ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡವು ಈಗ 3 ಪಂದ್ಯಗಳ ODI ಸರಣಿಯಲ್ಲಿ ನ್ಯೂಜಿಲೆಂಡ್ (IND vs NZ) ಅನ್ನು ಎದುರಿಸುತ್ತಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium, Hyderabad) ಇಂದು ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಪರ ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ಗಳಿಸುವ ಮೂಲಕ ಪ್ರವಾಸಿ ನ್ಯೂಜಿಲ್ಯಾಂಡ್ ತಂಡಕ್ಕೆ 350 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಇಂದಿನ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಭರ್ಜರಿ ದ್ವಿಶತಕ ಸಿಡಿಸವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಭರ್ಜರಿ ದ್ವಿಶತಕ ಸಿಡಿಸಿದ ಗಿಲ್:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ಗಳಿಸಿತು. ಭಾರತದ ಪರ ಇಂದು ಆರಂಬಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತೆ ನಿರಾಸೆ ಮೂಡಿಸಿದರು. ಅವರು 38 ಎಸೆತದಲ್ಲಿ 2 ಸಿಕ್ಸ್ ಮತ್ತು 4 ಫೋರ್ ಮೂಲಕ 34 ರನ್ ಗಳಿಸುವ ಮೂಲಕ ಮತ್ತೆ ಬೇಗ ವಿಕೆಟ್ ಒಪ್ಪಿಸಿದರು. ಆದರೆ ಯುವ ಆಟಗಾರ ಶುಭ್ಮನ್ ಗಿಲ್ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದರು. ಅಲ್ಲದೇ ಗಿಲ್ ಕಿವೀಸ್ ವಿರುದ್ಧ ದ್ವಿಶತಕ ಸಿಡಿಸಿ ಆರ್ಭಟಿಸಿದರು. ಅವರು, 149 ಬೌಲ್ಗಳಿಗೆ 9 ಸಿಕ್ಸ್ ಮತ್ತು 19 ಫೋರ್ ಮೂಲಕ ಆಕರ್ಷಕ 208 ರನ್ಗಳಿಸಿದರು. ಉಳಿದಂತೆ ವಿರಾಟ್ ಕೊಹ್ಲಿ 8 ರನ್, ಇಶಾನ್ ಕಿಶನ್ 5 ರನ್, ಸೂರ್ಯಕುಮಾರ್ ಯಾದವ್ 31 ರನ್, ಹಾರ್ದಿಕ್ ಪಾಂಡ್ಯ 28 ರನ್, ವಾಷಿಂಗ್ಟನ್ ಸುಂದರ್ 12 ರನ್, ಶಾರ್ದೂಲ್ ಠಾಕೂರ್ 3 ರನ್, ಕುಲ್ದೀಪ್ ಯಾದವ್ 5 ರನ್ ಮತ್ತು ಮೊಹಮ್ಮದ್ ಸಿರಾಜ್ 2 ರನ್ ಗಳಿಸಿದರು.
2⃣0⃣0⃣ !🔥 🎇
𝑮𝒍𝒐𝒓𝒊𝒐𝒖𝒔 𝑮𝒊𝒍𝒍!🙌🙌
One mighty knock! 💪 💪
The moment, the reactions & the celebrations 🎉 👏
Follow the match 👉 https://t.co/IQq47h2W47 #TeamIndia | #INDvNZ | @ShubmanGill pic.twitter.com/sKAeLqd8QV
— BCCI (@BCCI) January 18, 2023
ಯುವ ಪ್ಲೇಯರ್ ಶುಭ್ಮನ್ ಗಿಲ್ ಇಂದು ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದರು. ಅವರು 149 ಬೌಲ್ಗಳಿಗೆ 9 ಸಿಕ್ಸ್ ಮತ್ತು 19 ಫೋರ್ ಮೂಲಕ ಆಕರ್ಷಕ 208 ರನ್ ಗಳಿಸಿ ಅಬ್ಬರಿಸಿದರು. ಈವರೆಗೆ ಭಾರತದ ಪರ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ 3 ಬಾರಿ ಮತ್ತು ಇಶಾನ್ ಕಿಶನ್ ದ್ವಿಶತಕ ಸಿಡಿಸಿದ್ದರು. ಇದೀಗ ಈ ಸಾಲಿಗೆ ಶುಭ್ಮನ್ ಗಿಲ್ ಸೇರ್ಪಡೆಗೊಂಡಿದ್ದಾರೆ.
ಗಿಲ್ ಅಬ್ಬರಕ್ಕೆ ತತ್ತರಿಸಿದ ಕಿವೀಸ್ ಬೌಲರ್ಸ್:
ಇನ್ನು, ಟಾಸ್ ಸೋತು ಮೊದಲು ಮೊದಲು ಬೌಲಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡವು ಉತ್ತಮ ದಾಳಿ ನಡೆಸುವಲ್ಲಿ ಎಡವಿತು. ಅದರಲ್ಲಿಯೂ ಭಾರತದ ಪರ ಶುಭ್ಮನ್ ಗಿಲ್ ಅಬ್ಬರಕ್ಕೆ ಬೌಲರ್ಸ್ಗಳು ತತ್ತರಿಸಿ ಹೋದರು. ಕಿವೀಸ್ ಪರ ಡೇರಿಲ್ ಮಿಚೆಲ್ ಮತ್ತು ಹೆನ್ರಿ ನಿಕೋಲ್ಸ್ 2 ವಿಕೆಟ್ ಪಡೆದರು. ಲಾಕಿ ಫರ್ಗುಸನ್, ಮಿಚೆಲ್ ಸ್ಯಾಂಟ್ನರ್ ಮತ್ತು ಬ್ಲೇರ್ ಟಿಕ್ನರ್ ತಲಾ 1 ವಿಕೆಟ್ ಪಡೆದರು.
ಭಾರತ-ನ್ಯೂಜಿಲ್ಯಾಂಡ್ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (c, wk), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್, ಸಿಪಲ್, ಬ್ಲೇರ್ ಟಿಕ್ನರ್, ಲಾಕಿ ಫರ್ಗುಸನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ