• Home
  • »
  • News
  • »
  • sports
  • »
  • IND vs NZ: ಮಳೆಯಿಂದಾಗಿ ಭಾರತ-ನ್ಯೂಜಿಲ್ಯಾಂಡ್​ ಮೊದಲ ಪಂದ್ಯ ರದ್ದು

IND vs NZ: ಮಳೆಯಿಂದಾಗಿ ಭಾರತ-ನ್ಯೂಜಿಲ್ಯಾಂಡ್​ ಮೊದಲ ಪಂದ್ಯ ರದ್ದು

IND vs NZ

IND vs NZ

IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ T20I ಸರಣಿ ಇಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಿತ್ತು. ಆದರೆ ಈ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಸಂಪೂರ್ಣ ರದ್ದಾಗಿದೆ.

  • Share this:

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ಆಗಮಿಸಿದ ಟೀಂ ಇಂಡಿಯಾ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ನಿರಾಸೆಯ ದಿನವಾಗಿತ್ತು. ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಟಿ20 ಸರಣಿ ಇಂದಿನಿಂದ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಿತ್ತು. ಆದರೆ ಈ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ (Rain) ಸಂಪೂರ್ಣ ರದ್ದಾಗಿದೆ. IST ಮಧ್ಯಾಹ್ನ 12 ಗಂಟೆಗೆ ಪಂದ್ಯ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಭಾರೀ ಮಳೆಯಿಂದಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿಲ್ಲ. ಇದಾದ ಬಳಿಕ ನಿಗದಿತ ಸಮಯ ಕಳೆದರೂ ಮಳೆ ನಿಲ್ಲುವ ಲಕ್ಷಣ ಕಾಣದ ಕಾರಣ ಅಂಪೈರ್‌ಗಳು ಮೊದಲ ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಿದರು.


ಮಳೆಯಿಂದ ಪಂದ್ಯ ರದ್ದು:


ಇನ್ನು, ಇಂದು ಬೆಳಗ್ಗೆಯಿಂದಲೇ ವೆಲ್ಲಿಂಗ್‌ಟನ್‌ನಲ್ಲಿ ಮಳೆ ಹೆಚ್ಚಿದ್ದ ಕಾರಣ ಪಂದ್ಯದ ಟಾಸ್​ ಸಹ ಮೊದಲು ವಿಳಂಬ ಮಾಡಲಾಯಿತು. ಹೀಗಾಗಿ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಕೊನೆಗೆ ಅದು ನಿಜವಾಯಿತು. ಮಳೆಯ ಆರ್ಭಟ ಜೋರಾಗಿದ್ದು, ಉಭಯ ತಂಡದ ಆಟಗಾರರು ಕೂಡ ಡ್ರೆಸ್ಸಿಂಗ್ ಕೊಠಡಿಯಿಂದ ಹೊರಗೆ ಬರಲಿಲ್ಲ. ಕೆಲವು ಆಟಗಾರರು ಒಳಾಂಗಣದಲ್ಲಿ ಫುಟ್ಬಾಲ್-ವಾಲಿಬಾಲ್ ಅನ್ನು ಆನಂದಿಸಿದರು. ಏತನ್ಮಧ್ಯೆ, ಈ ಸರಣಿಯ ಉಳಿದ ಎರಡು ಪಂದ್ಯಗಳು ನವೆಂಬರ್ 20 ಮತ್ತು 22 ರಂದು ನಡೆಯಲಿವೆ.



ಉಳಿದ ಟಿ20 ಪಂದ್ಯಗಳ ವೇಳಾಪಟ್ಟಿ:


ಎರಡನೇ ಟಿ20 ಪಂದ್ಯ - ನವೆಂಬರ್ 20 - ಬೇ ಓವಲ್ ಮೌಂಟ್ ಮೌಂಗನುಯಿ
ಮೂರನೇ ಟಿ20 ಪಂದ್ಯ - ನವೆಂಬರ್ 22 - ಮೆಕ್ಲೀನ್ ಪಾರ್ಕ್, ಸ್ಕೈ ಸ್ಟೇಡಿಯಂ


ಮೊದಲ ODI - 25 ನವೆಂಬರ್ - ಈಡನ್ ಪಾರ್ಕ್, ಆಕ್ಲೆಂಡ್
ಎರಡನೇ ODI - ನವೆಂಬರ್ 27 - ಸೆಡನ್ ಪಾರ್ಕ್, ಹ್ಯಾಮಿಲ್ಟನ್
ಮೂರನೇ ODI - 30 ನವೆಂಬರ್ - ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್


ಇದನ್ನೂ ಓದಿ: Team India: ಟಿ20 ನಾಯಕತ್ವದಿಂದ ರೋಹಿತ್ ನಿವೃತ್ತಿ? ಆ ಆಲ್​ರೌಂಡರ್​ಗೆ ಕ್ಯಾಪ್ಟನ್ಸಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್!?


ಪುಟ್​ಬಾಲ್​ ಆಡಿದ ಆಟಗಾರರು:


ಇನ್ನು, ಟೀಂ ಇಂಡಿಯಾ ಮತ್ತು ಕಿವೀಸ್​ ಆಟಗಾರರು ಇಂದು ಮಳೆಯ ಕಾರಣ ಮೈದಾನಕ್ಕೆ ಇಳಿಯಲಿಲ್ಲ. ಇದರಿಂದ ಆಟಗಾರರು ಒಳಾಂಗಣದಲ್ಲಿಯೇ ಫುಟ್​ಬಾಲ್​ ಆಡುವ ಮೂಲಕ ಟೈಂ ಪಾಸ್​ ಮಾಡಿದರು. ಅದರ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.



IND vs NZ ಟಿ20 ತಂಡಗಳು:


ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಸಿಂಗ್ ಯಾದವ್ , ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.


ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ಸಿ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್.

Published by:shrikrishna bhat
First published: