ಇಂದು ಅಂತಿಮ ಟೆಸ್ಟ್​ ಪಂದ್ಯ; ಓವಲ್​ ಅಂಗಳದಲ್ಲಿ ಭಾರತ ಊದಲಿದೆಯಾ ಗೆಲುವಿನ ಓಲಗ?

news18
Updated:September 7, 2018, 7:22 AM IST
ಇಂದು ಅಂತಿಮ ಟೆಸ್ಟ್​ ಪಂದ್ಯ; ಓವಲ್​ ಅಂಗಳದಲ್ಲಿ ಭಾರತ ಊದಲಿದೆಯಾ ಗೆಲುವಿನ ಓಲಗ?
news18
Updated: September 7, 2018, 7:22 AM IST
ನ್ಯೂಸ್ 18 ಕನ್ನಡ

ಲಂಡನ್​ (ಸೆ. 07): ಈಗಾಗಲೇ ಸರಣಿ ಸೋತು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾ ಇಂದು ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 2 ತಿಂಗಳ ಸುದೀರ್ಘ ಪ್ರವಾಸದಲ್ಲಿದ್ದ ಕೊಹ್ಲಿ ಪಡೆ ಕೊನೆಯ ಹೋರಾಟಕ್ಕೆ ಅಣಿಯಾಗಿದೆ. ಈಗಾಗಲೇ 5 ಪಂದ್ಯಗಳ ಸರಣಿಯನ್ನ 3-1 ರಿಂದ ತನ್ನ ಕೈ ವಶ ಮಾಡಿಕೊಂಡಿರುವ ಇಂಗ್ಲೆಂಡ್​​ಗೆ ಈ ಪಂದ್ಯ ಔಪಚಾರಿಕವಾಗಿದ್ದರೂ ಗೆಲುವನ್ನ ಬಿಟ್ಟು ಕೊಡಲು ತಯಾರಿಲ್ಲ. ಭಾರತಕ್ಕೂ ಇದು ಪ್ರತಿಷ್ಠೆಯ ಹೋರಾಟವಾಗಿ ಪರಿಣಮಿಸಿದ್ದು ಹೋರಾಟದ ಕಿಚ್ಚನ್ನ ಮತ್ತಷ್ಟು ಹೆಚ್ಚಿಸಿದೆ.

ಈಗಾಗಲೇ ಬಹುತೇಕ ಪ್ರಯೋಗಗಳನ್ನ ನಡೆಸಿರುವ ವಿರಾಟ್​ ಕೊಹ್ಲಿ ಫೈನಲ್​ ಟೆಸ್ಟ್​ ಮ್ಯಾಚ್​ನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ. ಕನ್ನಡಿಗ ಕೆ.ಎಲ್​ ರಾಹುಲ್ ಬದಲು ಯುವ ಆಟಗಾರ ಪೃಥ್ವಿ ಷಾಗೆ ಅವಕಾಶ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಕರುಣ್ ನಾಯರ್​, ಹನುಮ ವಿಹಾರಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಸ್ಪಿನ್ನರ್ ಆರ್​. ಅಶ್ವಿನ್ ಬದಲು ಇಷ್ಟು ದಿನ ಬೆಂಚ್ ಕಾದಿದ್ದ ರವೀಂದ್ರ ಜಡೇಜಾಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

ಇನ್ನು ಸರಣಿ ಗೆದ್ದರು ಇಂಗ್ಲೆಂಡ್ ಈ ಪಂದ್ಯದ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಯಾಕೆಂದರೆ ಈ ಪಂದ್ಯ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಅಲೆಸ್ಟರ್​ ಕುಕ್ ಅವರ ವಿದಾಯದ ಪಂದ್ಯ. ಹೀಗಾಗಿ ಕುಕ್​​ಗೆ ಗೆಲುವಿನ ಉಡುಗೊರೆ ನೀಡಲೇಬೇಕೆಂದು ರೂಟ್​ ಪಡೆ ಸಿದ್ಧಗೊಂಡಿದೆ. ಹೆಚ್ಚೇನು ಬದಲಾವಣೆ ಇಲ್ಲದೆ, ಓವಲ್​ ಅಂಗಳದಲ್ಲಿ ಕಣಕ್ಕಿಳಿಯಲಿದೆ. ಇನ್ನು ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿರುವ ಅಲೆಸ್ಟರ್​ ಓವಲ್​ ಮೈದಾನದಲ್ಲಿ 2 ಶತಕ ಸಿಡಿಸಿದ್ದು ತನ್ನ ಕೊನೆಯ ಟೆಸ್ಟ್​​ ಮ್ಯಾಚ್​ನಲ್ಲೂ ಸೆಂಚುರಿ ಸಿಡಿಸಿ ವಿದಾಯದ ಪಂದ್ಯವನ್ನು ಮತ್ತಷ್ಟು ಸ್ಮರಣೀಯವನ್ನಾಗಿಸಿಕೊಳ್ಳುತ್ತಾ ನೋಡಬೇಕಿದೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626