• Home
  • »
  • News
  • »
  • sports
  • »
  • IND vs ENG: ಟೀಂ ಇಂಡಿಯಾ ಕ್ರಿಕೆಟ್ ಇತಿಹಾಸದಲ್ಲೇ ಹೀನಾಯ ಸೋಲು! ಇದು ಎಂದಿಗೂ ಮರೆಯಲಾಗದ ನೋವು ಎಂದ ಫ್ಯಾನ್ಸ್

IND vs ENG: ಟೀಂ ಇಂಡಿಯಾ ಕ್ರಿಕೆಟ್ ಇತಿಹಾಸದಲ್ಲೇ ಹೀನಾಯ ಸೋಲು! ಇದು ಎಂದಿಗೂ ಮರೆಯಲಾಗದ ನೋವು ಎಂದ ಫ್ಯಾನ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs ENG: ಇಂಗ್ಲೆಂಡ್ ಅನ್ನು ಸೋಲಿಸಿ ಪಾಕಿಸ್ತಾನವನ್ನು ಮೆಲ್ಬೋರ್ನ್‌ನಲ್ಲಿ ಎದುರಿಸುವ ಕನಸು ಕಾಣುತ್ತಿತ್ತು, ಆದರೆ ಟೀಮ್ ಇಂಡಿಯಾ ಅಡಿಲೇಡ್‌ನಲ್ಲಿ ಹೀನಾಯವಾಗಿ ಸೋತಿದೆ.

  • Share this:

ಟಿ20 ವಿಶ್ವಕಪ್‌ನ (T20 World Cup) ಎರಡನೇ ಸೆಮಿಫೈನಲ್ ಪಂದ್ಯ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯುವುದಿಲ್ಲ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ (IND vs ENG) ಸೋಲನ್ನು ಭಾರತದ ಕ್ರಿಕೆಟ್ ಪ್ರೇಮಿಗಳು ಮರೆಯಲು ಹೆಚ್ಚು ದಿನ ಬೇಕು ಎಂದನಿಸುತ್ತಿದೆ. ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಆರಂಭಿಕರಿಬ್ಬರೂ ಕೊನೆಯವರೆಗೂ ನಿಂತು ನೋ ಲಾಸ್​ ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆದರೆ ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಇದಕ್ಕಿಂತ ದೊಡ್ಡ ನಿರಾಸೆ ಮತ್ತೊಂದಿಲ್ಲ. ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಕನಸುಗಳು ಕಂಡಿದ್ದ ರೋಹಿತ್ (Rohit Sharmaಪಡೆಗೆ ಇದು ನಿರಾಸೆ ಮೂಡಿಸಿದೆ.


ರೋಹಿತ್ ಶರ್ಮಾ ನಾಯಕತ್ವ, ವಿರಾಟ್ ಕೊಹ್ಲಿಯ ಅಮೋಘ ಫಾರ್ಮ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಬಿರುಗಾಳಿಯ ಇನ್ನಿಂಗ್ಸ್ ಅನ್ನು ಕಲ್ಪಿಸಲಾಗಿತ್ತು. ಆದರೆ ಕ್ರಿಕೆಟ್‌ನ ಜನ್ಮಸ್ಥಳವಾದ ಇಂಗ್ಲೆಂಡ್ ನಲ್ಲಿ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕನಸು ಇಂದು ನುಚ್ಚುನೂರಾಗುವಂತಾಯಿತು.


ಕೋಟ್ಯಾಂತರ ಅಭಿಮಾನಿಗಳ ಕನಸು ಭಗ್ನ:


ಟೀಂ ಇಂಡಿಯಾಗೆ ಇಂಗ್ಲೆಂಡ್ ಎರಡನೇ ಸೆಮಿಫೈನಲ್‌ನಲ್ಲಿ ಆಟದ ಪ್ರತಿಯೊಂದು ಕ್ಷೇತ್ರವೂ ಫೇಲ್​ ಆಯಿತು. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಪ್ರದರ್ಶನ ನೀಡಿತು. ಟಾಸ್ ಗೆದ್ದ ನಂತರ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು ಬೌಲಿಂಗ್​ನಲ್ಲಿ ಮೊದಲು ಯಶಸ್ವಿಯಾದರು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಬಿಟ್ಟರೆ ಟೀಂ ಇಂಡಿಯಾದ ಯಾವ ಬ್ಯಾಟ್ಸ್ ಮನ್ ಗಳೂ ಬಿರುಸಿನ ಆಟವಾಡಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: IND vs ENG TC 2022: ಭಾರತಕ್ಕೆ ಹೀನಾಯ ಸೋಲು, ಫೈನಲ್​ನಲ್ಲಿ ಪಾಕ್​-ಇಂಗ್ಲೆಂಡ್​ ಫೈಟ್​


ಮೊದಲ ಇನಿಂಗ್ಸ್ ಅಂತ್ಯದ ಬಳಿಕ ಇಂಗ್ಲೆಂಡ್ ಆರಂಭಿಕ ಆಟಗಾರ ಕ್ರೀಸ್ ಗೆ ಬಂದಾಗ ಭುವನೇಶ್ವರ್, ಅರ್ಷದೀಪ್, ಅಕ್ಷರ್, ಹಾರ್ದಿಕ್ ರಂತಹ ಬೌಲರ್ ಗಳಿಂದ ಭಾರತದ ಕ್ರೀಡಾ ಪ್ರೇಮಿಗಳು ನಿರಂತರವಾಗಿ ವಿಕೆಟ್ ಗಳ ನಿರೀಕ್ಷೆಯಲ್ಲಿದ್ದರು. ಆದರೆ ಮೊದಲ ಓವರ್‌ನಿಂದ 16ನೇ ಓವರ್‌ವರೆಗೆ ವಿಕೆಟ್‌ ಪಡೆಯದೆ ಸೋತರು. ಇಂಗ್ಲೆಂಡ್​ ಪರ ನಾಯಕ ಜೋಸ್​ ಬಟ್ಲರ್ 49 ಎಸೆತಗಳಲ್ಲಿ 3 ಸಿಕ್ಸ್ ಮತ್ತು 9 ಪೋರ್​ ಮೂಲಕ 80 ರನ್ ಗಳಿಸಿದರೆ, ಅಲೇಕ್ಸ್ ಹೆಲ್ಸ್ 47 ಎಸೆತದಲ್ಲಿ 7 ಸಿಕ್ಸ್ ಮತ್ತು 4 ಬೌಂಡರಿಗಳ ಮೂಲಕ 86 ರನ್ ಗಳಿಸಿ ಮಿಂಚಿದರು.


ಈ ಸೋಲು ಎಂದಿಗೂ ಮರೆಯಲಾಗದು:


ಕಳೆದ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಎದುರು ಮೊದಲ ಬಾರಿಗೆ ಸೋತ ಭಾರತ ಅಂದು ಪಾಕ್ ವಿರುದ್ಧ 10 ವಿಕೆಟ್​ಗಳಿಂದ ಹೀನಾಯವಾಗಿ ಸೋತಿತ್ತು. ಇಂದೂ ಸಹ ಅದೇ ರೀತಿ ಇಂಗ್ಲೆಂಡ್​ ವಿರುದ್ಧ 10 ವಿಕೆಟ್​ಗಳಿಂದ ಹೀನಾಯವಾಗಿ ಸೋತಿದೆ. ಈ ಎರಡೂ ಸೋಲನ್ನು ಭಾರತದ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದೇ ಹೇಳಬಹುದು.


ಇದನ್ನೂ ಓದಿ: IND vs ENG: ವಿರಾಟ್ ಮತ್ತೊಂದು ದಾಖಲೆ, ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್! ನಿಮ್ಗೆ ಸರಿಸಾಟಿಯೇ ಇಲ್ಲ


ಕೊನೆಯ ಇದೇ ವೇಳೆ ಪಾಕಿಸ್ತಾನ ತಂಡ ಟೀಂ ಇಂಡಿಯಾವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. 2022 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನಂತರ, ಟೀಮ್ ಇಂಡಿಯಾ ಬೇಡದ ಸೋಲಿನ ಹೊಸ ದಾಖಲೆಯನ್ನು ಮಾಡಿದೆ. ಈ ತಂಡ T20 ಕ್ರಿಕೆಟ್ ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳಿಂದ ಸೋತ ನಂತರ ಸೆಮಿಫೈನಲ್‌ನಿಂದ ಹೊರನಡೆದ 2ನೇ ತಂಡವಾಗಿದೆ. ಕಳೆದ ವಿಶ್ವಕಪ್‌ನಲ್ಲಿ ತಂಡ ಸೋತಾಗ ವಿರಾಟ್ ಕೊಹ್ಲಿ, ಈ ಬಾರಿ ರೋಹಿತ್ ಶರ್ಮಾ ನಾಯಕರಾಗಿದ್ದರು.

Published by:shrikrishna bhat
First published: