• Home
  • »
  • News
  • »
  • sports
  • »
  • IND vs ENG TC 2022: ಭಾರತಕ್ಕೆ ಹೀನಾಯ ಸೋಲು, ಫೈನಲ್​ನಲ್ಲಿ ಪಾಕ್​-ಇಂಗ್ಲೆಂಡ್​ ಫೈಟ್​

IND vs ENG TC 2022: ಭಾರತಕ್ಕೆ ಹೀನಾಯ ಸೋಲು, ಫೈನಲ್​ನಲ್ಲಿ ಪಾಕ್​-ಇಂಗ್ಲೆಂಡ್​ ಫೈಟ್​

ಇಂಗ್ಲೆಂಡ್​ ತಂಡಕ್ಕೆ ಜಯ

ಇಂಗ್ಲೆಂಡ್​ ತಂಡಕ್ಕೆ ಜಯ

IND vs ENG TC 2022: ಇಂಗ್ಲೆಂಡ್​ ತಂಡವು  16 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 170 ರನ್ ಗಳಿಸುವ ಮೂಲಕ ಭರ್ಜರಿಯಾಗಿ 10 ವಿಕೆಟ್​ಗಳಿಂದ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ತಂಡಗಳು ನವೆಂಬರ್ 13ರಂದು ಸೆಣಸಾಡಲಿದೆ.

ಮುಂದೆ ಓದಿ ...
  • Share this:

ಇಂದು ನಡೆದ ಟಿ20 ವಿಶ್ವಕಪ್​ 2022ರ 2ನೇ ಸೆಮಿ ಫೈನಲ್​ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್​ ತಂಡವು  16 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 170 ರನ್ ಗಳಿಸುವ ಮೂಲಕ ಭರ್ಜರಿಯಾಗಿ 10 ವಿಕೆಟ್​ಗಳಿಂದ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ತಂಡಗಳು ನವೆಂಬರ್ 13ರಂದು ಸೆಣಸಾಡಲಿದೆ.


ಭರ್ಜರಿ ಬ್ಯಾಟಿಂಗ್ ಮಾಡಿದ ಹೇಲ್ಸ್-ಬಟ್ಲರ್:


ಇಂಗ್ಲೆಂಡ್​ ತಂಡವು  16 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 170 ರನ್ ಗಳಿಸುವ ಮೂಲಕ ಭರ್ಜರಿಯಾಗಿ 10 ವಿಕೆಟ್​ಗಳಿಂದ ಜಯ ದಾಖಲಿಸಿತು. ಇಂಗ್ಲೆಂಡ್​ ಪರ ನಾಯಕ ಜೋಸ್​ ಬಟ್ಲರ್ 49 ಎಸೆತಗಳಲ್ಲಿ 3 ಸಿಕ್ಸ್ ಮತ್ತು 9 ಪೋರ್​ ಮೂಲಕ 80 ರನ್ ಗಳಿಸಿದರೆ, ಅಲೇಕ್ಸ್ ಹೆಲ್ಸ್ 47 ಎಸೆತದಲ್ಲಿ 7 ಸಿಕ್ಸ್ ಮತ್ತು 4 ಬೌಂಡರಿಗಳ ಮೂಲಕ 86 ರನ್ ಗಳಿಸಿ ಮೀಂಚಿದರು. ಈ ಮೂಲಕ ಟಿ20 ವಿಶ್ವಕಪ್​ 2022ರ ಫೈನಲ್​ ಹಂತಕ್ಕೆ ಇಂಗ್ಲೆಂಡ್​ ತಲುಪಿದ್ದು, ಫೈನಲ್​ನಲ್ಲಿ ಪಾಕಿಸ್ತಾನ ಎದುರು ಸೆಣಸಾಡಲಿದೆ.ಬೌಲಿಂಗ್​ನಲ್ಲಿ ಎಡವಿದೆ ಭಾರತ:


ಇನ್ನು, ಭಾರತದ ಬೌಲರ್​ಗಳು ಇಂದು ಇಂಗ್ಲೆಂಡ್​ ವಿರುದ್ಧ ಯಾವುದೇ ಚಮತ್ಕಾರ್ ಮಾಡುವಲ್ಲಿ ವಿಫಲರಾದರು. ಬಟ್ಲರ್ ಮತ್ತು ಹೇಲ್ಸ್ ಅವರನ್ನು ಕಟ್ಟಿ ಹಅಕುವಲ್ಲಿಯೇ ಸೋತ ಭಾರತದ ಬೌಲರ್ಸ್​ ಹೆಚ್ಚಿನ ರನ್ ಬಿಟ್ಟುಕೊಟ್ಟರು. ಭಾರತದ ಪರ ಭುವನೇಶ್ವರ್ ಕುಮಾರ್ 25 ರನ್, ಅರ್ಷದೀಪ್ ಸಿಂಗ್ 15 ರನ್, ಅಕ್ಷರ್ ಪಟೇಲ್ 30 ರನ್, ಮೊಹಮ್ಮದ್ ಶಮಿ 39 ರನ್, ಅಶ್ವಿನ್ 27 ರನ್ 27 ರನ್ ಮತ್ತು ಹಾರ್ದಿಕ್ ಪಟೇಲ್ 34 ರನ್ ಗಳನ್ನು ಬಿಟ್ಟುಕೊಟ್ಟರು.


ಇದನ್ನೂ ಓದಿ: IND vs ENG: ವಿರಾಟ್ ಮತ್ತೊಂದು ದಾಖಲೆ, ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್! ನಿಮ್ಗೆ ಸರಿಸಾಟಿಯೇ ಇಲ್ಲ


ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದ್ದ ಭಾರತ:


ಭಾರತದ ಪರ ಇಂದು ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದರು. ವಿರಾಟ್ ಕೊಹ್ಲಿ 40 ಎಸೆತದಲ್ಲಿ 1 ಸಿಕ್ಸ್ 4 ಪೋರ್​ ಮೂಲಕ ಆಕರ್ಷಕ 50 ರನ್ ಗಳಿಸಿದರು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ 4ನೇ ಅರ್ಧಶತಕ ಸಿಡಿಸಿದರು. ಅಂತಿಮ ಹಂತದಲ್ಲಿ 33 ಎಸೆತದಲ್ಲಿ 5 ಸಿಕ್ಸ್ ಮತ್ತು 4 ಫೋರ್​ಗಳ ಮೂಲಕ 63 ರನ್ ಸಿಡಿಸಿದರು. ಉಳಿದಂತೆ ಕೆಎಲ್ ರಾಹುಲ್ 5 ರನ್, ನಾಯಕ ರೋಹಿತ್ ಶರ್ಮಾ 27 ರನ್, ಸೂರ್ಯಕುಮಾರ್ ಯಾದವ್ 14 ರನ್, ರಿಷಭ್ ಪಂತ್ 6 ರನ್ ಗಳಿಸಿ ತಮಡದ ಮೊತ್ತ ಹೆಚ್ಚಿಸಲು ಸಹಾಯಕರಾದರು.


ಇದನ್ನೂ ಓದಿ: T20 World Cup 2022: ಬಾಂಗ್ಲಾ ಆಟಗಾರರನ್ನು ಮನಶ್ಶಾಸ್ತ್ರಜ್ಞರ ಬಳಿ ಕರೆದೊಯ್ಯುತ್ತಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಆಟಗಾರ


ಪಾಕ್​ - ಇಂಗ್ಲೆಂಡ್​ ಫೈನಲ್ ಫೈಟ್:


ಇನ್ನು, ಇಂದಿನ ಪಂದ್ಯ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ 2022ರ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ನವೆಂಬರ್ 13ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್​ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಯಾವ ತಮಡ ಗೆದ್ದರೂ ಸಹ ಆ ತಂಡಕ್ಕೆ ಇದು 2ನೇ ಟಿ20 ವಿಶ್ವಕಪ್ ಆಗಿರಲಿದೆ.

Published by:shrikrishna bhat
First published: