ಕೊಹ್ಲಿ-ರಹಾನೆ ಭರ್ಜರಿ ಜೊತೆಯಾಟ: ಮೊದಲ ದಿನದಾಟದ ಅಂತ್ಯಕ್ಕೆ ಭಾರತ 307-6

news18
Updated:August 18, 2018, 11:42 PM IST
ಕೊಹ್ಲಿ-ರಹಾನೆ ಭರ್ಜರಿ ಜೊತೆಯಾಟ: ಮೊದಲ ದಿನದಾಟದ ಅಂತ್ಯಕ್ಕೆ ಭಾರತ 307-6
  • News18
  • Last Updated: August 18, 2018, 11:42 PM IST
  • Share this:
ನ್ಯೂಸ್ 18 ಕನ್ನಡ

ನ್ಯಾಟಿಂಗ್​​ಹ್ಯಾಮ್​ನ ಟ್ರೆಂಟ್​​ಬ್ರಿಡ್ಜ್​​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 3ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ ತನ್ನ ಪ್ರಮುಖ 6 ವಿಕೆಟ್ ಕಳೆದುಕೊಂಡು 307ರನ್ ಕಲೆಹಾಕಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಅವರ ಎಚ್ಚರಿಕೆಯ ಆಟದ ಫಲವಾಗಿ ಟೀಂ ಇಂಡಿಯಾ ಮೊದಲ ದಿನ ಮೇಲುಗೈ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಶಿಖರ್ ಧವನ್ ಹಾಗೂ ಕೆ. ಎಲ್. ರಾಹುಲ್ ಮೊದಲ ವಿಕೆಟ್​​ಗೆ 60 ರನ್​ಗಳ ಜೊತೆಯಾಟ ನೀಡಿದರಷ್ಟೆ. ಕಳೆದ ಎರಡು ಟೆಸ್ಟ್​​ನಲ್ಲಿ ಭಾರತ ಮೊದಲ ಬಾರಿ 60 ರನ್​ಗಳ ಆರಂಭ ಪಡೆಯಿತು. ಆದರೆ ಕ್ರಿಸ್ ವೋಕ್ಸ್ ಬೌಲಿಂಗ್ ದಾಳಿಗೆ ಭಾರತದ 3 ಪ್ರಮುಖ ಬ್ಯಾಟ್ಸ್​ಮನ್​ಗಳು ವಿಕೆಟ್ ಒಪ್ಪಿಸಿದರು. 35 ರನ್​ ಗಳಿಸಿರುವಾಗ ಧವನ್ ಔಟ್ ಆದರೆ, ಇದರ ಬೆನ್ನಲ್ಲೆ ರಾಹುಲ್ 23 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಪೂಜಾರ ಕೂಡ ಕೇವಲ 14 ರನ್​ಗೆ ನಿರ್ಗಮಿಸಿ ಆಘಾತ ನೀಡಿದರು.

ಭೋಜನ ವಿರಾಮದ ಹೊತ್ತಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡು ದುಸ್ಥಿತಿಗೆ ತಲುಪಿದ್ದ ಟೀಂ ಇಂಡಿಯಾಕ್ಕೆ ಕೊಹ್ಲಿ ಹಾಗೂ ರಹಾನೆ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಕ್ರೀಸ್ ಕಚ್ಚಿ ಆಡಿದ ಈ ಜೋಡಿ,  ಅರ್ಧಶತಕದ ಸಂಭ್ರಮ ಹಂಚಿಕೊಂಡರು. 4ನೇ ವಿಕೆಟ್​ಗೆ ಕೊಹ್ಲಿ-ರಹಾನೆ 159 ರನ್​ಗಳ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ಆದರೆ 81 ರನ್ ಗಳಿಸಿರುವಾಗ ರಹಾನೆ ಅವರು ಬ್ರಾಡ್ ಎಸೆತದಲ್ಲಿ ಔಟ್ ಆಗಿ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರೆ, ಶತಕದ ಅಂಚಿನಲ್ಲಿ ಎಡವಿದ ಕೊಹ್ಲಿ 97 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ ಜೊತೆಯಾದ ಟೆಸ್ಟ್​ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿರುವ ರಿಷಭ್ ಪಂತ್ ಇನ್ನಿಂಗ್ಸ್ ಕಟ್ಟಲು ಹೊರಟರಾದರು ಪಾಂಡ್ಯ 18 ರನ್​​ಗೆ ಆಂಡರ್ಸನ್​ಗೆ ವಿಕೆಟ್ ಒಪ್ಪಿಸಿ ಔಟ್ ಆದರು. ಈ ವೇಳೆಗೆ ಮೊದಲ ದಿನದಾಟವನ್ನು ಅಂತ್ಯಗೊಳಿಸಲಾಯಿತು. ಸದ್ಯ ಪಂತ್ 22 ರನ್ ಬಾರಿಸಿ ನಾಳೆಗ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದು ಮಿಂಚಿದರೆ, ಆಂಡರ್ಸನ್, ಬ್ರಾಡ್, ಆದಿಲ್ ರಶೀದ್ ತಲಾ 1 ವಿಕೆಟ್ ಕಿತ್ತರು.
First published: August 18, 2018, 11:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading