ಭಾರತ-ಇಂಗ್ಲೆಂಡ್ ಟೆಸ್ಟ್: ಗೆಲುವಿನ ಸನಿಹದಲ್ಲಿ ವಿರಾಟ್ ಸೈನ್ಯ

news18
Updated:August 22, 2018, 12:18 AM IST
ಭಾರತ-ಇಂಗ್ಲೆಂಡ್ ಟೆಸ್ಟ್: ಗೆಲುವಿನ ಸನಿಹದಲ್ಲಿ ವಿರಾಟ್ ಸೈನ್ಯ
  • News18
  • Last Updated: August 22, 2018, 12:18 AM IST
  • Share this:
ನ್ಯೂಸ್ 18 ಕನ್ನಡ

ನಾಟಿಂಗ್​​ಹ್ಯಾಮ್​​ನ ಟ್ರೆಂಟ್​ ಬ್ರಿಡ್ಜ್​​​ ಅಂಗಳದಲ್ಲಿ ವಿರಾಟ್ ಕೊಹ್ಲಿ ಸೈನ್ಯ ವಿಜಯದ ಕಹಳೆ ಊದಲು ಅಲ್ಪ ವಿರಾಮ ಸಿಕ್ಕಿದೆ. ಟೀಂ ಇಂಡಿಯಾ ನೀಡಿದ 521 ರನ್​ಗಳ ಬೆಟ್ಟದಂತ ಟಾರ್ಗೆಟ್ ಬೆನ್ನತ್ತಿರುವ ಇಂಗ್ಲೆಂಡ್ ಈಗಾಗಲೇ 9 ವಿಕೆಟ್ ಕಳೆದುಕೊಂಡು ಸೋಲಿನ ಸನಿಹದಲ್ಲಿದೆ. ಅತ್ತ ಭಾರತ ಗೆಲುವನ್ನ ವಿಜೃಂಭಿಸಲು ತಯಾರಾಗಿದೆ.

ವಿಕೆಟ್ ನಷ್ಟವಿಲ್ಲದೆ ನಾಲ್ಕನೇ ದಿನದಾಟ ಆರಂಭಿಸಿದ್ದ ಇಂಗ್ಲೆಂಡ್​​ಗೆ ಆರಂಭದಲ್ಲೇ ಅನುಭವಿ ವೇಗಿ ಇಶಾಂತ್ ಶರ್ಮಾ ಆಘಾತವನ್ನ ನೀಡಿದರು. ಆರಂಭಿಕರಾದ ಅಲೆಸ್ಟರ್ ಕುಕ್(17) ಹಾಗೂ ಕೀಟನ್ ಜೆನ್ನಿಂಗ್ಸ್(13) ಇಬ್ಬರನ್ನು ಪೆವಿಲಿಯನ್​​ಗೆ ಅಟ್ಟಿದರು. ಇದರ ಬೆನ್ನಲ್ಲೇ ನಾಯಕ ಜೋ ರೂಟ್ 13 ರನ್​​​ಗಳಿಸಿದ್ದಾಗ ಜಸ್ಪ್ರೀತ್ ಬುಮ್ರಾ ಬೌಲಿಂಗ್​​ನಲ್ಲಿ ಸೆಕೆಂಡ್ ಸ್ಲಿಪ್​​​ನಲ್ಲಿದ್ದ ಕೆ.ಎಲ್ ರಾಹುಲ್​​ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

3 ವಿಕೆಟ್ ಉರುಳಿದ ಬಳಿಕ ಯುವ ಆಟಗಾರ ಒಲ್ಲಿ ಪೋಪ್ ಶಮಿ ಬೌಲಿಂಗ್​​​​ನಲ್ಲಿ ವಿರಾಟ್ ಹಿಡಿದ ಅದ್ಭುತ ಕ್ಯಾಚ್​​ಗೆ 16ರನ್​​ಗೆ ಔಟಾದರು. ಅದಾದ ಬಳಿಕ 4ನೇ ವಿಕೆಟ್​​ಗೆ ಜೊತೆಯಾದ ಜೋಸ್ ಬಟ್ಲರ್ ಹಾಗೂ ಬೆನ್​ ಸ್ಟೋಕ್ಸ್ ಟೀಂ ಇಂಡಿಯಾ ಬೌಲರ್ಗಳನ್ನು ಕಾಡಿದರು. ಶತಕದ ಜೊತೆಯಾಟವಾಡುವುದರ ಜೊತೆಗೆ ಬಟ್ಲರ್ ಟೆಸ್ಟ್ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಸ್ಟೋಕ್ಸ್ ಅರ್ಧಶತಕ ಸಿಡಿಸಿದರು. ಹೀಗೆ ಭದ್ರವಾಗಿ ನೆಲೆಯೂರಿದ್ದ ಜೋಡಿಯನ್ನು ಬೇರ್ಪಡಿಸಿದ್ದು ಜಸ್ಪ್ರೀತ್ ಬುಮ್ರಾ. 5 ವಿಕೆಟ್ ಪಡೆದ ಬುಮ್ರಾ ಸತತ 2 ಎಸೆತಗಳಲ್ಲಿ ವಿಕೆಟ್ ಉರುಳಿಸಿದರು. ಕ್ರಿಸ್ ವೋಕ್ಸ್, ಬ್ರಾಡ್​​ಗೂ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಕೊನೆಯ ಒಂದು ವಿಕೆಟ್ ಪಡೆಯಲು ಸಾಧ್ಯವಾಗ್ಲಿಲ್ಲ. ಆದಿಲ್ ರಶೀದ್ 30 ಹಾಗೂ ಜೇಮ್ಸ್ ಆಂಡರ್ಸನ್ 8 ರನ್ ಕಲೆಹಾಕಿ ಅಜೇಯರಾಗಿದ್ದಾರೆ. ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿದ್ದು, ಪಂದ್ಯದ ಫಲಿತಾಂಶ ಅಂತಿಮ ದಿನದಾಟಕ್ಕೆ ತಿರುಗಿದೆ. ಭಾರತದ ಗೆಲುವಿಗೆ ಇನ್ನೊಂದೇ ವಿಕೆಟ್ ಬೇಕಿದೆ. ಇನ್ನು ಈ ಪಂದ್ಯದಲ್ಲಿ ಒಂದೂ ಕ್ಯಾಚ್ ಕೈ ಚೆಲ್ಲದೆ ಒಟ್ಟಾರೆ 7 ಕ್ಯಾಚ್ ಹಿಡಿದ ಕೆ. ಎಲ್ ರಾಹುಲ್ ದಾಖಲೆ ಪುಟ ಸೇರಿದ್ದಾರೆ.
First published: August 22, 2018, 12:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading