ಇಂಗ್ಲೆಂಡ್ (England) ಪ್ರವಾಸದಲ್ಲಿರುವ ಟೀಂ ಇಂಡಿಯಾ(Team India) ಮರುನಿಗದಿಪಡಿಸಲಾದ ಏಕೈಕ ಟೆಸ್ಟ್ (Test) ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಎಡ್ಜ್ ಬಾಸ್ಟನ್ ಮೈದಾನದಲ್ಲಿ ಆಡುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಅನುಭವಿಸಿತು. ಕೊರೋನಾದಿಂದಾಗಿ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವ ರೋಹಿತ್ ಶರ್ಮಾ ಬದಲಾಗಿ ಚೇತೇಶ್ವರ ಪೂಜಾರ ಜೊತೆ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಟೀಂ ಇಂಡಿಯಾ ರಿಷಭ ಪಂತ್ ಮತ್ತು ರವೀಂದ್ರ ಜಡೇಜಾ ಆಕರ್ಷಕ ಶತಕ ಹಾಗೂ ಅಂತಿಮವಾಗಿ ಜಸ್ಪ್ರೀತ್ ಬೂಮ್ರಾ ಅಬ್ಬರದ ನೆರವಿನಿಂದ ಭಾರತ ತಂಡ ಅಂತಿಮವಾಗಿ 84.5 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 416 ರನ್ ಗಳಿಸಿತು. ನಂತರ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ 2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ.
ಅಬ್ಬರಿಸಿದ ಬೂಮ್ರಾ:
ಇನ್ನು, ಮೊದಲ ಇನ್ನಿಂಗ್ಸ್ ನಲ್ಲಿ ರಿಷಭ ಪಂತ್ ಮತ್ತು ರವೀಂದ್ರ ಜಡೇಜಾ ಆಕರ್ಷಕ ಶತಕ ಹಾಗೂ ಅಂತಿಮವಾಗಿ ಜಸ್ಪ್ರೀತ್ ಬೂಮ್ರಾ ಅಬ್ಬರದ ನೆರವಿನಿಂದ ಭಾರತ ತಂಡ ಅಂತಿಮವಾಗಿ 84.5 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 416 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿರುವ ಇಂಗ್ಲೆಂಡ್ ತಂಡಕ್ಕೆ ಬೂಮ್ರಾ ಶಾಕ್ ನೀಡಿದ್ದಾರೆ. 11 ಓವರ್ ನಲ್ಲಿ 35 ರನ್ ನೀಡಿ ಬರೋಬ್ಬರಿ 3 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡದ ಪತನಕ್ಕೆ ಪ್ರಮುಖ ಕಾರಣರಾದರು. ಉಳಿದಂತೆ ಮೊಹ್ಮದ್ ಶಮಿ ಮತ್ತು ಮೊಹ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಬ್ಯಾಟಿಂಗ್ನಲ್ಲಿ ಎಡವಿದ ಆಂಗ್ಲರು:
ಭಾರತ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತ್ತರಿಸಿರುವ ಆಂಗ್ಲರು, 2ನೇ ದಿನದಾಟದ ಅಂತ್ಯಕ್ಕೆ 27 ಓವರ್ ಗೆ 5 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ. ಇಂಗ್ಲೆಂಡ್ ಪರ ಅಲೇಕ್ಸ್ 6 ರನ್, ಝಾಯ್ ಕಾರ್ವೆಲ್ 9 ರನ್, ಓಲಿ ಪೋಪೆ 10 ರನ್, ಜೋ ರೂಟ್ 31 ರನ್, ಜಾಕ್ ಲೆಚ್ ಶೂನ್ಯಕ್ಕೆ ಔಟಾಗಿದ್ದಾರೆ. ದಿನದ ಅಂತ್ಯದಲ್ಲಿ ಜಾನಿ ಬೇರ್ಸ್ಟೋ 12 ರನ್ ಮತ್ತು ಬೆನ್ ಸ್ಟೋಕ್ 0 ರನ್ ಗಳಸಿ ಇಂದಿಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಇದನ್ನೂ ಓದಿ: Ravindra Jadeja: ಆಂಗ್ಲರ ಹುಟ್ಟಡಗಿಸಿದ ಜಡ್ಡು, ಭರ್ಜರಿ ಶತಕ ಸಿಡಿಸಿದ ಜಡೇಜಾ
ಅಬ್ಬರಿಸಿದ ಜಡ್ಡು ಮತ್ತು ಪಂತ್:
ಟೀಂ ಇಂಡಿಯಾಗೆ 5ನೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ರಿಷಭ್ ಪಂತ್ ಆಪತ್ಪಾಂಧವನಾಗಿ ಆಟವಾಡಿದ್ದಾರೆ. ಪಂತ್ ಕೇವಲ 111 ಎಸೆತಗಳಲ್ಲಿ 146 ರನ್ ಗಳಿಸಿದರು. ಇದರಲ್ಲಿ 19 ಬೌಂಡರಿ ಹಾಗೂ 4 ಸಿಕ್ಸರ್ಗಳಿವೆ. ರವೀಂದ್ರ ಜಡೇಜಾ ಸಹ ಆಂಗ್ಲರ ಪರ ಭರ್ಜರಿ ಶತಕ ಸಿಡಿಸಿದ್ದಾರೆ. ಜಡ್ಡು, 194 ಎಸೆತದಲ್ಲಿ 104 ರನ್ ಗಳಸಿ ಔಟಾದರು. ಅಲ್ಲದೇ ಅಂತಿಮವಾಗಿ ಬ್ಯಾಟಿಂಗ್ ಗೆ ಬಂದ ಜಸ್ಪ್ರೀತ್ ಬೂಮ್ರಾ ಕೇವಲ 16 ಎಸೆತದಲ್ಲಿ 4 ಪೋರ್ ಮತ್ತು 2 ಸಿಕ್ಸರ್ ನೆರವಿನಿಂದ 31 ರನ್ ಸಿಡಿಸಿದರು. ಅದರಲ್ಲಿಯೂ ಒಂದೇ ಓವರ್ ನಲ್ಲಿ 29 ರನ್ ಗಳಿಸುವ ಮೂಲಕ ಕ್ರಿಕೆಟ್ ಲಜೆಂಡ್ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರಿದಿದ್ದಾರೆ.
ಇದನ್ನೂ ಓದಿ: IND vs ENG: ದಿಗ್ಗಜರ ದಾಖಲೆಗಳನ್ನೇ ಅಳಿಸಿದ ಬುಮ್ರಾ! ಏನ್ ಆಟ ಗುರು ಎಂದ ಫ್ಯಾನ್ಸ್
ಉಭಯ ತಂಡಗಳ ಆಟಗಾರರ ಪಟ್ಟಿ:
ಭಾರತ: ಜಸ್ಪ್ರೀತ್ ಬುಮ್ರಾ (ನಾಯಕ), ಶುಭಮನ್ ಗಿಲ್, ಚಟೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಕೀಪರ್), ರವೀಂದ್ರ ಜಡೇಜಾ, ಹನುಮ ವಿಹಾರಿ, ಸಿರಾಜ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜ್ಯಾಕ್ ಕ್ರಾಲಿ, ಜೋ ರೂಟ್, ಅಲೆಕ್ಸ್ ಲೀಸ್, ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಮ್ಯಾಥ್ಯೂ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ