News18 India World Cup 2019

ಆಂಗ್ಲರನ್ನು ಬಗ್ಗುಬಡಿದ ಭಾರತ; 3ನೇ ಟೆಸ್ಟ್​​ ಗೆದ್ದು ಸರಣಿ ಜೀವಂತ ಉಳಿಸಿದ ಕೊಹ್ಲಿ ಪಡೆ

news18
Updated:August 22, 2018, 7:08 PM IST
ಆಂಗ್ಲರನ್ನು ಬಗ್ಗುಬಡಿದ ಭಾರತ; 3ನೇ ಟೆಸ್ಟ್​​ ಗೆದ್ದು ಸರಣಿ ಜೀವಂತ ಉಳಿಸಿದ ಕೊಹ್ಲಿ ಪಡೆ
news18
Updated: August 22, 2018, 7:08 PM IST
ನ್ಯೂಸ್ 18 ಕನ್ನಡ

ನ್ಯಾಟಿಂಗ್​​ಹ್ಯಾಮ್​​ನ ಟ್ರೆಂಟ್ ಬ್ರಿಡ್ಜ್​​​ ಅಂಗಳದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೈನ್ಯ ವಿಜಯದ ಕಹಳೆ ಊದಿದೆ. ಟೀಂ ಇಂಡಿಯಾ ನೀಡಿದ್ದ 521 ರನ್​​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ 317 ರನ್​ಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತ 203 ರನ್​​ಗಳ ಭರ್ಜರಿ ಜಯ ಸಾಧಿಸಿ ಸರಣಿ ಜೀವಂತವಾಗಿರಿಸಿದೆ.

ಇಂಗ್ಲೆಂಡ್ 4ನೇ ದಿನದಾಟದ ಅಂತ್ಯಕ್ಕೆ 311 ರನ್ ಕಲೆಹಾಕಿ 9 ವಿಕೆಟ್ ಕಳೆದುಕೊಂಡಿದ್ದರೆ, ಟೀಂ ಇಂಡಿಯಾ ಗೆಲುವಿಗೆ 1 ವಿಕೆಟ್​​​ ಬೇಕಿತ್ತು. ಅಂತಿಮ ದಿನವಾದ ಇಂದು ಇಂಗ್ಲೆಂಡ್ ಪರ 30 ರನ್ ಬಾರಿಸಿದ್ದ ಆದಿಲ್ ರಶೀದ್ ಹಾಗೂ 8 ರನ್ ಗಳಿಸಿದ್ದ ಜೇಮ್ಸ್ ಆಂಡರ್ಸನ್ ಬ್ಯಾಟಿಂಗ್ ಪ್ರಾರಂಭಿಸಿದರು. ಆದರೆ ಪಂದ್ಯ ಆರಂಭವಾದ 3ನೇ ಓವರ್​​ನ ಅಶ್ವಿನ್​ನ 5ನೇ ಎಸೆತದಲ್ಲಿ ಆಂಡರ್ಸನ್(11) ಔಟ್ ಆಗುವ ಮೂಲಕ ಇಂಗ್ಲೆಂಡ್ 317 ರನ್​​ಗೆ ಆಲೌಟ್ ಆಗಿದೆ.

ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ನಾಯಕ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅವರ ಎಚ್ಚರಿಕೆಯ ಆಟದ ಫಲವಾಗಿ 329 ರನ್​​ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 161 ರನ್​ಗೆ ಆಲೌಟ್ ಆಯಿತು. ಬಳಿಕ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಕೊಹ್ಲಿ ಅವರ ಶತಕ, ಪೂಜಾರ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ನೆರವಿನಿಂದ 352 ರನ್​ಗೆ ಬಾರಿಸಿ 7 ವಿಕೆಟ್ ಕಳೆದುಕೊಂಡಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಬೃಹತ್ ಮುನ್ನಡೆಯೊಂದಿಗೆ ಆಂಗ್ಲರಿಗೆ ಗೆಲ್ಲಲು 521 ರನ್​ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ಗೆ ಜಾಸ್ ಬಟ್ಲರ್ ಶತಕ ಹಾಗೂ ಬೆನ್ ಸ್ಟೋಕ್ಸ್ ಅರ್ಧಶತಕ ಸಿಡಿಸಿದರಾದರು ಉಳಿದ ಬ್ಯಾಟ್ಸ್​ಮನ್​​ಗಳು ಸಾತ್ ನೀಡಲಿಲ್ಲ. ಅಂತಿಮವಾಗಿ 317 ರನ್​​ಗೆ ಇಂಗ್ಲೆಂಡ್ ಆಲೌಟ್ ಆಗುವ ಮೂಲಕ ಟೀಂ ಇಂಡಿಯಾ ಮುಂದೆ ಸೋಲೊಪ್ಪಿಕೊಂಡಿದೆ.

ಈ ಮೂಲಕ ಕೊಹ್ಲಿ ಪಡೆ 203 ರನ್​​ಗಳ ಭರ್ಜರಿ ಜಯ ಕಂಡಿದ್ದು, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2 ಪಂದ್ಯ ಗೆದ್ದಿದ್ದರೆ, ಭಾರತ 1 ಪಂದ್ಯ ಗೆದ್ದಿದೆ. ಮುಂದಿನ 4ನೇ ಟೆಸ್ಟ್​ ಪಂದ್ಯ ಆಗಸ್ಟ್ 30ರಿಂದ ಆರಂಭವಾಗಲಿದೆ.

ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ
Loading...

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್​: 329/10(94.5 ಓವರ್​​)

(ವಿರಾಟ್ ಕೊಹ್ಲಿ 97, ಅಜಿಂಕ್ಯ ರಹಾನೆ 81, ಜೇಮ್ಸ್ ಆಂಡರ್ಸನ್ 64/3, ಕ್ರಿಸ್ ವೋಕ್ಸ್ 75/3)

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 161/10(38.2 ಓವರ್​)

(ಜಾಸ್ ಬಟ್ಲರ್ 39, ಹಾರ್ದಿಕ್ ಪಾಂಡ್ಯ 28/5)

ಭಾರತ ಎರಡನೇ ಇನ್ನಿಂಗ್ಸ್: 352/7(110 ಓವರ್​​)

(ವಿರಾಟ್ ಕೊಹ್ಲಿ 103, ಚೇತೇಶ್ವರ್ ಪೂಜಾರ 72, ಹಾರ್ದಿಕ್ ಪಾಂಡ್ಯ 52, ಆದಿಲ್ ರಶೀದ್ 101/3)

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್​: 317/10(104.5 ಓವರ್​​)

(ಜಾಸ್ ಬಟ್ಲರ್ 106, ಬೆನ್ ಸ್ಟೋಕ್ಸ್​ 62, ಜಸ್ಪ್ರೀತ್ ಬುಮ್ರಾ 85/5)

3ನೇ ಟೆಸ್ಟ್ ಪಂದ್ಯದ ಹೈಲೈಟ್ಸ್:

* ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 161 ರನ್​ಗಳಿಗೆ ಆಲೌಟ್
* ಮೊದಲ ಇನ್ನಿಂಗ್ಸ್​ನಲ್ಲಿ 168 ರನ್​ಗಳ ಮುನ್ನಡೆ ಪಡೆದುಕೊಂಡ ಭಾರತ
* 2ನೇ ಇನ್ನಿಂಗ್ಸ್​ನಲ್ಲಿ ಭಾರತ 357/7 ಡಿಕ್ಲೇರ್, 520 ರನ್​ಗಳ ಮುನ್ನಡೆ
* ಒಂದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್​​ ಬುಮ್ರಾ 5 ವಿಕೆಟ್ ಪಡೆದ ಸಾಧನೆ
* ಒಟ್ಟು ಈ ಪಂದ್ಯದಲ್ಲಿ 200 ರನ್ ಕಲೆಹಾಕಿದ ಕೊಹ್ಲಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ
* 5 ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಭಾರತದ ಮೊದಲ ನಾಯಕ
* ಗಂಗೂಲಿ ದಾಖಲೆ ಮುರಿದ ಕೊಹ್ಲಿ, ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಭಾರತದ 2ನೇ ನಾಯಕ (22)

*ಟೆಸ್ಟ್ ಪಂದ್ಯದ ಗೆಲುವು ಕೇರಳದ ನೆರೆ ಸಂತ್ರಸ್ಥರಿಗೆ ಅರ್ಪಣೆ, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನ ಪತ್ನಿ ಅನುಷ್ಕಾಗೆ ಸಮರ್ಪಣೆ

 

 

 
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...