IND vs ENG: ಕೊನೆಯ ಟೆಸ್ಟ್​ನಲ್ಲಿ ಎಡವಿದ ಟೀಂ ಇಂಡಿಯಾ, ಇಂಗ್ಲೆಂಡ್​ ತಂಡಕ್ಕೆ ಭರ್ಜರಿ ಜಯ

ಇಂಗ್ಲೆಂಡ್ (England)​ ಪ್ರವಾಸದಲ್ಲಿರುವ ಟೀಂ ಇಂಡಿಯಾ (Team India) ಮರುನಿಗದಿಪಡಿಸಲಾದ ಏಕೈಕ ಟೆಸ್ಟ್ (Test) ಪಂದ್ಯವನ್ನು ಇಂಗ್ಲೆಂಡ್​ ತಂಡ ಗೆಲ್ಲುವ ಮೂಲಕ ಸರಣಿಯನ್ನು ಸಮಬಲದಲ್ಲಿ ಅಂತ್ಯಗೊಳಿಸಿದೆ.

IND vs ENG

IND vs ENG

  • Share this:
ಇಂಗ್ಲೆಂಡ್ (England)​ ಪ್ರವಾಸದಲ್ಲಿರುವ ಟೀಂ ಇಂಡಿಯಾ (Team India) ಮರುನಿಗದಿಪಡಿಸಲಾದ ಏಕೈಕ ಟೆಸ್ಟ್ (Test) ಪಂದ್ಯವನ್ನು ಇಂಗ್ಲೆಂಡ್​ ತಂಡ ಗೆಲ್ಲುವ ಮೂಲಕ ಸರಣಿಯನ್ನು ಸಮಬಲದಲ್ಲಿ ಅಂತ್ಯಗೊಳಿಸಿದೆ.  5 ಪಂದ್ಯಗಳ ಸರಣಿಯಲ್ಲಿ 2-2 ಗೆಲುವಿನ ಮೂಲಕ ಉಭಯ ತಂಡಗಳು ಸರಣಿಯನ್ನು ಹಂಚಿಕೊಂಡಿದೆ. ಉಳಿದ ಒಂದು ಒಂದ್ಯ ಡ್ರಾ ನಲ್ಲಿ ಅಂತ್ಯವಾಗಿದೆ. ಇಂಗ್ಲೆಂಡ್ ತಂಡ 7 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಮಣಿಸಿತು. ಇದರಿಂದಾಗಿ ಐದು ಪಂದ್ಯಗಳ ಸರಣಿ 2-2ರಲ್ಲಿ ಸಮಬಲವಾಯಿತು. 378 ರನ್‌ಗಳ ಟಾರ್ಗೆಟ್​ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡವು 4ನೇ ದಿನದಾಟದ ಅಂತ್ಯಕ್ಕೆ  3 ವಿಕೆಟ್‌ಗೆ 259 ರನ್‌ ಗಳಿಸಿತ್ತು. ಇಂದು ಕೊನೆಯ ದಿನದ ಆಟ ಮುಂದುವರಿಸಿದ ಇಂಗ್ಲೆಂಡ್ 76.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 378 ರನ್ ಗಳಿಸಿ ಜಯ ಸಾಧಿಸಿತು. 

ಅಬ್ಬರಿಸಿದ ರೂಟ್:

ಇನ್ನು, 378 ರನ್‌ಗಳ ಟಾರ್ಗೆಟ್​ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡವು 4ನೇ ದಿನದಾಟದ ಅಂತ್ಯಕ್ಕೆ  3 ವಿಕೆಟ್‌ಗೆ 259 ರನ್‌ ಗಳಿಸಿತ್ತು. ಇಂದು ಕೊನೆಯ ದಿನದ ಆಟ ಮುಂದುವರಿಸಿದ ಇಂಗ್ಲೆಂಡ್ 76.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 378 ರನ್ ಗಳಿಸಿ ಜಯ ಸಾಧಿಸಿತು. ಇಂಗ್ಲೆಂಡ್​ ಪರ ಜೋ ರೂಟ್ ಮತ್ತು ಜಾನಿ ಬೇರ್​ಸ್ಟೋ ಅಬ್ಬರದ ಶತಕದ ನೆರವಿನಿಂದ ಇಂಗ್ಲೆಂಡ್ ಸರಣಿಯನ್ನು ಸಮಬಲಗೊಳಿಸಲು ಸಹಾಯಕವಾಯಿತು. ಜೋ ರೂಟ್ 142 ರನ್ ಮತ್ತು ಜಾನಿ ಬೇರ್​ಸ್ಟೋ 114 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಅಲೇಕ್ಸ್ 56 ರನ್, ಕಾರ್ವೆಲ್ 46 ರನ್ ಗಳಿಸಿ ಔಟಾದರು.

ಬೂಮ್ರಾಗೆ ಸರಣಿ ಶ್ರೇಷ್ಠ ಪ್ರಶಸ್ತಿ:

ಇನ್ನು, ಸರಣಿ ಸಮಬಲಗೊಳ್ಳುವ ಮೂಲಕ ಉಭಯ ತಂಡಗಳ ನಾಯಕರಿಬ್ಬರೂ ಪ್ರಶಸ್ತಿಯನ್ನು ಹಿಡಿದು ಸಂಭ್ರಮಿಸಿದರು. ಈ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಸರಣಿ ಗೆಲುವಿನ ಕನಸು ಭಗ್ನವಾದಂತಾಗಿದೆ. ಆದರೆ 5ನೇ ಮತ್ತು ಕೊನೆಯ ಟೆಸ್ಟ್ ನಲ್ಲಿ ಅಬ್ಬರಿಸಿದ ಜಸ್ಪ್ರಿತ್ ಬೂಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಈ ಸರಣಿಯಲ್ಲಿ 64 ರನ್ ಗೆ 5ವಿಕೆಟ್ ಪಡೆದು ಮಿಂಚಿದ್ದರು. ಬೂಮ್ರಾ 22.47 ಬೌಲಿಂಗ್ ಎವರೇಜ್​ ನಲ್ಲಿ ಬೌಲಿಂಗ್ ಮಾಡಿದ್ದಾರೆ.





ಸರಣಿ ಸಮಬಲ:

ಇಂಗ್ಲೆಂಡ್ 5 ಟೆಸ್ಟ್ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದೆ. ಸರಣಿಯ ಮೊದಲ ನಾಲ್ಕು ಟೆಸ್ಟ್‌ಗಳನ್ನು ಕಳೆದ ವರ್ಷ ಆಡಲಾಗಿತ್ತು, ಆದರೆ ಐದನೇ ಟೆಸ್ಟ್‌ಗೆ ಮೊದಲು, ಟೀಮ್ ಇಂಡಿಯಾದಲ್ಲಿ ಕೊರೊನಾ ವೈರಸ್ ಹರಡುವಿಕೆಯಿಂದಾಗಿ ಪಂದ್ಯವನ್ನು ಮುಂದೂಡಲಾಗಿತ್ತು. ಇನ್ನು, ಜುಲೂ 7ರಿಂದ ಭಾರತ ಮತ್ತು ಇಂಗ್ಲೆಂಡ್​ ತಂಡಗಳ ನಡುವಿನ ಟಿ20 ಸರಣಿ ಆರಂಭವಾಗಲಿದೆ. ಮೊದಲ ಟಿ20 ಪಂದ್ಯ ಜುಲೈ 7 ಮತ್ತು ಜುಲೈ 9ರಂದು ನಡೆಯಲಿದೆ.

ಇದನ್ನೂ ಓದಿ: IND vs ENG: ಏಕದಿನ-ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ, ವಿರಾಟ್​ ಕೊಹ್ಲಿಗೆ ಶಾಕ್!

ಇಂಗ್ಲೆಂಡ್ ಸರಣಿಗೆ ಭಾರತ ತಂಡ ಪ್ರಕಟ:

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಶಮಿ ಮೊಹಮ್ಮದ್, ಕೃಷ್ಣ, ಮೊಹಮ್ಮದ್ ಶಮಿ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.

ಮೊದಲ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.

ಇದನ್ನೂ ಓದಿ: Dinesh Karthik: ಭಾರತ ತಂಡದ ನಾಯಕನಾಗಿ ದಿನೇಶ್ ಕಾರ್ತಿಕ್; ಇಂದು ಸಂಜೆ 7 ಗಂಟೆಗೆ ಪಂದ್ಯ, ಎಲ್ಲಿ ನೋಡಬೇಕು?

ಎರಡನೇ ಮತ್ತು ಮೂರನೇ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವೀಂದ್ರ ಪಟೇಲ್. ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್ ಮತ್ತು ಉಮ್ರಾನ್ ಮಲಿಕ್.
Published by:shrikrishna bhat
First published: