• Home
  • »
  • News
  • »
  • sports
  • »
  • India vs New Zealand: ನಾಳೆ ಭಾರತ-ಕಿವೀಸ್​ ಮೊದಲ ಟಿ20 ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

India vs New Zealand: ನಾಳೆ ಭಾರತ-ಕಿವೀಸ್​ ಮೊದಲ ಟಿ20 ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs NZ

IND vs NZ

IND vs NZ 2022: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಲುಪಿದೆ. ಮೂರು ಟಿ20 ಪಂದ್ಯಗಳ ಸರಣಿಯ ಹೊರತಾಗಿ ಭಾರತ ತಂಡ ಇಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ನಾಳೆ ಮೊದಲ ಟಿ20 ಪಂದ್ಯ ನಡೆಯಲಿದೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ನಾಳೆಯಿಂದ (ನವೆಂಬರ್ 18) ಆರಂಭವಾಗಲಿದೆ. ಈಗಾಗಲೇ ಭಾರತ ತಂಡ ನ್ಯೂಜಿಲೆಂಡ್ (IND vs NZ) ತಲುಪಿದೆ. ಟಿ20 ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ (Wellington) ನಡೆಯಲಿದೆ. ಭಾರತ ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಈ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಇವರಲ್ಲದೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ (Virat Kohli) ಮತ್ತು ಕೆಎಲ್ ರಾಹುಲ್ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಟಿ20 ವಿಶ್ವಕಪ್​ ನಂತರ ಉಭಯ ತಂಡಗಳಿಗೆ ಇದು ಮೊದಲ ಸರಣಿಯಾಗಿದೆ.


ಪಂದ್ಯದ ವಿವರ: 


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ T20I ಸರಣಿಯ ಪಂದ್ಯವು ನಾಳೆ ನ್ಯೂಜಿಲ್ಯಾಂಡ್​ನ ವೆಲ್ಲಿಂಗ್ಟನ್​ನಲ್ಲಿ ನಡೆಯಲಿದೆ. ಟಿ20 ಪಂದ್ಯಗಳ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 12 ರಿಂದ ನಡೆಯಲಿವೆ. T20 ಪಂದ್ಯಗಳ ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಹಾಗೂ ಪಂದ್ಯದ ನೇರಪ್ರಸಾರವನ್ನು ಡಿಡಿ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹುದು.ಪಿಚ್​ ವರದಿ:


ಇನ್ನು, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯವು ವೆಲ್ಲಿಂಗ್ಟನ್​ನಲ್ಲಿ ನಡೆಯಲಿದೆ. ಈ ಪಿಚ್ ಕಳೆದ ಮೂರು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸುಮಾರು 160 ರ ಸರಾಸರಿ ಸ್ಕೋರ್‌ನೊಂದಿಗೆ ಬ್ಯಾಟರ್‌ಗಳಿಗೆ ಸಹಾಯ ಮಾಡಿದೆ. ಮೇಲಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಮೊದಲು ಬ್ಯಾಟ್ ಮಾಡುವ ತಂಡವು ಮೇಲುಗೈ ಸಾಧಿಸಿದೆ ಮತ್ತು ಈ ಆಟದಲ್ಲಿಯೂ ಸಹ ಅದನ್ನು ನಿರೀಕ್ಷಿಸಬಹುದು. ಕಳೆದ ಮೂರು ಪಂದ್ಯಗಳಲ್ಲಿ ಶೇಕಡಾ 60ರಷ್ಟು ವಿಕೆಟ್‌ಗಳನ್ನು ಪಡೆದಿರುವುದು ಸ್ಪಿನ್ನರ್‌ಗಳು ಎನ್ನುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಭಾರತ-ಕಿವೀಸ್​ ಹೆಡ್​ ಟು ಹೆಡ್​:


ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಆಡಿದ 21 T20 ಪಂದ್ಯಗಳಲ್ಲಿ, ಎರಡೂ ತಂಡಗಳು ಸಮಾನ ಸಂಖ್ಯೆಯ ಪಂದ್ಯಗಳನ್ನು ಗೆದ್ದಿವೆ. ಉಭಯ ತಂಡಗಳು 9 ಪಂದ್ಯಗಳನ್ನು ಗೆದ್ದಿದ್ದು, ಎರಡು ಪಂದ್ಯಗಳು ಟೈ ಆಗಿವೆ ಮತ್ತು ಒಂದು ಪಂದ್ಯವನ್ನು ಕೈಬಿಡಲಾಗಿದೆ.


ಇದನ್ನೂ ಓದಿ: RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​, ಐಪಿಎಲ್​ 2023ಕ್ಕೆ ಸ್ಟಾರ್​ ಆಲ್​ರೌಂಡರ್​ ತಂಡಕ್ಕೆ ಕಂಬ್ಯಾಕ್​!


ಇನ್ನು, ಟೀಮ್ ಇಂಡಿಯಾ ಕೊನೆಯ ಬಾರಿಗೆ T20I ಸರಣಿಗಾಗಿ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಾಗ,  ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ 5-0 ಕ್ಲೀನ್ ಸ್ವೀಪ್ ಅನ್ನು ಮಾಡಿತ್ತು. ಆದರೆ ಅಂದಿನಿಂದ ಎರಡೂ ತಂಡಗಳಿಗೆ ಬಹಳಷ್ಟು ಬದಲಾವಣೆ ಆಗಿದ್ದು, ಈ ಸರಣಿ ಎರಡೂ ತಂಡಗಳಿಗಳಿ ಹೆಚ್ಚಿನ ಮಹತ್ವದ್ದಾಗಿದೆ. ಏಕೆಂದರೆ ಈ ಎರಡೂ ತಂಡಗಳಿಗೂ ವಿಶ್ವಕಪ್​ ಸೋಲಿನ ನಂತರ ಮೊದಲ ಸರಣಿಯಾಗಿದ್ದು, ಇದರ ಗೆಲುವು ಹೊಸ ಆತ್ಮವಿಶ್ವಾಸ ಮೂಡಿಸಲಿದೆ.


IND vs NZ ಸಂಭಾವ್ಯ ಪ್ಲೇಯಿಂಗ್ 11:


ಭಾರತ ಸಂಭಾವ್ಯ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ(C), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ , ಶ್ರೇಯಸ್ ಅಯ್ಯರ್ , ದೀಪಕ್ ಹೂಡಾ , ರಿಷಭ್ ಪಂತ್, ಇಶಾನ್ ಕಿಶನ್, ಯಜ್ವುಂದ್ರ ಚಹಾಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್.


ನ್ಯೂಜಿಲ್ಯಾಂಡ್​ ಸಂಭಾವ್ಯ ಪ್ಲೇಯಿಂಗ್ 11: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಲೂಕಿ ಫರ್ಗುಸನ್, ಟಿಮ್ ಸೌಥಿ ಮತ್ತು ಇಶ್ ಸೋಧಿ.

Published by:shrikrishna bhat
First published: