IND vs ENG: ಭುವನೇಶ್ವರ್​ ಕುಮಾರ್ ದಾಳಿಗೆ ತತ್ತರಿಸಿದ ಆಂಗ್ಲರು, ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ

ಇಂಗ್ಲೆಂಡ್ ತಂಡ  17  ಓವರ್​ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ 49 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಟೀಂ ಇಂಡಿಯಾ ಇನ್ನೂ 1 ಪಂದ್ಯ ಇರುವ ಮುನ್ನವೇ ಸರಣಿಯನ್ನು ವಶಪಡಿಸಿಕೊಂಡಿದೆ.

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

  • Share this:
ಭಾರತ ಮತ್ತು ಇಂಗ್ಲೆಂಡ್ (IND vs ENG)​ ನಡುವಿನ 2ನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್ (England)​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ  17  ಓವರ್​ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ 49 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಟೀಂ ಇಂಡಿಯಾ ಇನ್ನೂ 1 ಪಂದ್ಯ ಇರುವ ಮುನ್ನವೇ ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು, 3 ಪಂದ್ಯಗಳ ಟಿ 20 ಸರಣಿಯಲ್ಲಿ 2-0 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ. 

ಉತ್ತಮ ಮೊತ್ತ ಕಲೆ ಹಾಕಿದ ಭಾರತ ತಂಡ:

ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 31 ರನ್, ರಿಷಭ್ ಪಂತ್ 26 ರನ್, ವಿರಾಟ್ ಕೊಹ್ಲಿ 1 ರನ್, ಸೂರ್ಯಕುಮಾರ್ ಯಾದವ್ 15 ರನ್, ಹಾರ್ದಿಕ್ ಪಾಂಡ್ಯ 12 ರನ್, ರವಿಂದ್ರ ಜಡೇಜಾ 46 ರನ್, ದಿನೇಶ್ ಕಾರ್ತಿಕ್ 12 ರನ್, ಹರ್ಷಲ್ ಪಟೇಲ್ 13 ರನ್ ಮತ್ತು ಭುವನೇಶ್ವರ್ ಕುಮಾರ್ 2 ರನ್ ಗಳಿಸುವ ಮೂಲಕ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಸಹಾಯಕರಾದರು.

ಮತ್ತೆ ನಿರಾಸೆ ಮೂಡಿಸಿದ ಕೊಹ್ಲಿ:

ಇಂಗ್ಲೆಂಡ್​ ನಡುವಿನ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ ಇಂದಿನ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದ್ದರು. ಇಂದಿನ ಪಂದ್ಯದಲ್ಲಾದರೂ ಕೊಹ್ಲಿ ತಮ್ಮ ಹಳೆಯ ಲಯಕ್ಕೆ ಮರಳುತ್ತಾರೆ ಎಂದು ಕೋಟ್ಯಾಂತರ ಭಾರತೀಯರು ಕಾಯುತ್ತಿದ್ದರು. ಆದರೆ ಕೊಹ್ಲಿ ಮತ್ತೆ 1 ರನ್ ಗೆ ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದರು. ಕೊಹ್ಲಿ 3 ಎಸೆತದಲ್ಲಿ 1 ರನ್ ಗಳಿಸಿ ರಿಚರ್ಡ್​ ಅವರ ಬೌಲಿಂಗ್​ ನಲ್ಲಿ ಡೇವಿಡ್ ಮಲಾನ್​ ಗೆ ಕ್ಯಾಚ್​ ನೀಡಿ ಪೆವೆಲಿಯನ್​ ಅತ್ತ ಹೆಜ್ಜೆ ಹಾಕಿದರು.

ಇದನ್ನೂ ಓದಿ: IND vs ENG: ಮತ್ತೆ 1 ರನ್​ಗೆ ಕೊಹ್ಲಿ ಔಟ್​, ಮುಂದೇನ್​ ಮಾಡ್ತಾನೆ ನಮ್ ಹೀರೋ ವಿರಾಟ್?

ಭಾರತದ ದಾಳಿಗೆ ತತ್ತರಿಸಿದ ಆಂಗ್ಲರು:

ಇನ್ನು, ಭಾರತ ತಂಡ ನೀಡಿದ 170 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಆರಂಬಿಕರಾಗಿ ಕಣಕ್ಕಿಳಿದ ಜೆಸನ್ ರಾಯ್ ಶೂನ್ಯಕ್ಕೆ ಔಟಾದರು. ಉಳಿದಂತೆ ನಾಯಕ ಜೋಸ್ ಬಟ್ಲರ್ 4 ರನ್, ಡೇವಿಡ್ ಮಲಾನ್ 19 ರನ್, ಲಿವೀಂಗ್​ಸ್ಟನ್ 15 ರನ್, ಹಾರಿ ಬ್ರೂಕ್ 8 ರನ್, ಮೋಯಿನ್ ಅಲಿ 35 ರನ್, ಸ್ಯಾಮ್ ಕರನ್ 2 ರನ್ , ಡೇವಿಡ್ ವಿಲ್ಲೆ 33 ರನ್, ಕ್ರಿಸ್ ಜೋರ್ಡಾನ್ 1 ರನ್, ರಿಚರ್ಡ್ 2 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಸರಣಿಯನ್ನೂ ಸಹ ಕೈ ಚಲ್ಲಿದೆ.

ಇದನ್ನೂ ಓದಿ: MS Dhoni: ಕಡಕ್‌ನಾತ್ ಕೋಳಿ ಮಾರಾಟಕ್ಕೆ ರೆಡಿಯಾದ ಧೋನಿ, ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಸಂಘಟಿತ ಬೌಲಿಂಗ್ ಮಾಡಿದ ಟೀಂ ಇಂಡಿಯಾ:

ಭಾರತದ ಬೌಲರ್ ಗಳು ಇಂಗ್ಲೆಂಡ್ ತಂಡದ ವಿರುದ್ಧ ಸಂಘಟಿತ ಬೌಲಿಂಗ್ ಮಾಡುವ ಮೂಲಕ ಮಿಂಚಿದರು. ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್3, ಬೂಮ್ರಾ 2, ಚಹಾಲ್​ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.
Published by:shrikrishna bhat
First published: