IND vs ENG: ರೋಚಕ ಘಟ್ಟ ತಲುಪಿದ ಭಾರತ-ಇಂಗ್ಲೆಂಡ್ ಪಂದ್ಯ, ಇತಿಹಾಸ ನಿರ್ಮಿಸಲಿದೆಯಾ ಟೀಂ ಇಂಡಿಯಾ?

ಇಂಗ್ಲೆಂಡ್ ತಂಡ 259 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದು, ಅಂತಿಮ ದಿನವಾದ ಇಂದು 100 ಓವರ್​ಗೆ 119 ರನ್ ಗಳಿಸಬೇಕಿದೆ.

IND vs ENG

IND vs ENG

  • Share this:
ಇಂಗ್ಲೆಂಡ್ (England)​ ಪ್ರವಾಸದಲ್ಲಿರುವ ಟೀಂ ಇಂಡಿಯಾ (Team India) ಮರುನಿಗದಿಪಡಿಸಲಾದ ಏಕೈಕ ಟೆಸ್ಟ್ (Test) ಪಂದ್ಯವನ್ನು ಇಂಗ್ಲೆಂಡ್​ ವಿರುದ್ಧ ಎಡ್ಜ್ ಬಾಸ್ಟನ್ ಮೈದಾನದಲ್ಲಿ ಆಡುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಆಕರ್ಷಕ ಶತಕ ಹಾಗೂ ಅಂತಿಮವಾಗಿ ಜಸ್ಪ್ರೀತ್ ಬೂಮ್ರಾ ಅಬ್ಬರದ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 84.5 ಓವರ್​ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 416 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ 284 ರನ್ ಗೆ ಸರ್ವ ಪತನ ಕಂಡಿತು. ಇದಿಂದ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಡ 245 ರನ್ ಗಳಿಗೆ 10 ವಿಕೆಟ್ ಕಳೆದುಕೊಳ್ಳುವ ಮೂಲಕ ಇಂಗ್ಲೆಂಡ್​ ತಂಡಕ್ಕೆ 378 ರನ್ ಗಳ ಟಾರ್ಗೇಟ್ ನೀಡಿತು. ಈ ಮೊತ್ತ ಬೆನ್ನಟ್ಟಿರುವ ಇಂಗ್ಲೆಂಡ್ ತಂಡ 259 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದು, ಅಂತಿಮ ದಿನವಾದ ಇಂದು 100 ಓವರ್​ಗೆ 119 ರನ್ ಗಳಿಸಬೇಕಿದೆ.

2ನೇ ಇನ್ನಿಂಗ್ಸ್ ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ:

ಇನ್ನು, 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಅಲ್ಪ ಮೊತ್ತಕ್ಕೆ ಕುಸಿದಿದೆ. 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಡ 245 ರನ್ ಗಳಿಗೆ 10 ವಿಕೆಟ್ ಕಳೆದುಕೊಳ್ಳುವ ಮೂಲಕ ಇಂಗ್ಲೆಂಡ್​ ತಂಡಕ್ಕೆ 378 ರನ್ ಗಳ ಟಾರ್ಗೇಟ್ ನೀಡಿತು. ಭಾರತದ ಪರ ಶುಭಂ ಗಿಲ್ 4 ರನ್, ಚೇತೆಶ್ವರ್​ ಪೂಜಾರ 66 ರನ್, ಹನುಮವಿಹಾರಿ 11 ರನ್, ವಿರಾಟ್ ಕೊಹ್ಲಿ 20 ರನ್, ರಿಷಭ್ ಪಂತ್ 57 ರನ್, ಶ್ರೇಯಸ್​ ಐಯ್ಯರ್ 19 ರನ್, ರವೀಂದ್ರ ಜಡೇಜಾ 23 ರನ್, ಶಾರ್ದೂಲ್ ಠಾಕೂರ್ 4 ರನ್, ಮೊಹ್ಮದ್ ಶಮಿ 13 ರನ್, ಬೂಮ್ರಾ 7 ರನ್ ಮತ್ತು ಮೊಹ್ಮದ್ ಸಿರಾಜ್ 2 ರನ್ ಗಳಿಸಿದರು.

ಗೆಲುವಿನ ಹೊಸ್ತಿಲಲ್ಲಿ ಆಂಗ್ಲರು:

ಇನ್ನು, 2ನೇ ಇನ್ನಿಂಗ್ಸ್ ನಲ್ಲಿ 378 ರನ್ ಟಾರ್ಗೆಟ್ ಬೆನ್ನತ್ತಿರುವ ಇಂಗ್ಲೆಂಡ್ ತಂಡ 259 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದು, ಅಂತಿಮ ದಿನವಾದ ಇಂದು 100 ಓವರ್​ಗೆ 119 ರನ್ ಗಳಿಸಬೇಕಿದೆ. ಅಂತಿಮ ದಿನವಾದ ಇಂದು ಆಂಗ್ಲರು 119 ರನ್ ಗಳಿಸದ್ದಲ್ಲಿ ಗೆಲುವು ಕಾಣಲಿದೆ. ಇಂಗ್ಲೆಂಡ್ ಪರ ಅಲೇಕ್ಸ್ 56 ರನ್, ಕಾರ್ವೆಲ್ 46 ರನ್ ಗಳಿಸಿ ಔಟಾದರು. ಉಳಿದಂತೆ ಜೋ ರೂಟ್ 76 ರನ್ ಜಾನಿ ಬೇರ್​ಸ್ಟೋ 72 ರನ್ ಗಳಸಿ ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಬರೋಬ್ಬರಿ 100 ಓವರ್​ ಗಳಿಗೆ ಕೇವಲ 119 ರನ್ ಗಳಷ್ಟೇ ಅವಶ್ಯಕತೆ ಇದ್ದು, ಇಂಗ್ಲೆಂಡ್ ಪರ ಇನ್ನೂ 7 ವಿಕೆಟ್ ಗಳಿರುವುದರಿಂದ ಇಂಗ್ಲೆಂಡ್ ಸಲಿಸಲಾಗಿ ಜಯ ದಾಖಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: IND vs ENG: ಬೂಮ್ರಾ ದಾಳಿಗೆ ತತ್ತರಿಸಿದ ಆಂಗ್ಲರು, ಇಲ್ಲಿದೆ 2ನೇ ದಿನದ ಟೆಸ್ಟ್ ಹೈಲೇಟ್ಸ್

ಏನಾದರೂ ಪವಾಡ ನಡೆದಲ್ಲಿ ಮಾತ್ರ ಟೀಂ ಇಂಡಿಯಾ ಜಯ ದಾಖಲಿಸಲಿದೆ. ಇನ್ನು, ಈಗಾಗಲೇ 5 ಟೆಸ್ಟ್ ಪಂದ್ಯದ ಸರಣಿಯಲ್ಲಿ ಭಾರತ ತಮಡ 2 ಪಂದ್ಯಗಳನ್ನು ಗೆದ್ದಿದ್ದು, ಒಂದು ಪಂದ್ಯವನ್ನು ಇಂಗ್ಲೆಂಡ್ ಗೆದ್ದಿದೆ. ಒಂದು ಪಂದ್ಯವು ಡ್ರಾ ನಲ್ಲಿ ಅಂತ್ಯವಾಗಿದ್ದು, ಇಂದಿನ ಪಂದ್ಯ ಇಂಗ್ಲೆಂಡ್ ಗೆದ್ದಲ್ಲಿ ಸರಣಿ ಸಮಬಲವಾಗಲಿದೆ.

ಉಭಯ ತಂಡಗಳ ಆಟಗಾರರ ಪಟ್ಟಿ:

ಭಾರತ: ಜಸ್ಪ್ರೀತ್ ಬುಮ್ರಾ (ನಾಯಕ), ಶುಭಮನ್ ಗಿಲ್, ಚಟೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಕೀಪರ್), ರವೀಂದ್ರ ಜಡೇಜಾ, ಹನುಮ ವಿಹಾರಿ, ಸಿರಾಜ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ.

ಇದನ್ನೂ ಓದಿ: Dinesh Karthik: ಭಾರತ ತಂಡದ ನಾಯಕನಾಗಿ ದಿನೇಶ್ ಕಾರ್ತಿಕ್; ಇಂದು ಸಂಜೆ 7 ಗಂಟೆಗೆ ಪಂದ್ಯ, ಎಲ್ಲಿ ನೋಡಬೇಕು?

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜ್ಯಾಕ್ ಕ್ರಾಲಿ, ಜೋ ರೂಟ್, ಅಲೆಕ್ಸ್ ಲೀಸ್, ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಮ್ಯಾಥ್ಯೂ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್.
Published by:shrikrishna bhat
First published: