• Home
  • »
  • News
  • »
  • sports
  • »
  • Ind vs Eng T20 World Cup 2022: ಟಾಸ್​ ಗೆದ್ದ ಇಂಗ್ಲೆಂಡ್​, ಓಪನಿಂಗ್ ರೋಹಿತ್ ಬದಲು ಕೊಹ್ಲಿ ಬರ್ತಾರಾ?

Ind vs Eng T20 World Cup 2022: ಟಾಸ್​ ಗೆದ್ದ ಇಂಗ್ಲೆಂಡ್​, ಓಪನಿಂಗ್ ರೋಹಿತ್ ಬದಲು ಕೊಹ್ಲಿ ಬರ್ತಾರಾ?

IND vs ENG

IND vs ENG

IND vs ENG: ಈಗಾಗಲೇ ಟಾಸ್​ ಗೆದ್ದಿರುವ ಇಂಗ್ಲೆಂಡ್​ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡ ಬ್ಯಾಟಿಂಗ್ ಮಾಡಲಿದೆ.

  • Share this:

ಇಂದು ಟಿ20 ವಿಶ್ವಕಪ್​ 2022ರ (T20 World Cup 2022) 2ನೇ ಸೆಮಿ ಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್​ (Ind vs Eng) ತಂಡಗಳು ಸೆಣಸಾಡಲಿವೆ. ಈಗಾಗಲೇ ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್ (PAK vs NZ) ವಿರುದ್ಧ ಗೆದ್ದು ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಹೀಗಾಗಿ ಇಂದು ಗೆದ್ದ ತಂಡವು ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವು ಆಸೀಸ್​ನ ಅಡಿಲೇಡ್​ ಓವಲ್​ನಲ್ಲಿ (Adelaide Oval) ಪಂದ್ಯ ನಡೆಯಲಿದ್ದು, ಈಗಾಗಲೇ ಟಾಸ್​ ಗೆದ್ದಿರುವ ಇಂಗ್ಲೆಂಡ್​ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡ ಬ್ಯಾಟಿಂಗ್ ಮಾಡಲಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವಾಗಿದ್ದು, ಅಂತಿಮ ಜಿಂಬಾಬ್ವೆ ವಿರುದ್ಧ ಕಣಕ್ಕಿಳಿದ ತಂಡವೇ ಇಂದೂ ಸಹ ಕಣಕ್ಕಿಳಿಯಲಿದೆ.


ಪಂದ್ಯದದ ವಿವರ:


ಇಂದು ಟಿ20 ವಿಶ್ವಕಪ್​ನ 2ನೇ ಸೆಮಿ ಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಸೆಣಸಾಡುತ್ತಿದ್ದು, ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ (Adelaide Oval) ನಡೆಯಲಿದೆ. ಪಂದ್ಯದ ನೇರ ಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್​ನಲ್ಲಿ ಉಚಿತವಾಗಿ ನೋಡಬಹುದು.ಪಿಚ್​ ವರದಿ:


ಅಡಿಲೇಡ್ ಓವಲ್ ಮೇಲ್ಮೈ ಅತ್ಯುತ್ತಮ ಬ್ಯಾಟಿಂಗ್ ಸ್ನೇಹಿ ಪಿಚ್ ಎಂದು ಪರಿಗಣಿಸಲಾಗಿದೆ. ಅಡಿಲೇಡ್ ಓವಲ್ 90 ಮೀಟರ್‌ಗಳಲ್ಲಿ ಅತಿ ದೊಡ್ಡ ನೇರ ಬೌಂಡರಿಗಳೊಂದಿಗೆ ವಿಶಿಷ್ಟವಾದ ಆಟದ ಆಯಾಮವನ್ನು ಹೊಂದಿದೆ.  ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಶೇಕಡಾ 40 ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿವೆ. ಜೊತೆಗೆ ಇಂದಿನ ಪಂದ್ಯಕ್ಕೆ ಪಂದ್ಯದ ವೇಳೆ ಮಳೆಯಾಗುವ ಯಾವುದೇ ಸಾಧ್ಯತೆ ಇಲ್ಲ ಎನ್ನಲಾಗಿದೆ.


ಇದನ್ನೂ ಓದಿ: Virat Kohli: ಹೊಸ ದಾಖಲೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ, ಮತ್ತೊಂದು ಸಾಧನೆ ಮಾಡ್ತಾರಾ ವಿರಾಟ್?


ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ:


ಇನ್ನು, ಈ ಬಾರಿ ಟಿ20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. 5 ಪಂದ್ಯಗಳಲ್ಲಿ 3 ಅರ್ಧಶತಕ ಸಿಡಿಸಿರುವ ಅವರು ಇಂದೂ ಸಹ ಅಬ್ಬರಿಸುವ ನಿರೀಕ್ಷೆಯಿದೆ. ಅಲ್ಲದೇ ಇಂದು ಕೊಹಲ್ಇ 42 ರನ್ ಗಳಿಸಿದರೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 4000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವುದು ಭಾರತಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಅಲ್ಲದೇ ಇಂದು ಮೊದಲು ಬ್ಯಾಟ್ ಮಾಡುವುದರಿಂದ ನಂತರ ಬೌಲಿಂಗ್​ನಲ್ಲಿ ಉತ್ತಮವಾಗಿ ಮಾಡಬೇಕಾಗಿದೆ.


ಇದನ್ನೂ ಓದಿ: IND vs ENG T20 WC 2022: ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಕಾಟ? ಮ್ಯಾಚ್​ ರದ್ದಾದರೆ ಫೈನಲ್​ಗೆ ಯಾವ ತಂಡ ಹೋಗುತ್ತೆ?


IND vs ENG ತಂಡಗಳು:


ಭಾರತ ತಂಡ: ರೋಹಿತ್ ಶರ್ಮಾ(C) , KL ರಾಹುಲ್ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ರಿಷಬ್ ಪಂತ್ , ಭುವನೇಶ್ವರ್ ಕುಮಾರ್ ,ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.


ಇಂಗ್ಲೆಂಡ್ ತಂಡ:  ಅಲೆಕ್ಸ್ ಹೇಲ್ಸ್, ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್), ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ಜೋರ್ಡನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್.

Published by:shrikrishna bhat
First published: