ಕ್ರಿಕೆಟ್ ಕಾಶಿಯಲ್ಲಿ ಇಂದಿನಿಂದ ಇಂಡೋ-ಆಂಗ್ಲೋ 2ನೇ ಟೆಸ್ಟ್; ಮತ್ತೊಂದು ಹೋರಾಟಕ್ಕೆ ಕೊಹ್ಲಿ ಸಜ್ಜು

news18
Updated:August 9, 2018, 9:18 AM IST
ಕ್ರಿಕೆಟ್ ಕಾಶಿಯಲ್ಲಿ ಇಂದಿನಿಂದ ಇಂಡೋ-ಆಂಗ್ಲೋ 2ನೇ ಟೆಸ್ಟ್; ಮತ್ತೊಂದು ಹೋರಾಟಕ್ಕೆ ಕೊಹ್ಲಿ ಸಜ್ಜು
news18
Updated: August 9, 2018, 9:18 AM IST
ನ್ಯೂಸ್ 18 ಕನ್ನಡ

ಲಂಡನ್ (ಆ. 09): ಇಂದು ಲಂಡನ್​​ನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ತಂಡಗಳು 2ನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಬರ್ಮಿಂಗ್ಹ್ಯಾಮ್ನಲ್ಲಿ ಆರಂಭಿಕ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ಒಂದುಕಡೆಯಾದರೆ, ಸೋತು ಲಾರ್ಡ್ಸ್ ಅಂಗಳಕ್ಕೆ ಕಾಲಿಟ್ಟಿರುವ ಕೊಹ್ಲಿ ಪಡೆ ಮತ್ತೊಂದೆಡೆ ಹೋರಾಟಕ್ಕೆ ಸಜ್ಜಾಗಿ ನಿಂತಿವೆ.

ಟೀಂ ಇಂಡಿಯಾಕ್ಕೆ ತಲೆನೋವಾಗಿರುವುದು ಬ್ಯಾಟಿಂಗ್ ವೈಫಲ್ಯ. ಅದರಲ್ಲೂ ಪ್ರಮುಖವಾಗಿ ಆರಂಭಿಕರು ದೊಡ್ಡ ತಲೆನೋವಾಗಿ ಬಿಟ್ಟಿದ್ದಾರೆ. ಶಿಖರ್ ಧವನ್, ಮುರಳಿ ವಿಜಯ್ ಉತ್ತಮ ಆರಂಭ ಒದಗಿಸದೇ ಇರುವುದು ತಂಡಕ್ಕೆ ಆರಂಭದಲ್ಲೇ ಭಾರೀ ಹಿನ್ನಡೆಯನ್ನು ಉಂಡುಮಾಡಿದೆ. ಹೀಗಾಗಿ ಲಾರ್ಡ್ಸ್ ಅಂಗಳದಲ್ಲಿ ಆರಂಭಿಕರಿಬ್ಬರು ಟೊಂಕ ಕಟ್ಟಿ ನಿಲ್ಲಬೇಕಿದೆ. ಟೀಂ ಇಂಡಿಯಾ ಸಂಪೂರ್ಣವಾಗಿ ನಾಯಕ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದರ ಬದಲು ಉಪನಾಯಕ ಅಜಿಂಕ್ಯಾ ರಹಾನೆ ಹಾಗೂ ಉಳಿದ ಬ್ಯಾಟ್ಸ್​​ಮನ್​​ಗಳು ತಮ್ಮ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಬೇಕು. ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ಚೇತೇಶ್ವರ್ ಪೂಜಾರಗೆ ಈ ಪಂದ್ಯದಲ್ಲಿ ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.

ಇನ್ನು ಇಂಗ್ಲೆಂಡ್ ತಂಡದಲ್ಲಿ ಪ್ರಮುಖವಾಗಿ ಯುವ ಆಟಗಾರರನು ಭರ್ಜರಿ ಫಾರ್ಮ್​​​ನಲ್ಲಿದ್ದಾರೆ. ನಾಯಕ ಜೋ ರೂಟ್,  3 ಕ್ಯಾಚ್ ಕೈ ಚೆಲ್ಲಿದ್ದ ಡೇವಿಡ್ ಮಲನ್ ಬದಲು ಯುವ ಆಟಗಾರ ಒಲ್ಲಿ ಪೋಪ್​ಗೆ ಮಣೆ ಹಾಕಿದ್ದಾರೆ. ಬೌಲಿಂಗ್​​ನಲ್ಲಿ ಆ್ಯಂಡರ್ಸನ್, ಬ್ರಾಡ್ ವೇಗಕ್ಕೆ ಯುವ ವೇಗಿ ಸ್ಯಾಮ್ ಕರನ್ ಸೂಪರ್ ಸಾಥ್ ಕೊಡಬಲ್ಲರು. ಆದರೆ ಇಂಗ್ಲೆಂಡ್ ತಲೆನೋವಿಗೆ ಕಾರಣ ಅನುಭವಿ ಬ್ಯಾಟ್ಸ್​​ಮನ್​​​​ ಅಲೆಸ್ಟರ್ ಕುಕ್ ಕಳೆದ ಪಂದ್ಯದ 2 ಇನ್ನಿಂಗ್ಸ್​​ಗಳಲ್ಲಿ ಅಶ್ವಿನ್​ಗೆ ಔಟಾಗಿದ್ದು.

ಇತ್ತ ಟೀಂ ಇಂಡಿಯಾ ಕೂಡ ಅಶ್ವಿನ್ ಜೊತೆಗೆ ಮತ್ತೋರ್ವ ಸ್ಪಿನ್ನರ್ ಕಣಕ್ಕಿಳಿಸುವ ಸಾಧ್ಯತೆ ಇದೆ. ಕುಲ್ದೀಪ್ ಯಾದವ್ ಟಿ-20 ಹಾಗೂ ಏಕದಿನ ಸರಣಿಯಲ್ಲಿ ಇಂಗ್ಲೆಂಡ್​ಗೆ ಕಗ್ಗಂಟಾಗಿ ಪರಿಣಮಿಸಿದ್ದರು. ಹೀಗಾಗಿ ಇಬ್ಬರು ಸ್ಪಿನ್ನರ್​​ಗಳು ಕಣಕ್ಕಿಳಿದರೆ, ಉಮೇಶ್ ಯಾದವ್​ಗೆ ಆಡುವ 11ರಿಂದ ಹೊರಗುಳಿಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಲಾರ್ಡ್ಸ್ ಅಂಗಳಲ್ಲಿ ಟೀಂ ಇಂಡಿಯಾ ಪಾಲಿಗೆ ಅದೃಷ್ಟದ ಮೈದಾನ ಆಗಿದ್ದು ಕೊಹ್ಲಿ ಪಡೆ ಸರಣಿಯಲ್ಲಿ ಕಂಬ್ಯಾಕ್ ಮಾಡಲು ಉತ್ತಮ ಅವಕಾಶವಿದೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...