• Home
  • »
  • News
  • »
  • sports
  • »
  • IND vs NZ 1st ODI: ಟಾಸ್​ ಗೆದ್ದ ಭಾರತ ಬ್ಯಾಟಿಂಗ್​, ತಂಡದಲ್ಲಿ ಪ್ರಮುಖ 3 ಬದಲಾವಣೆ

IND vs NZ 1st ODI: ಟಾಸ್​ ಗೆದ್ದ ಭಾರತ ಬ್ಯಾಟಿಂಗ್​, ತಂಡದಲ್ಲಿ ಪ್ರಮುಖ 3 ಬದಲಾವಣೆ

IND vs NZ ODI

IND vs NZ ODI

IND vs NZ 1st ODI: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದ್ದು, ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ (IND vs NZ) ಇಂದಿನಿಂದ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಶಾನ್ ತನ್ನ ಕೊನೆಯ ODIನಲ್ಲಿ ಬಾಂಗ್ಲಾದೇಶದ ವಿರುದ್ಧ ದ್ವಿಶತಕ ಗಳಿಸಿದರು, ಆದರೆ ಶ್ರೀಲಂಕಾ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲಿ ಅವಕಾಶವನ್ನು ಪಡೆಯಲಿಲ್ಲ. ಕೆಎಲ್ ರಾಹುಲ್ (KL Rahul) ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಡುತ್ತಿದ್ದರು, ಆದರೆ ಪ್ರಸ್ತುತ ಸರಣಿಯಲ್ಲಿ ಅವರು ವೈಯಕ್ತಿಕ ಕಾರಣಗಳಿಂದ ಆಡುತ್ತಿಲ್ಲ. ಹೀಗಾಗಿ ಇಶಾನ್ ಕಿಶನ್ (Ishan Kishan)​ ಅವರಿಗೆ ಇಂದಿನ ಪಂದ್ಯದಲ್ಲಿ ಅವಕಾಶ ದೊರಕಿದೆ. ಇಂದಿನ ಪಂದ್ಯವು ಹೈದರಾಬಾದ್​ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ (Rajiv Gandhi International Cricket Stadium, Hyderabad) ಆರಂಭವಾಗಿದೆ. ಅಲ್ಲದೇ ಇಂದಿನ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.


ತಂಡದಲ್ಲಿ ಮಹತ್ವದ 3 ಬದಲಾವಣೆ:


ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದೆ. ಹಾರ್ದಿಕ್ ಪಾಂಡ್ಯಗೆ ಜೊತೆಗೆ ಶಾರ್ದೂಲ್ ಠಾಕೂರ್ ತಂಡಕ್ಕೆ ಮರಳಿದ್ದಾರೆ. ಅಲ್ಲದೇ ಕಳೆದ ಶ್ರೀಲಂಕಾ ಸರಣಿಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಂತಹ ಸೂರ್ಯಕುಮಾರ್ ಯಾದವ್ ಮತ್ತು ಇಶನ್ ಕಿಶನ್​ ಇಬ್ಬರಿಗೂ ಅಂತಿಮ ತಂಡದಲ್ಲಿ ಸ್ಥಾನ ದೊರಕಿದೆ. ಈ ಸರಣಿಯಲ್ಲಿ ಕೆಎಲ್ ರಾಹುಲ್​ ಆಯ್ಕೆ ಆಗದಿರಲದ ಕಾರಣ ಅವರ ಬದಲಿಗೆ ಇಂದು ಇಶನ್ ಕಿಶನ್​ಗೆ ಸ್ಥಾನ ದೊರಕಿದೆ. ಜೊತೆಗೆ ಮದ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್​ಗೂ ಸ್ಥಾನ ದೊರಕಿದ್ದು, ಇಂದಿನ ಪಂದ್ಯದಲ್ಲಾದರೂ ಯಾದವ್​ ಅಬ್ಬರಿಸುತ್ತಾರೆಯೇ ಎಂದು ನೋಡಬೇಕಿದೆ. ಇನ್ನು, ಬ್ಯಾಟಿಂಗ್​ ಆರಂಭಿಸಿರುವ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದ್ದು, ನಾಯಕ ರೋಹಿತ್ ಶರ್ಮಾ 34 ರನ್ ಮತ್ತು ವಿರಾಟ್ ಕೊಹ್ಲಿ 8 ರನ್ ಗಳಿಸಿ ಔಟ್​ ಆಗಿದ್ದಾರೆ.20 ವರ್ಷಗಳ ನಂತರ ಹೈದರಾಬಾದ್​ನಲ್ಲಿ ಪಂದ್ಯ:


ಇನ್ನು, ಭಾರತ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಕೊನೆಯದಾಗಿ 2003 ರಲ್ಲಿ ಹೈದರಾಬಾದ್​ನಲ್ಲಿ ಮುಖಾಮುಖಿಯಾಗಿದ್ದವು. ನಂತರ ಉಭಯ ತಂಡಗಳ ನಡುವಿನ ಪಂದ್ಯ ಇಂದು ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಅಲ್ಲದೇ 5 ವರ್ಷಗಳ ನಂತರ ಕಿವೀಸ್ ತಂಡ ಭಾರತದ ನೆಲದಲ್ಲಿ ಏಕದಿನ ಸರಣಿ ಆಡುತ್ತಿದೆ.


ಇದನ್ನೂ ಓದಿ: Virat Kohli: ಕೊಹ್ಲಿ 71ನೇ ಸೆಂಚುರಿಗಾಗಿ ಮದುವೆಯನ್ನೇ ಮುಂದೂಡಿದ್ದ ಫ್ಯಾನ್, ವಿರಾಟ್ ಶತಕ ಸಿಡಿಸ್ತಿದ್ದಂತೆ ನೆರವೇರಿತು ಅಭಿಮಾನಿ ಕಲ್ಯಾಣ!


ಸರಣಿಯಿಂದ ಶ್ರೇಯಸ್​ ಅಯ್ಯರ್ ಔಟ್​:


ಶ್ರೇಯಸ್‌ ಅಯ್ಯರ್‌ ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಗಾಯದಿಂದ ಚೇತರಿಸಿಕೊಳ್ಳಲು ಭಾರತೀಯ ಬ್ಯಾಟ್ಸ್‌ಮನ್ ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಹೋಗಬೇಕಾಗುತ್ತದೆ. ಹೀಗಾಗಿ ಬಿಸಿಸಿಐ ಶ್ರೇಯಸ್​ ಅಯ್ಯರ್ ಬದಲಿಗೆ ಯುವ ಆಟಗಾರ ರಜತ್ ಪಾಟಿದಾರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಹೀಗಾಗಿ ಯುವ ಆಟಗಾರನಿಗೆ ತಂಡದಲ್ಲಿ ಅವಕಾಶ ದೊರಕುತ್ತದೆಯೇ ಎಂದು ಕಾದುನೋಡಬೇಕಿದೆ. ಅಯ್ಯರ್ ಬದಲಿಗೆ ಸೂರ್ಯಕುಮಾರ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಭಾರತ-ನ್ಯೂಜಿಲ್ಯಾಂಡ್ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.


ನ್ಯೂಜಿಲೆಂಡ್ ಪ್ಲೇಯಿಂಗ್​ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (c, wk), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಸಿಪಲ್, ಬ್ಲೇರ್ ಟಿಕ್ನರ್, ಲಾಕಿ ಫರ್ಗುಸನ್.

Published by:shrikrishna bhat
First published: