ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ ಮಳೆಯಿಂದ ಅಲ್ಲ ಬಿಸಿಲಿನಿಂದ ಸ್ಥಗಿತ

ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ ಸದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ. ಆದರೆ, ಆಟ ನಿಲ್ಲಿಸಿರುವುದು ಮಳೆಯಿಂದಾಗಿ ಅಲ್ಲ ಅಥವಾ ಮಂದ ಬೆಳಕಿನಿಂದಾಗಿ ಅಲ್ಲ.

Vinay Bhat | news18
Updated:January 23, 2019, 12:17 PM IST
ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ ಮಳೆಯಿಂದ ಅಲ್ಲ ಬಿಸಿಲಿನಿಂದ ಸ್ಥಗಿತ
ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ ಸದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ. ಆದರೆ, ಆಟ ನಿಲ್ಲಿಸಿರುವುದು ಮಳೆಯಿಂದಾಗಿ ಅಲ್ಲ ಅಥವಾ ಮಂದ ಬೆಳಕಿನಿಂದಾಗಿ ಅಲ್ಲ.
  • News18
  • Last Updated: January 23, 2019, 12:17 PM IST
  • Share this:
ನೇಪಿಯರ್​​ (ಜ. 23): ಇಲ್ಲಿನ ಮೆಕ್​​​ಲೀನ್​​ ಪಾರ್ಕ್​​​​ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನತ್ತ ಹೆಜ್ಜೆ ಇಡುತ್ತಿದೆ.

ಸದ್ಯ ಆಟ ತಾತ್ಕಾಲಿಕ ಸ್ಥಗಿತಗೊಂಡಿದೆ. ಆದರೆ, ಆಟ ನಿಲ್ಲಿಸಿರುವುದು ಮಳೆಯಿಂದಾಗಿ ಅಲ್ಲ ಅಥವಾ ಮಂದ ಬೆಳಕಿನಿಂದಾಗಿ ಅಲ್ಲ. ಬದಲಾಗಿ ಬಿಸಿಲಿನಿಂದ. ಸೂರ್ಯನ ಕಿರಣ ನೇರವಾಗಿ ವಿಕೆಟ್ ಎದುರು ನಿಂತಿರುವ ಬ್ಯಾಟ್ಸ್​ಮನ್​ ಕಣ್ಣಿಗೆ ಬೀಳುತ್ತಿರುವುದರಿಂದ ಸ್ವಲ್ಪ ಸಮಯದ ಮಟ್ಟಿಗೆ ಆಟವನ್ನು ಸ್ಥಗಿತ ಗೊಳಿಸಲಾಗಿದೆ.

 


 ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಶಮಿ ಬೌಲಿಂಗ್ ದಾಳಿಗೆ ತತ್ತರಿಸಿ 157 ರನ್​​ಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಭಾರತ 44 ರನ್​ಗೆ 1 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ 11 ರನ್ ಗಳಿಸಿ ಔಟ್ ಆಗಿದ್ದಾರೆ.

India vs New Zealand, Live Cricket Score: 158 ಟಾರ್ಗೆಟ್​: ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ

First published:January 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading