IND vs ENG: ಪಂತ್​ ಆರ್ಭಟಕ್ಕೆ ನಲುಗಿದ ಆಂಗ್ಲರು, ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ

ಟೀಂ ಇಂಡಿಯಾವು ನಿಗದಿತ  42.1 ಓವರ್ ಗಳಲ್ಲಿ 5  ವಿಕೆಟ್ ನಷ್ಟಕ್ಕೆ 261 ರನ್ ಗಳಿಸುವ ಮೂಲಕ 5 ವಿಕೆಟ್​ ಗಳ ಜಯ ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿತಯನ್ನೂ ಭಾರತ ತಂಡ ಗೆದ್ದು 2-1ರ ಅಂತರದಿಂದ ಗೆದ್ದು ಬೀಗಿತು.

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

  • Share this:
ಭಾರತ ಮತ್ತು ಇಂಗ್ಲೆಂಡ್ (IND vs ENG)​ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ (England)​ ತಂಡ 45.5 ಓವರ್​​ ಗಳಲ್ಲಿ ತನ್ನೆಲ್ಲಾ ವಿಕೆಟ್​ ಗಳನ್ನು ಕಳೆದುಕೊಂಡು 259 ರನ್ ಗಳಿಸಿತು. ಈ ಮೂಲಕ ಆಂಗ್ಲರು ಸಾಧಾರಣ ಮೊತ್ತಕ್ಕೆ ಕುಸಿದರು. ಈ ಮೊತ್ತ ಬೆನ್ನಟ್ಟಿದ ಟೀಂ ಇಂಡಿಯಾ(Team India) ನಿಗದಿತ  42.1 ಓವರ್ ಗಳಲ್ಲಿ 5  ವಿಕೆಟ್ ನಷ್ಟಕ್ಕೆ 261 ರನ್ ಗಳಿಸುವ ಮೂಲಕ 5 ವಿಕೆಟ್​ ಗಳ ಜಯ ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿತಯನ್ನೂ ಭಾರತ ತಂಡ 2-1ರ ಅಂತರದಿಂದ ಗೆದ್ದು ಬೀಗಿತು.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಆಂಗ್ಲರು:

ಇನ್ನು, ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ ತಂಡ 45.5 ಓವರ್​​ ಗಳಲ್ಲಿ ತನ್ನೆಲ್ಲಾ ವಿಕೆಟ್​ ಗಳನ್ನು ಕಳೆದುಕೊಂಡು 259 ರನ್ ಗಳಿಸಿತು. ಈ ಮೂಲಕ ಆಂಗ್ಲರು ಸಾಧಾರಣ ಮೊತ್ತಕ್ಕೆ ಕುಸಿದರು.

ಇಂಗ್ಲೆಂಡ್​ ಪರ ಇಂದು ಜಾನಿ ಬೇರ್​ಸ್ಟೋ, ಜೋ ರೂಟ್ ಮತ್ತು ರೆಸ್ಸೆ ಟೋಪೆಲ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಜೇಸನ್ ರಾಯ್ 41 ರನ್ ಮತ್ತು ನಾಯಕ ಜೋಸ್​ ಬಟ್ಲರ್ 60 ರನ್ ಗಳಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಸಹಾಯಕರಾದರು. ಉಳಿದಂತೆ ಬೆನ್ ಸ್ಟೋಕ್ 27 ರನ್, ಮೋಯಿನ್ ಅಲಿ 34 ರನ್, ಲಿವಿಂಗ್​ಸ್ಟನ್ 27 ರನ್, ಡೇವಿಡ್ ವಿಲ್ಲೆ 18 ರನ್, ಮತ್ತು ಕೊನೆಯಲ್ಲಿ ಓವರ್​ಟೋನ್ 32 ರನ್ ಗಳಸಿದರು.

ಇದನ್ನೂ ಓದಿ: PV Sindhu: ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ 2022 ಚಾಂಪಿಯನ್ ಆಗಿ ಹೊರಹೊಮ್ಮಿದ ಪಿವಿ ಸಿಂಧು

ಹಾರ್ದಿಕ್ ಬೌಲಿಂಗ್​ಗೆ ತತ್ತರಿಸಿದ ಇಂಗ್ಲೆಂಡ್:

ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಆರಂಭಿಸಿದ ಟೀಂ ಇಂಡಿಯಾ ಆಂಗ್ಲರನ್ನು ಮೊದಲಿನಿಂದಲೂ ಉತ್ತಮವಾಗಿ ನಿಯಂತ್ರಿಸಿತು. ಟೀಂ ಇಂಡಿಯಾ ಪರ ಬೌಲಿಂಗ್​ ನಲ್ಲಿ ಮಿಂಚಿದ ಆಲ್​ ರೌಂಡರ್ ಹಾರ್ದಿಕ್ ಪಾಂಡ್ಯ 7 ಓವರ್ ಮಾಡಿ 3 ಓವರ್ ಮೇಡಿನ್​ ಮಾಡಿ 24 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಕುಸಿತಕ್ಕೆ ಕಾರಣರಾದರು. ಉಳಿದಂತೆ ಚಹಾಲ್ 3 ವಿಕೆಟ್, ಮೊಹ್ಮದ್ ಸಿರಾಜ್ 2 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: Unbreakable Records: ಟೆಸ್ಟ್ ಕ್ರಿಕೆಟ್‌ನಲ್ಲಿ ಮುರಿಯಲಾಗದ 10 ದಾಖಲೆಗಳು, 5 ಗಂಟೆ 53 ನಿಮಿಷದ ಟೆಸ್ಟ್ ಪಂದ್ಯದ ಬಗ್ಗೆ ಗೊತ್ತಾ?

ಆಂಗ್ಲರ ನೆಲದಲ್ಲಿ ಶತಕ ಸಿಡಿಸಿ  ಆರ್ಭಟಿಸಿದ ಪಂತ್:

ಇಂಗ್ಲೆಂಡ್ ನೀಡಿದ 259 ರನ್ ಟಾರ್ಗೇಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಉಂಟಾಯಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 17 ರನ್ ಮತ್ತು ಶಿಖರ್ ಧವನ್ ಕೇವಲ 1 ರನ್ ಗಳಸಿ ಔಟಾದರು. ನಂತರ ಬಂದ ವಿರಾಟ್ ಕೊಹ್ಲಿ ಸಹ ಕೇವಲ 17 ರನ್ ಗಳಸಿ ಮತ್ತೆ ನಿರಾಸೆ ಮೂಡಿಸಿದರು. ನಂತರ ಶುರುವಾಗಿದ್ದೇ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿಯ ಅಬ್ಬರ.  ರಿಷಭ್ ಪಂತ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮೂಲಕ 113 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸ್ ಗಳ ನೆರವಿನಿಂದ 125 ರನ್ ಗಳಿಸಿ ಆಂಗ್ಲರ ಹುಟ್ಟಡಗಿಸಿದರು.ಇವರಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 55 ಎಸೆತದಲ್ಲಿ 10 ಪೋರ್​ ಸಿಡಿಸಿ 71 ರನ್ ಗಳಿಸಿ ಮಿಂಚಿದರು. ಉಳಿದಂತೆ ಸೂರ್ಯಕುಮಾರ್ ಯಾಧವ್ 16 ರನ್ ಮತ್ತು ರವೀಂದ್ರ ಜಡೇಜಾ 7 ರನ್ ಗಳಿಸುವ ಮೂಲಕ ತಂಡ ಜಯದ ನಗೆ ಬೀರಿತು.
Published by:shrikrishna bhat
First published: