• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs IRE T20: ಸರಣಿ ಗೆಲುವಿನ ತವಕದಲ್ಲಿ ಹಾರ್ದಿಕ್ ಪಡೆ, ಟೀಂ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಪ್ರಕಟ

IND vs IRE T20: ಸರಣಿ ಗೆಲುವಿನ ತವಕದಲ್ಲಿ ಹಾರ್ದಿಕ್ ಪಡೆ, ಟೀಂ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಪ್ರಕಟ

IND vs IRE

IND vs IRE

ಭಾರತ ಮತ್ತು ಐರ್ಲೆಂಡ್ (IND vs IRE) ವಿರುದ್ದದ 2ನೇ ಹಾಗೂ ಅಂತಿಮ ಟಿ20 (T20) ಪಂದ್ಯವು ಇಂದು ನಡೆಯಲಿದೆ. ಇದಲ್ಲದೇ ಮುಂದಿನ ನವೆಂಬರ್ ವರೆಗಿನ ಟೀಂ ಇಂಡಿಯಾದ ವೇಳಾಪಟ್ಟಿ ಇಲ್ಲಿದೆ.

  • Share this:

ಭಾರತ ಮತ್ತು ಐರ್ಲೆಂಡ್ (IND vs IRE) ವಿರುದ್ದದ 2ನೇ ಹಾಗೂ ಅಂತಿಮ ಟಿ20 (T20) ಪಂದ್ಯವು ಇಂದು ನಡೆಯಲಿದೆ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಟೀಂ ಇಂಡಿಯಾ (Team India) ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಇಂದಿನ ಪಂದ್ಯ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದೆ. ಐರ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವು 2 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಅದರಲ್ಲಿ ಮೊದಲ ಪಂದ್ಯದಲ್ಲಿ ಭಾರತವು ಐರ್ಲೆಂಡ್ ನ್ನು ಬರೋಬ್ಬರಿ 7 ವಿಕೆಟ್ ಗಳಿಂದ ಸೋಲಿಸಿದೆ. ಇನ್ನು, ಈ ಸರಣಿಗೆ ಟೀಂ ಇಂಡಿಯಾಗೆ ಕೋಚ್​ ಆಗಿ ವಿವಿಎಸ್ ಲಕ್ಷ್ಮಣ್ ಇದ್ದು, ನಾಯಕನಾಗಿ ಪಾಂಡ್ಯ ಇದೇ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.


ಪಂದ್ಯದ ವಿವರ:


ಭಾರತ ಮತ್ತು ಐರ್ಲೆಂಡ್ 2ನೇ ಟಿ20 ಕದನವು ಇಂದು ಐರ್ಲೆಂಡ್​ನ ಮಲಾಹಿಡೆ ಡಬ್ಲಿನ್ ನ ದಿ ವಿಲೆಜ್ ನಲ್ಲಿ ನಡೆಯಲಿದೆ. ಇಂದಿನ ಪಂದ್ಯವು ಭಾರತೀಯ ಲಾಕಮಾನದ ಪ್ರಕಾರ ರಾತ್ರಿ 8:30ಕ್ಕೆ ಟಾಸ್ ಮತ್ತು 9 ಗಂಟೆಗೆ ಪಂದ್ಯ ಆರಂಭವಾಗಲಿದೆ. ಪಂದ್ಯವನ್ನು ಸೋನಿ ಸಿಕ್ಸ್ ನಲ್ಲಿ ಲೈವ್ ಪ್ರಸಾರವಾಗಲಿದ್ದು, ಸೋನಿ ಲೈವ್ ಟಿವಿ ಅಲ್ಲಿ ಆನ್​ಲೈನ್ ಮೂಲಕ ವೀಕ್ಷಿಸಬಹುದು.


ಭಾರತ ಮತ್ತು ಐರ್ಲೆಂಡ್ ಸಂಭಾವ್ಯ ತಂಡ:


ಭಾರತ: ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್ (ಕೀಪರ್), ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್.


ಇದನ್ನೂ ಓದಿ: Hardik Pandya: ಹಾರ್ದಿಕ್ ಪಾಂಡ್ಯ ಮೊದಲ ಕ್ರಶ್ ಈ ಬಾಲಿವುಡ್​ ನಟಿಯಂತೆ! ರಿವೀಲ್ ಆಯ್ತು ಹೊಸ ವಿಷಯ


ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ನಿರ್ನೆ (ನಾಯಕ), ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲ್ಯಾಕ್ರಾನ್ ಟಕರ್ (ಕೀಪರ್), ಕರ್ಟಿಸ್ ಕ್ಯಾಂಪರ್, ಆಂಡಿ ಮೆಕ್‌ಬೈನ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್.


ಭಾರತ ತಂಡದ ಮುಂದಿನ ನವೆಂಬರ್ ವರೆಗಿನ ವೇಳಾಪಟ್ಟಿ:


ಹೌದು, ಟೀಂ ಇಂಡಿಯಾ ಸದ್ಯ ಸಾಲು ಸಾಲು ಸಾಲು ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಟೀಂ ಇಂಡಿಯಾವು ಐರ್ಲೆಂಡ್ ಪ್ರವಾಸದಲ್ಲಿದ್ದು, ಇಂದಿಗೆ ಈ ಸರಣಿ ಅಂತ್ಯ ಕಾಣಲಿದೆ. ಇದಾದ ಬಳಿಕೆ ಭಾರತ ತಂಡ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಸರಣಿ ಆಡಲಿದೆ. ಅಲ್ಲದೇ ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ಸಹ ಇದೆ. ಹೀಗಾಗಿ ಬ್ಯುಸಿ ಶಡ್ಯೂಲ್​ ನಲ್ಲಿ ಟೀಂ ಇಂಡಿಯಾದ ಆಟಗಾರರು ಇದ್ದಾರೆ. ಹಾಗಿದ್ದರೆ ಟೀಂ ಇಂಡಿಯಾದ ವೇಳಾಪಟ್ಟಿ ಈ ರೀತಿ ಇದೆ ನೋಡಿ.


ಭಾರತ ಮತ್ತು ಇಂಗ್ಲೆಂಡ್ ಸರಣಿಗಳ ವೇಳಾಪಟ್ಟಿ:


ಜುಲೈ 1ರಿಂದ 5: ಏಕೈಕ ಟೆಸ್ಟ್ ಪಂದ್ಯ (ಎಡ್ಜ್ ಬಾಸ್ಟನ್​)
ಜುಲೈ 7: 1ನೇ ಟಿ20 (ಏಜಿಯಾಸ್ ಬೌಲ್)
ಜುಲೈ 9: 2ನೇ ಟಿ 20 (ಎಡ್ಜ್ ಬಾಸ್ಟನ್​)
ಜುಲೈ 10: 3ನೇ ಟಿ20 (ಟ್ರೆಂಟ್​ ಬ್ರಿಡ್ಜ್)
ಜುಲೈ 12: ಮೊದಲ ಏಕದಿನ (ಕಿಯಾ ಓವೆಲ್)
ಜುಲೈ 14: ಎರಡನೇ ಏಕದಿನ (ಲಾರ್ಡ್ಸ್)
ಜುಲೈ 17: ಮೂರನೇ ಏಕದಿನ (ಮ್ಯಾಂಚೆಸ್ಟರ್ ಸಿಟಿ)


ಇದನ್ನೂ ಓದಿ: Hardik Pandya: ಹಾರ್ದಿಕ್ ಇರುವಾಗ ಈ ಆಟಗಾರ ಕಂಬ್ಯಾಕ್ ಮಾಡುವುದು ಕಷ್ಟ, ಶಾಕಿಂಗ್ ಹೇಳಿಕೆ ನೀಡಿದ ಟೀಂ ಇಂಡಿಯಾದ ಮಾಜಿ ಆಟಗಾರ


IND vs NZ ಸರಣಿ ಟೈಂ ಟೇಬಲ್:


ನವೆಂಬರ್ 18: ಮೊದಲ ಟಿ 20
ನವೆಂಬರ್ 20: 2ನೇ ಟಿ 20
ನವೆಂಬರ್ 22: 3ನೇ ಟಿ 20
ಮೊದಲ ಏಕದಿನ: ನವೆಂಬರ್ 25
ಎರಡನೇ ಏಕದಿನ: ನವೆಂಬರ್ 27
ಮೂರನೇ ಏಕದಿನ: ನವೆಂಬರ್ 30

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು