India Vs England Test: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಓವಲ್ನಲ್ಲಿ 157 ರನ್ಗಳ ಜಯ
India Vs England Test Match Live: ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 191 ರನ್ಗಳಿಗೆ ಆಲ್ ಔಟ್ ಆಗುವ ಮೂಲಕ ಭಾರತ ತಂಡ ತೀವ್ರ ಮುಖಭಂಗ ಎದುರಿಸಿತ್ತು. ಆಲ್ರೌಂಡರ್ ಶಾರ್ದುಲ್ ಠಾಕೂರ್ ಹೊರತುಪಡಿಸಿ ಮಿಕ್ಕೆಲ್ಲಾ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳ ಆಟ ಇಂಗ್ಲೆಂಡ್ ತಂಡದ ವಿರುದ್ಧ ನಡೆಯಲಿಲ್ಲ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ (India Vs England Test Series) ಪ್ರತಿಯೊಂದು ಪಂದ್ಯವೂ ಸಾಕಷ್ಟು ಕುತೂಹಲದಿಂದ ಕೂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ನಾಯಕ ವಿರಾಟ್ ಕೊಹ್ಲಿ (Virat Kohli) ಪಡೆ, ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಕಮ್ ಬ್ಯಾಕ್ ಮಾಡುವ ಮೂಲಕ, ಸರಣಿಯಲ್ಲಿ 2-1 (India Leads Series vs England) ಮುನ್ನಡೆ ಸಾಧಿಸಿದೆ. ನಾಲ್ಕನೇ ಟೆಸ್ಟ್ನ ಐದನೇ ದಿನವಾದ ಇಂದು ಇಂಗ್ಲೆಂಡ್ ತಂಡವನ್ನು ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾದ ಭಾರತದ ಬೌಲಿಂಗ್ ಪಡೆ, 157 ರನ್ಗಳ ಅಮೋಘ ಗೆಲುವನ್ನು ತಂದುಕೊಟ್ಟರು.
ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 191 ರನ್ಗಳಿಗೆ ಆಲ್ ಔಟ್ ಆಗುವ ಮೂಲಕ ಭಾರತ ತಂಡ ತೀವ್ರ ಮುಖಭಂಗ ಎದುರಿಸಿತ್ತು. ಆಲ್ರೌಂಡರ್ ಶಾರ್ದುಲ್ ಠಾಕೂರ್ (Shardul Thakur Special Knock) ಹೊರತುಪಡಿಸಿ ಮಿಕ್ಕೆಲ್ಲಾ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳ ಆಟ ಇಂಗ್ಲೆಂಡ್ ತಂಡದ ವಿರುದ್ಧ ನಡೆಯಲಿಲ್ಲ. ಆದರೆ ಉತ್ತಮವಾಗಿ ಬೌಲಿಂಗ್ ಪ್ರದರ್ಶಿಸಿದ ಬುಮ್ರಾ ನೇತೃತ್ವದ ವೇಗಿಗಳು 290 ರನ್ಗಳಿಗೆ ಇಂಗ್ಲೆಂಡ್ ಆಟಗಾರರನ್ನು ಕಟ್ಟಿಹಾಕಿದರು. ಪಿಚ್ ಕೇವಲ ಬೌಲರ್ಗಳಿಗೆ ಸಹಾಯ ಮಾಡುತ್ತಿದೆ ಎಂಬತ್ತಿದ್ದಾಗ, ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ಓಪನರ್ಸ್ಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ಕೆ.ಎಲ್. ರಾಹುಲ್ (KL Rahul) ಉತ್ತಮ ಆರಂಭ ಒದಗಿಸಿದರು. ಇಬ್ಬರೂ ಶತಕದ ಜತೆಯಾಟವಾಡಿದರು. ಅರ್ಧ ಶತಕದ ಅಂಚಿನಲ್ಲಿದ್ದ ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿದರೆ, ರೋಹಿತ್ ಅಮೋಘ ಶತಕ ಸಿಡಿಸಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆಟವಾಡಿ ಇಂಗ್ಲೆಂಡ್ಗೆ 366 ರನ್ಗಳ ಟಾರ್ಗೆಟ್ ನೀಡಿದರು. ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗರಾದ ರೋರಿ (Rory Burns) ಬರ್ನ್ಸ್ ಮತ್ತು (Haseeb Hameed) ಹಸೀಬ್ ಹಮೀದ್ ಒಳ್ಳೆಯ ಪ್ರದರ್ಶನ ನೀಡಿ ಶತಕದ ಜತೆಯಾಟವಾಡಿದರಾದರೂ ಬರ್ನ್ಸ್ 50 ಮತ್ತು ಹಮೀದ್ 63 ರನ್ಗಳಿಗೆ ಹೋರಾಟ ನಿಲ್ಲಿಸಿದರು.ನಂತರ ಬಂದ ಡೇವಿಡ್ ಮಲನ್ (David Malan) ಮತ್ತು ಜೋ ರೂಟ್ (Joe Root) ಇಬ್ಬರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರ ನಂತರ ಬಂದ ಯಾರೂ ಭಾರತದ ದಾಳಿಗೆ ಸರಿಯಾದ ಉತ್ತರ ನೀಡಲೇ ಇಲ್ಲ. ನಾಲ್ಕು ಟೆಸ್ಟ್ಗಳಲ್ಲಿ ಕಳಪೆ ಪ್ರದರ್ಶನ ನೀಡಿ ಆಯ್ಕೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದ್ದ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ಇನ್ನೂ ಜಸ್ಪ್ರೀತ್ ಬುಮ್ರಾ (Jaspreet Bumrah) 2 ಮತ್ತು ಉಮೇಶ್ ಯಾದವ್ (Umesh Yadav) 3 ವಿಕೆಟ್ ಪಡೆದು ಮಿಂಚಿದರು.
ಶಾರ್ದುಲ್ ಠಾಕೂರ್ (Shardul Thakur) ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ (Mohammed Siraj) ಯಾವುದೇ ವಿಕೆಟ್ ಪಡೆಯಲಿಲ್ಲ. ಒಟ್ಟಿನಲ್ಲಿ ಐದು ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಭಾರತ ಮುಂದಿದೆ. ಒಂದು ಪಂದ್ಯ ಗೆದ್ದಿರುವ ಇಂಗ್ಲೆಂಡ್ಗೆ ಮುಂದಿನ ಮತ್ತು ಕಡೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
Published by:Sharath Sharma Kalagaru
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ