• Home
  • »
  • News
  • »
  • sports
  • »
  • Ind vs Eng T20 World Cup 2022: ಹಾರ್ದಿಕ್ ‘ವಿರಾಟ‘ ದರ್ಶನ, ಇಂಗ್ಲೆಂಡ್​ ಬೌಲರ್​ಗಳಿಗೆ ಬೆವರಿಳಿಸಿದ ಟೀಂ ಇಂಡಿಯಾ

Ind vs Eng T20 World Cup 2022: ಹಾರ್ದಿಕ್ ‘ವಿರಾಟ‘ ದರ್ಶನ, ಇಂಗ್ಲೆಂಡ್​ ಬೌಲರ್​ಗಳಿಗೆ ಬೆವರಿಳಿಸಿದ ಟೀಂ ಇಂಡಿಯಾ

IND vs ENG

IND vs ENG

Ind vs Eng T20 World Cup 2022: ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೂಲಕ ಇಂಗ್ಲೆಂಡ್​ ತಂಡಕ್ಕೆ 169 ರನ್ ಟಾರ್ಗೆಟ್ ನೀಡಿದೆ.

  • Share this:

ಇಂದು ನಡೆಯುತ್ತಿರುವ ಟಿ20 ವಿಶ್ವಕಪ್​ 2022ರ 2ನೇ ಸೆಮಿ ಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಸೆಣಸಾಡುತ್ತಿವೆ. ಈಗಾಗಲೇ ಟಾಸ್​ ಗೆದ್ದಿರುವ ಇಂಗ್ಲೆಂಡ್​ ತಂಡವು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು.  ಈ ಮೂಲಕ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಹಾರ್ದಿಕ್ ಮತ್ತು ವಿರಾಟ್ ಕೊಹ್ಲಿ ಇಬ್ಬರ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೂಲಕ ಇಂಗ್ಲೆಂಡ್​ ತಂಡಕ್ಕೆ 169 ರನ್ ಟಾರ್ಗೆಟ್ ನೀಡಿದೆ.


ಭರ್ಜರಿ ಬ್ಯಾಟಿಂಗ್ ಮಾಡಿದ ಕೊಹ್ಲಿ-ಪಾಂಡ್ಯ:


ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಭಾರತದ ಪರ ಇಂದು ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದರು. ವಿರಾಟ್ ಕೊಹ್ಲಿ 40 ಎಸೆತದಲ್ಲಿ 1 ಸಿಕ್ಸ್ 4 ಪೋರ್​ ಮೂಲಕ ಆಕರ್ಷಕ 50 ರನ್ ಗಳಿಸಿದರು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ 4ನೇ ಅರ್ಧಶತಕ ಸಿಡಿಸಿದರು. ಅಂತಿಮ ಹಂತದಲ್ಲಿ 33 ಎಸೆತದಲ್ಲಿ 5 ಸಿಕ್ಸ್ ಮತ್ತು 4 ಫೋರ್​ಗಳ ಮೂಲಕ 63 ರನ್ ಸಿಡಿಸಿದರು. ಉಳಿದಂತೆ ಕೆಎಲ್ ರಾಹುಲ್ 5 ರನ್, ನಾಯಕ ರೋಹಿತ್ ಶರ್ಮಾ 27 ರನ್, ಸೂರ್ಯಕುಮಾರ್ ಯಾದವ್ 14 ರನ್, ರಿಷಭ್ ಪಂತ್ 6 ರನ್ ಗಳಿಸಿ ತಮಡದ ಮೊತ್ತ ಹೆಚ್ಚಿಸಲು ಸಹಾಯಕರಾದರು.



ಸಂಘಟಿತ ಬೌಲಿಂಗ್ ದಾಳಿ ಮಾಡಿದ ಆಂಗ್ಲರು:


ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ ಉತ್ತಮ ಬೌಲಿಂಗ್ ದಾಳಿ ಮಾಡಿತು. ಕ್ರಿಸ್ ಜೋರ್ಡನ್ 4 ಓವರ್​ಗೆ 3 ವಿಕೆಟ್​ ಪಡೆದರೆ, ಆದಿಲ್ ರಶೀಧ್ ಮತ್ತು ಕ್ರಿಸ್ ವೋಕ್ಸ್ ತಲಾ 1 ವಿಕೆಟ್ ಪಡೆದು ಮಿಂಚಿದರು.


ಇದನ್ನೂ ಓದಿ: IND vs ENG: ವಿರಾಟ್ ಮತ್ತೊಂದು ದಾಖಲೆ, ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್! ನಿಮ್ಗೆ ಸರಿಸಾಟಿಯೇ ಇಲ್ಲ


ದಾಖಲೆ ಬರೆದ ಕಿಂಗ್ ಕೊಹ್ಲಿ:


ಇನ್ನು, ವಿರಾಟ್ ಕೊಹ್ಲಿ ಈ ವಿಶ್ವಕಪ್​ನಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದು, ಇಂದೂ ಸಹ ಭರ್ಜರಿಯಾಗಿ ಅರ್ಧಶತಕ ಸಿಡಿಸಿದರು. ಇಂದು ಅವರು 50 ರನ್ ಗಳಿಸಿ ಮಿಂಚಿದರು. ಈ ವೇಳೆ 42 ರನ್ ಗಳಿಸಿದ ತಕ್ಷಣ ಅವರು ಟಿ20 ಕ್ರಿಕೆಟ್​ನಲ್ಲಿ 4000 ರನ್ ಪೂರೈಸಿದರು. ಅಲ್ಲದೇ 100 ಪೋರ್​ಗಳನ್ನು ಟಿ20 ವಿಶ್ವಕಪ್​ನಲ್ಲಿ ಸಿಡಿಸಿದರು.


IND vs ENG ತಂಡಗಳು:


ಭಾರತ ತಂಡ: ರೋಹಿತ್ ಶರ್ಮಾ(C) , KL ರಾಹುಲ್ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ರಿಷಬ್ ಪಂತ್ , ಭುವನೇಶ್ವರ್ ಕುಮಾರ್ ,ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.


ಇದನ್ನೂ ಓದಿ: IPL: ಈ ಐವರು ಪ್ಲೇಯರ್ಸ್​ಗಳಿಗಾಗಿ ಐಪಿಎಲ್ ಹರಾಜಿನಲ್ಲಿ ನಡೆಯಲಿದೆ ಮೆಗಾ ಫೈಟ್​!


ಇಂಗ್ಲೆಂಡ್ ತಂಡ:  ಅಲೆಕ್ಸ್ ಹೇಲ್ಸ್, ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್), ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ಜೋರ್ಡನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್.

Published by:shrikrishna bhat
First published: