ ODI - 30 ನವೆಂಬರ್ - ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್


IND vs NZ ಟಿ20 ತಂಡಗಳು:


ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಸಿಂಗ್ ಯಾದವ್ , ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.


ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ಸಿ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್.

Published by:shrikrishna bhat
First published: