ಭಾರತ-ಇಂಗ್ಲೆಂಡ್ ಟೆಸ್ಟ್​ ಸರಣಿ: ವೈಟ್​ ಜೆರ್ಸಿಯಲ್ಲಿ ಅಬ್ಬರಿಸುತ್ತಾ ವಿರಾಟ್ ಬ್ಯಾಟ್​​..?

news18
Updated:July 27, 2018, 6:45 PM IST
ಭಾರತ-ಇಂಗ್ಲೆಂಡ್ ಟೆಸ್ಟ್​ ಸರಣಿ: ವೈಟ್​ ಜೆರ್ಸಿಯಲ್ಲಿ ಅಬ್ಬರಿಸುತ್ತಾ ವಿರಾಟ್ ಬ್ಯಾಟ್​​..?
news18
Updated: July 27, 2018, 6:45 PM IST
ನ್ಯೂಸ್ 18 ಕನ್ನಡ

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹೆಜ್ಜೆ ಇಟ್ಟಲೆಲ್ಲಾ ದಾಖಲೆ ಸೃಷ್ಟಿಯಾಗುವುದು ಸಹಜವಾಗಿ ಬಿಟ್ಟಿದೆ. ನಾಯಕನಾದ ಮೇಲಂತೂ ಇದರ ವೇಗ ಇನ್ನಷ್ಟು ಹೆಚ್ಚಿದೆ. ಆದರೆ 2014ರಲ್ಲಿ ಈ ರನ್ ಮೆಷಿನ್​ಗೆ​​ ಎಲ್ಲವೂ ಕೈ ಕೊಟ್ಟಿತ್ತು. ಈ ಹಿಂದಿನ ಇಂಗ್ಲೆಂಡ್ ಪ್ರವಾಸಲ್ಲಿ ರನ್​ ಕಲೆ ಹಾಕುವಲ್ಲಿ ಕೊಹ್ಲಿ ಹಿಂದೆ ಬಿದ್ದಿದ್ದರು. ಆದರೀಗ ಸಮಯ ಬದಲಾಗಿದೆ. ಟೀಮ್​ ಇಂಡಿಯಾದ ನಾಯಕತ್ವ ವಹಿಸಿಕೊಂಡ ಮೇಲೆ ಕೊಹ್ಲಿ ರನ್​ ಶಿಖರ ಏರುತ್ತಾ ಇದ್ದಾರೆ. ಇತ್ತೀಚಿಗೆ ನಡೆದ ಏಕದಿನ ಹಾಗೂ ಟಿ-20 ಸರಣಿಯಲ್ಲಿ ವಿರಾಟ್​ ಬ್ಯಾಟ್​ ಆರ್ಭಟಿಸಿದ್ದು, ಎದುರಾಳಿಗಳಿಗೆ ನುಂಗಲಾರದ ತುತ್ತಾಗಿದೆ.

ವಿಶ್ವದ ಚಿತ್ತ ಕದ್ದಿರುವ ಮುಂಬರುವ ಟೆಸ್ಟ್​​ ಸರಣಿಯನ್ನು ಶತಾಯ ಗತಾಯ ಗೆಲ್ಲಲೇ ಬೇಕೆಂಬ ಆಶಯದೊಂದಿಗೆ ಉಭಯ ತಂಡಗಳು ಅಖಾಡ ಪ್ರವೇಶಿಸಲಿವೆ. ಇಂಗ್ಲೆಂಡ್​ನಲ್ಲಿ ಸರಣಿ ಗೆದ್ದು ದಿಗ್ಗಜ ನಾಯಕರ ಸಾಲಿಗೆ ಸೇರುವ ಕನಸು ವಿರಾಟ್​ ಕೊಹ್ಲಿಯದ್ದಾಗಿದೆ. ಕೊಹ್ಲಿ ಅವರು​​ ಇಂಗ್ಲೆಂಡ್ ವಿರುದ್ಧ 2014ರಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಈ ಸರಣಿಯಲ್ಲಿ ಬ್ಯಾಟ್​ ಮೌನಕ್ಕೆ ಶರಣಾಗಿತ್ತು. ವೇಗಿಗಳು ಹಾಗೂ ಸ್ಪಿನ್​ ಬೌಲರ್ಸ್​​ಗಳು ತೋಡಿದ ಖೆಡ್ಡಾಗೆ ಕೊಹ್ಲಿ ಬಲಿಯಾಗಿದ್ದರು. ಆದರೀಗ ವಿರಾಟ್ ಭರ್ಜರಿ ಫಾರ್ಮ್​​​ನಲ್ಲಿದ್ದು, ಮೂರು ಮಾದರಿಯಲ್ಲೂ ರನ್​ ಕಲೆ ಹಾಕಿ ಎದುರಾಳಿಗಳ ನಿದ್ದೆ ಗೆಡಿಸುತ್ತಿದ್ದಾರೆ.

ಇನ್ನು ಈ  ಬಾರಿ ಇಂಗ್ಲೆಂಡ್​ ವಾತಾವರಣ ಆತಿಥೇಯ ತಂಡಕ್ಕೆ ಕೊಂಚ ತಲೆ ನೋವಾಗಲಿದೆ. ಈ ಬಾರಿ ಇಂಗ್ಲೆಂಡ್​​ನಲ್ಲಿ ಚಳಿ ಹೆಚ್ಚಾಗೆ ಇರುವುದರಿಂದ ಸ್ವಿಂಗ್​ ಆಗಲಾರದು. ಒಂದು ವೇಳೆ ಸ್ವಿಂಗ್​ ಬೇಕಾದಲ್ಲಿ ಹೆಚ್ಚು ಹೊತ್ತು ಕಾಯ ಬೇಕು. ಹೆಚ್ಚು ಹೊತ್ತು ಕಾದ ಬಳಿಕ ರಿವರ್ಸ್​ ಸ್ವಿಂಗ್​ ಸಿಗುತ್ತದೆ. ಅಷ್ಟೋತ್ತಿಗೆ, ಬ್ಯಾಟ್ಸ್​ಮನ್ಸ್​ ನೆಲಕ್ಕೂರಿ ಬಿಟ್ಟಿರುತ್ತಾರೆ. ಹೀಗಾಗಿ ಆಗಸ್ಟ್​​ 1 ರಿಂದ ಆರಂಭಗೊಳ್ಳಲಿರುವ 5 ಟೆಸ್ಟ್ ಪಂದ್ಯಗಳ ಸರಣಿ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ