ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮರುನಿಗದಿಪಡಿಸಲಾದ ಏಕೈಕ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಅನುಭವಿಸಿತು. ಕೊರೋನಾದಿಂದಾಗಿ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವ ರೋಹಿತ್ ಶರ್ಮಾ ಬದಲಾಗಿ ಚೇತೇಶ್ವರ ಪೂಜಾರ ಜೊತೆ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಜೇಮ್ಸ್ ಆ್ಯಂಡರ್ಸನ್ ಅವರ ಅಬ್ಬರದ ಬೌಲಿಂಗ್ಗೆ ಟೀಂ ಇಂಡಿಯಾ ಆರಂಭಿಕರು ಉತ್ತರಿಸಲಾಗದೆ ಫೆವೆಲಿಯನ್ ಅತ್ತ ಹೆಜ್ಜೆ ಹಾಕುವ ಮೂಲಕ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಆದರೆ 2ನೇ ಸೇಶನ್ನಲ್ಲಿ ರಿಷಭ್ ಪಂತ್ ಆರ್ಭಟಕ್ಕೆ ಇಂಗ್ಲೆಂಡ್ ಬೌಲರ್ ಗಳು ಸುಸ್ತಾಗುವ ಮೂಲಕ ಟೀಂ ಇಂಡಿಯಾ ಮೊದಲ ದಿನದ ಅಂತ್ಯದಲ್ಲಿ 73 ಓವರ್ ಗಳಿಗೆ 7 ವಿಕೆಟ್ ನಷ್ಟ್ಕಕೆ 338 ರನ್ ಗಳಿಸಿದೆ.
ಆರಂಭಿಕ ಆಘಾತ ಅನುಭವಿಸಿದ ಭಾರತ:
ಬಹಳಷ್ಟು ಭರವಸೆ ಹೊಂದಿದ್ದ ಶುಭಮನ್ ಗಿಲ್ (17), ಚೇತೆಶ್ವರ ಪೂಜಾರ (13), ಹನುಮ ವಿಹಾರಿ (20), ಶ್ರೇಯಸ್ ಅಯ್ಯರ್ (15) ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು. ಇಂಗ್ಲೆಂಡ್ ವಿರುದ್ಧ ಆರಂಭವಾದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ 98 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೇ ಮತ್ತೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳು ಈ ಬಾರಿ ಆದರೂ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳುತ್ತಾರೆ ಎಂದು ಆಸೆ ಇಟ್ಟು ಕೊಂಡಿದ್ದರು. ಆದರೆ ಕೊಹ್ಲಿ ಸಹ ಕೇವಲ 11 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು. ಅಲ್ಲದೇ ತಂಡವು ಸಂಕಷ್ಟದ ಸಮಯದಲ್ಲಿ ದೃಡವಾಗಿ ನಿಲ್ಲುವಲ್ಲಿ ಮತ್ತೊಮ್ಮೆ ವಿಫಲರಾದರು.
ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ ಪಂತ್:
ಒಂದೆಡೆ ಟೀಂ ಇಂಡಿಯಾ ಬ್ಯಾಟ್ಸ್ಮನ್ ಗಳು ಫೆವೆಲಿಯನ್ ಪರೇಡ್ ನಡೆಸುತ್ತಿದ್ದರೆ ಮತ್ತೊಂದೆಡೆ ರಿಷಭ್ ಪಂತ್ ಇಂಗ್ಲೆಂಡ್ ಬೌಲರ್ ಗಳನ್ನು ಬೆಂಡೆತ್ತುತ್ತಿದ್ದರು. ಹೌದು, ಟೀಂ ಇಂಡಿಯಾಗೆ 5ನೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ರಿಷಭ್ ಪಂತ್ ಆಪತ್ಪಾಂಧವನಾಗಿ ಆಟವಾಡಿದ್ದಾರೆ. ಪಂತ್ ಕೇವಲ 111 ಎಸೆತಗಳಲ್ಲಿ 146 ರನ್ ಗಳಿಸಿದರು. ಇದರಲ್ಲಿ 19 ಬೌಂಡರಿ ಹಾಗೂ 4 ಸಿಕ್ಸರ್ಗಳಿವೆ. ರವೀಂದ್ರ ಜಡೇಜಾ (83 ರನ್, 10 ಬೌಂಡರಿ) ಕೂಡ ಪಂತ್ಗೆ ನೆರವಾದರು, ಭಾರತ ಮೊದಲ ದಿನದಂತ್ಯಕ್ಕೆ 73 ಓವರ್ಗಳಲ್ಲಿ 7 ವಿಕೆಟ್ಗೆ 338 ರನ್ ಗಳಿಸಿತು. ಮಳೆಯಿಂದಾಗಿ ಮೊದಲ ದಿನ 13 ಓವರ್ಗಳನ್ನು ಕಡಿಮೆ ಮಾಡಬೇಕಾಯಿತು. ಪಂತ್ ಮತ್ತು ಜಡೇಜಾ ಆರನೇ ವಿಕೆಟ್ಗೆ 222 ರನ್ ಸೇರಿಸಿದರು.
ಇದನ್ನೂ ಓದಿ: IND vs ENG: ಏಕದಿನ-ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ, ವಿರಾಟ್ ಕೊಹ್ಲಿಗೆ ಶಾಕ್!
ಉತ್ತಮ ಬೌಲಿಂಗ್ ಮಾಡಿದ ಇಂಗ್ಲೆಂಡ್:
ಇನ್ನು, ಟೀಂ ಇಂಡಿಯಾವನ್ನು ನಿಯಂತ್ರಿಸುವಲ್ಲಿ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ ಸಫಲವಾಗಿತ್ತು. ಇಂಗ್ಲೆಂಡ್ ಪರ ಜೇಮ್ಸ್ ಆ್ಯಡ್ರೂಸನ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮೇಥ್ವೆ ಪೋಟ್ಸ್ 2 ಮತ್ತು ಜೋ ರೂಟ್ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Eoin Morgan: ಟಿ 20 ವಿಶ್ವಕಪ್ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಇಂಗ್ಲೆಂಡ್ ನಾಯಕ
ಉಭಯ ತಂಡಗಳ ಆಟಗಾರರ ಪಟ್ಟಿ:
ಭಾರತ: ಜಸ್ಪ್ರೀತ್ ಬುಮ್ರಾ (ನಾಯಕ), ಶುಭಮನ್ ಗಿಲ್, ಚಟೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಕೀಪರ್), ರವೀಂದ್ರ ಜಡೇಜಾ, ಹನುಮ ವಿಹಾರಿ, ಸಿರಾಜ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜ್ಯಾಕ್ ಕ್ರಾಲಿ, ಜೋ ರೂಟ್, ಅಲೆಕ್ಸ್ ಲೀಸ್, ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಮ್ಯಾಥ್ಯೂ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ