• Home
  • »
  • News
  • »
  • sports
  • »
  • India vs New Zealand: ಇಂದು ಭಾರತ-ನ್ಯೂಜಿಲ್ಯಾಂಡ್​ ಪಂದ್ಯ; ಇಲ್ಲಿದೆ ಹೆಡ್​ ಟು ಹೆಡ್​, ಪ್ಲೇಯಿಂಗ್​ 11

India vs New Zealand: ಇಂದು ಭಾರತ-ನ್ಯೂಜಿಲ್ಯಾಂಡ್​ ಪಂದ್ಯ; ಇಲ್ಲಿದೆ ಹೆಡ್​ ಟು ಹೆಡ್​, ಪ್ಲೇಯಿಂಗ್​ 11

IND vs NZ

IND vs NZ

India vs New Zealand: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತವು ಇಂದು ವೆಲ್ಲಿಂಗ್ಟನ್ ಪ್ರಾದೇಶಿಕ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ T20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.

  • Share this:

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂದು ನ್ಯೂಜಿಲ್ಯಾಂಡ್ (India vs New Zealand)​ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಟಿ20 ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ (Wellington) ನಡೆಯಲಿದೆ. ಟಿ20 ವಿಶ್ವಕಪ್‌ನಲ್ಲಿ (T20 World Cup ) ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ (IND vs ENG) ವಿರುದ್ಧ ಹೀನಾಯ ಸೋಲು ಅನುಭವಿಸಿದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ (Virat Kohli) ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಉಮ್ರಾನ್ ಮಲಿಕ್, ಕುಲದೀಪ್ ಯಾದವ್ ಸೇರಿದಂತೆ ಹಲವು ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.


ಈ ಪೈಕಿ ಮತ್ತೊಬ್ಬ ಯುವ ಆಟಗಾರ ಶುಭಮನ್ ಗಿಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಗ ಈ ಸರಣಿಯಲ್ಲಿ ಅವರಿಗೆ ಚೊಚ್ಚಲ ಟಿ20 ಪಂದ್ಯವಾಡುವ ಅವಕಾಶ ಸಿಗುತ್ತದೋ ಇಲ್ಲವೋ ಕಾದು ನೋಡಬೇಕಿದೆ.


ಪಂದ್ಯದ ವಿವರ: 


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಸರಣಿಯ ಮೊದಲ ಪಂದ್ಯವು ಇಂದು ನ್ಯೂಜಿಲ್ಯಾಂಡ್​ನ ವೆಲ್ಲಿಂಗ್ಟನ್​ನಲ್ಲಿ ನಡೆಯಲಿದೆ. ಟಿ20 ಪಂದ್ಯಗಳ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 12 ರಿಂದ ನಡೆಯಲಿವೆ. ಟಿ20 ಪಂದ್ಯಗಳ ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಹಾಗೂ ಪಂದ್ಯದ ನೇರಪ್ರಸಾರವನ್ನು ಡಿಡಿ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹುದು.



ಭಾರತ-ಕಿವೀಸ್​ ಹೆಡ್ ಟು ಹೆಡ್​:


ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಆಡಿದ 21 T20 ಪಂದ್ಯಗಳಲ್ಲಿ, ಎರಡೂ ತಂಡಗಳು ಸಮಾನ ಸಂಖ್ಯೆಯ ಪಂದ್ಯಗಳನ್ನು ಗೆದ್ದಿವೆ. ಉಭಯ ತಂಡಗಳು 9 ಪಂದ್ಯಗಳನ್ನು ಗೆದ್ದಿದ್ದು, ಎರಡು ಪಂದ್ಯಗಳು ಟೈ ಆಗಿವೆ ಮತ್ತು ಒಂದು ಪಂದ್ಯ ರದ್ದಾಗಿತ್ತು. ಉಭಯ ತಂಡಗಳು ಸಮಾನವಾಗಿ ಕಾಣುತ್ತಿದ್ದು, ಟೀಂ ಇಂಡಿಯಾ ಹೆಚ್ಚು ಯಂಗ್​ ಪ್ಲೇಯರ್ಸ್​ಗಳಿಂದ ತುಂಬಿದೆ.


ಪಿಚ್​ ವರದಿ:


ಇನ್ನು, ಭಾರತ ಮತ್ತು ಕಿವೀಸ್ ನಡುವಿನ ಮೊದಲ ಪಂದ್ಯವು ವೆಲ್ಲಿಂಗ್ಟನ್​ನಲ್ಲಿ ನಡೆಯಲಿದೆ. ಈ ಪಿಚ್ ಕಳೆದ ಮೂರು ಅಂತರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳಲ್ಲಿ ಸುಮಾರು 160ರ ಸರಾಸರಿ ಸ್ಕೋರ್‌ನೊಂದಿಗೆ ಬ್ಯಾಟರ್‌ಗಳಿಗೆ ಸಹಾಯ ಮಾಡಿದೆ. ಮೇಲಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಮೊದಲು ಬ್ಯಾಟ್ ಮಾಡುವ ತಂಡವು ಮೇಲುಗೈ ಸಾಧಿಸಿದೆ ಮತ್ತು ಈ ಆಟದಲ್ಲಿಯೂ ಸಹ ಅದನ್ನು ನಿರೀಕ್ಷಿಸಬಹುದು. ಹೀಗಾಗಿ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: IND vs NZ: ಈ ಮೂವರು ಕಿವೀಸ್ ವಿರುದ್ಧ ಅಬ್ಬರಿಸಲೇ ಬೇಕು; ಆಡಿದ್ರೆ ಪಾಸ್, ಇಲ್ಲಾಂದ್ರೆ ಟೀಂ ಇಂಡಿಯಾದಿಂದ ಗೇಟ್‌ಪಾಸ್!


IND vs NZ ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್/ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಮತ್ತು ಯುಜ್ವೇಂದ್ರ ಚಾಹಲ್.

ನ್ಯೂಜಿಲ್ಯಾಂಡ್​ ಸಂಭಾವ್ಯ ಪ್ಲೇಯಿಂಗ್​ 11: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಲೂಕಿ ಫರ್ಗುಸನ್, ಟಿಮ್ ಸೌಥಿ ಮತ್ತು ಇಶ್ ಸೋಧಿ.

Published by:shrikrishna bhat
First published: