ಭಾರತ-ಇಂಗ್ಲೆಂಡ್ ಟೆಸ್ಟ್: ಆಂಗ್ಲರ ನಾಡಲ್ಲಿ ದಾಖಲೆ ಬರೆದ ಕೊಹ್ಲಿ

news18
Updated:August 3, 2018, 3:36 PM IST
ಭಾರತ-ಇಂಗ್ಲೆಂಡ್ ಟೆಸ್ಟ್: ಆಂಗ್ಲರ ನಾಡಲ್ಲಿ ದಾಖಲೆ ಬರೆದ ಕೊಹ್ಲಿ
news18
Updated: August 3, 2018, 3:36 PM IST
ನ್ಯೂಸ್ 18 ಕನ್ನಡ

ಬರ್ಮಿಂಗ್​​ಹ್ಯಾಮ್​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 274 ರನ್​ಗೆ ಆಲೌಟ್ ಆಗಿದೆ. ಒಂದು ಕಡೆ ಭಾರತದ ವಿಕೆಟ್ ಉರುಳುತ್ತಿದ್ದರೆ ಏಕಾಂಗಿ ಹೋರಾಟ ನಡೆಸಿ ನಾಯಕನ ಆಟವಾಡಿ ಭರ್ಜರಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ನೆಲದಲ್ಲಿ ಒಂದೇ ಒಂದು ಶತಕ ಸಿಡಿಸಿದ ಕೊಹ್ಲಿ ಬೌನ್ಸಿ ಟ್ರ್ಯಾಕ್​ನಲ್ಲಿ 149 ರನ್​​ಗಳಿಸಿ ತಾನು ಏನು ಎಂಬುದನ್ನು ಮತ್ತೆ ಸಾಭೀತು ಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿ ತನ್ನ ವೃತ್ತಿ ಜೀವನದ 22ನೇ ಟೆಸ್ಟ್​ ಶತಕ ಪೂರೈಸಿದರು. ಜೊತೆಗೆ ಇಂಗ್ಲೆಂಡ್ ವಿರುದ್ಧ 1000 ರನ್ ಪೂರೈಸಿದ ಭಾರತದ 12ನೇ ಬ್ಯಾಟ್ಸ್​ಮನ್​​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಜೊತೆಗೆ ಅತಿ ವೇಗವಾಗಿ 7 ಸಾವಿರ ರನ್ ಪೂರೈಸಿದ ನಾಯಕ ಕೊಹ್ಲಿ ಆಗಿದ್ದಾರೆ. ಅಲ್ಲದೆ ಆಂಗ್ಲರ ನಾಡಲ್ಲಿ ಶತಕ ಬಾರಿಸಿದ 5ನೇ ನಾಯಕ ಎಂಬ ಪಟ್ಟವನ್ನೂ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರ ಅಪೋಘ ಶತಕಕ್ಕೆ ಕ್ರಿಕೆಟ್ ದಿಗ್ಗಜರು ಭೇಷ್ ಎಂದಿದ್ದು, ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  

First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...