ಇಂಗ್ಲೆಂಡ್‌ನಲ್ಲಿ ಇಂದಿನಿಂದ ಏಕದಿನ ಕ್ರಿಕೆಟ್ ಸರಣಿ: ಟಿ20 ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ತಂಡ


Updated:July 12, 2018, 10:46 AM IST
ಇಂಗ್ಲೆಂಡ್‌ನಲ್ಲಿ ಇಂದಿನಿಂದ ಏಕದಿನ ಕ್ರಿಕೆಟ್ ಸರಣಿ: ಟಿ20 ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ತಂಡ

Updated: July 12, 2018, 10:46 AM IST
ಸಾಗರ್ ಕನ್ನೆಮನೆ, ನ್ಯೂಸ್​ 18 ಕನ್ನಡ

ಇಂಗ್ಲೆಂಡ್​(ಜು.12): ಚುಟುಕು ಕ್ರಿಕೆಟ್ ಸರಣಿಯನ್ನ ಗೆದ್ದು ಬೀಗಿದ ಟೀಮ್ ಇಂಡಿಯಾ ಇಂದಿನಿಂದ ಏಕದಿನ ಸರಣಿಯಲ್ಲಿ ಆಂಗ್ಲರ ಸವಾಲನ್ನ ಸ್ವೀಕರಿಸುತ್ತಿದೆ. ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಟಿ20 ಸೀರೀಸ್ ಗೆದ್ದ ಮೇಲಂತೂ ಕೊಹ್ಲಿ ಪಡೆಯ ಆತ್ಮವಿಶ್ವಾಸ ಹೆಚ್ಚಿದೆ. ಹೀಗಾಗಿ ಏಕದಿನ ರ್ಯಾಂಕಿಂಗ್​ನಲ್ಲಿ ನಂಬರ್ ಒನ್ ಪಟ್ಟದ ಮೇಲೆ ಕಣ್ಣಿಟ್ಟಿರೋ ಭಾರತ ಗೆಲುವಿನ ಶುಭಾರಂಭಕ್ಕೆ ಕಾದಿದೆ. ಅತ್ತ ಬಲಿಷ್ಠ ಇಂಗ್ಲೆಂಡ್ ಕೂಡ ಟೀಮ್ ಇಂಡಿಯಾಕ್ಕೆ ತಿರುಗೇಟು ನೀಡಲು ಸಜ್ಜಾಗಿದೆ.

ಇಂಗ್ಲೆಂಡ್ ವಿರುದ್ಧದ ಟಿ20ಯಲ್ಲಿ ಅವಿಸ್ಮರಣೀಯ ಆಟವಾಡಿದ ಭಾರತ, ಇಂದಿನಿಂದ ಏಕದಿನ ಪಂದ್ಯಗಳ ಸವಾಲಿಗೆ ಎದೆಯೊಡ್ಡಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವು ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ ನಡೆಯಲಿದ್ದು, ಉಭಯ ತಂಡಗಳು ಸಜ್ಜಾಗಿ ನಿಂತಿವೆ. ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳು ಇಂಡೋ-ಆಂಗ್ಲೋ ಹೋರಾಟವನ್ನ ಎದುರು ನೋಡುತ್ತಿದ್ದಾರೆ.

ಟೀಮ್ ಇಂಡಿಯಾಕ್ಕೆ ಸದ್ಯ ಓಪನರ್ ಶಿಖರ್ ಧವನ್ ತಲೆನೋವಾಗಿದ್ದಾರೆ. ಟಿ20 ಸರಣಿಯಲ್ಲಿ ಫಾರ್ಮ್ ವೈಫಲ್ಯ ಅನುಭವಿಸಿದ ಶಿಖರ್​ಗೆ ಏಕದಿನ ಸರಣಿಯಲ್ಲೂ ಚಾನ್ಸ್ ಸಿಗೋ ಸಾಧ್ಯತೆ ಹೆಚ್ಚು. ಹೀಗಾಗಿ ಟಿ20 ಫೈನಲ್​ನಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ ರೋಹಿತ್ ಜೊತೆಗೆ ಶಿಖರ್ ಕಣಕ್ಕಿಳಿಯಲಿದ್ದಾರೆ. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ನಂಬರ್ 4ನೇ ಸ್ಥಾನದಲ್ಲಿ ಕಣಕ್ಕಿಳಿಯೋದು ಯಾರು ಅನ್ನೋದು ಇನ್ನೂ ಕೊಹ್ಲಿ ಪಾಳಯದಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.

ಇನ್ನು ಟಿ20 ಸರಣಿಯಲ್ಲಿ ಬೆಂಚ್ ಕಾದಿದ್ದ ದಿನೇಶ್ ಕಾರ್ತಿಗೆ ಏಕದಿನ ಸರಣಿಯಲ್ಲಾದ್ರೂ ಚಾನ್ಸ್ ಸಿಗುತ್ತಾ ಅನ್ನೋದು ಕಾದು ನೋಡಬೇಕಿದೆ. ಕೆ.ಎಲ್ ರಾಹುಲ್ ಒನ್ಡೌನ್ ನಲ್ಲಿ ಬ್ಯಾಟಿಂಗ್ ಇಳಿದ್ರೆ ಕೊಹ್ಲಿ 4ನೇ ಕ್ರಮಾಂಕಕ್ಕೆ ಜಾರಲಿದ್ದಾರೆ. ಇನ್ನುಳಿದಂತೆ ಧೋನಿ, ಕೆ.ಎಲ್ ರಾಹುಲ್ ಫಿನಿಷರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಬೌಲಿಂಗ್​ನಲ್ಲಿ ಬುರ್ಮಾ ಅನುಪಸ್ಥಿತಿಯಿದ್ದು, ಕುಲದೀಪ್ ಯಾದವ್ ಮತ್ತು ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ಅತ್ತ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡ ಸಾಕಷ್ಟು ತಯಾರಿಯೊಂದಿಗೆ ಕಣಕ್ಕಿಳಿಯುತ್ತಿದೆ. ಸದ್ಯ ಱಂಕಿಂಗ್​ನಲ್ಲಿ 2ನೇ ಸ್ಥಾನದಲ್ಲಿರೋ ಟೀಮ್ ಇಂಡಿಯಾ ಈ ಸರಣಿಯಲ್ಲಿ 3-0ಯಿಂದ ಗೆದ್ದರೆ ನಂಬರ್ ಒನ್ ಸ್ಥಾನದಲ್ಲಿರೋ ಆಂಗ್ಲರನ್ನ ಹಿಂದಕ್ಕೆ ಸರಿಸಿ ಅಗ್ರಪಟ್ಟಕ್ಕೇರಲಿದೆ. ಹೀಗಾಗಿ ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಸರಣಿಯಾಗಿ ಪರಿಣಮಿಸಿದೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ