ಭಾರತ-ಇಂಗ್ಲೆಂಡ್ ಟೆಸ್ಟ್ : ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಮೊತ್ತ 285/9

zahir | news18
Updated:August 1, 2018, 11:46 PM IST
ಭಾರತ-ಇಂಗ್ಲೆಂಡ್ ಟೆಸ್ಟ್ : ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಮೊತ್ತ 285/9
zahir | news18
Updated: August 1, 2018, 11:46 PM IST
-ನ್ಯೂಸ್ 18 ಕನ್ನಡ

ಬರ್ಮಿಂಗ್‌ಹ್ಯಾಮ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ದಿನದಾಟ ಮುಕ್ತಾಯಕ್ಕೆ ಆಂಗ್ಲ ಪಡೆ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿತ್ತು. ತಂಡದ ಮೊತ್ತ 26 ಇದ್ದಾಗ ಆಶ್ವಿನ್ ಎಸೆತಕ್ಕೆ ಕ್ಲೀನ್ ಬೌಲ್ಡ್​ ಆಗಿ ಅಲೆಸ್ಟರ್​ ಕುಕ್​ ನಿರ್ಗಮಿಸಿದರು. ಭೋಜನ ವಿರಾಮದ ವೇಳೆಗೆ 1 ವಿಕೆಟ್​ ನಷ್ಟಕ್ಕೆ 83 ಗಳಿಸಿದ್ದ ಆಂಗ್ಲ ಪಡೆ 15 ರನ್ ಕಲೆಹಾಕುವಷ್ಟರಲ್ಲಿ ತನ್ನ ಎರಡನೇ ವಿಕೆಟ್​ ಕಳೆದುಕೊಂಡಿತು. 42 ರನ್ ಗಳಿಸಿ ಕ್ರೀಸ್​ನಲ್ಲಿದ್ದ ಕೇಟನ್ ಜೆನಿಂಗ್ಸ್ ಮೊಹಮ್ಮದ್ ಶಮಿ ಎಸೆತಕ್ಕೆ ಬೌಲ್ಡ್​ ಆದರು. ಇದರ ಬೆನ್ನಲ್ಲೇ ಡೆವಿಡ್ ಮಲಾನ್ ಅವರನ್ನು ಎಲ್​ಬಿಡಬ್ಲ್ಯೂ ಮಾಡುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾಗಿದ್ದರು.

ಭೋಜನ ವಿರಾಮದ ಬಳಿಕ ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಭಾರತದ ಬೌಲರ್ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳನ್ನು ಕಾಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಇಂಗ್ಲೆಂಡ್ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾಗಿದ್ದರು. ವಿಕೆಟ್ ಕೀಪರ್ ಬ್ಯಾಟ್ಸಮನ್ ಜಾನಿ ಬೈರ್ಸ್ಟೊ ಜೊತೆಗೂಡಿ ದೊಡ್ಡ ಮೊತ್ತವನ್ನು ಕಲೆ ಹಾಕುವ ಸೂಚನೆ ನೀಡಿದ್ದ ಆಂಗ್ಲ ನಾಯಕನನ್ನು ರನೌಟ್ ಮೂಲಕ ಪೆವಿಲಿಯನ್​ಗೆ ಕಳಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಶಸ್ವಿಯಾದರು. ತಂಡದ ಒಟ್ಟು ಮೊತ್ತ 216 ರನ್ ಇದ್ದಾಗ 80 ರನ್ ಗಳಿಸಿ ಜೊ ರೂಟ್ ಔಟಾದರೆ, ವೈಯುಕ್ತಿಕ ಮೊತ್ತ 70 ಗಳಿಸಿ ಜಾನಿ ಬೈರ್ಸ್ಟೊ ಕೂಡ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. 223ಕ್ಕೆ ಆರು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಮತ್ತೊಂದು ರನ್ ಸೇರಿಸುವಷ್ಟರಲ್ಲಿ ಜೋಸ್ ಬಟ್ಲರ್ ನಿರ್ಗಮಿಸಿದರು.

ಆಲ್​ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕುರ್ರನ್ ಒಂದೊಂದೆ ರನ್ ಕಲೆ ಹಾಕುವ ಮೂಲಕ ಮೊದಲ ದಿನದಾಟವನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದರು. ಆದರೆ 21 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್ ಅಶ್ವಿನ್ ಎಸೆದ ಗೂಗ್ಲಿಯನ್ನು ಸರಿಯಾಗಿ ಗುರುತಿಸದೆ ನೇರ ಅಶ್ವಿನ್ ಕೈಗೆ ಕ್ಯಾಚಿತ್ತು ಔಟಾದರು. ತಂಡವು 278 ರನ್ ಗಳಿಸಿದಾಗ ದಾಳಿಗಿಳಿದ ಇಶಾಂತ್ ಶರ್ಮಾ ಇಂಗ್ಲೆಂಡ್​ನ ಆದಿಲ್ ರಶೀದ್​ರನ್ನು ಔಟ್ ಮಾಡಿ ಎಂಟನೇ ಯಶಸ್ಸು ತಂದಿತ್ತರು. 9ನೇ ಬ್ಯಾಟ್ಸ್​ಮನ್ ಆಗಿ ಕ್ರೀಸ್​ಗೆ ಆಗಮಿಸಿದ ಸ್ಟುವರ್ಟ್​ ಬ್ರಾಡ್​ರನ್ನು ಎಲ್​ಬಿಯಲ್ಲಿ ಕೆಡವುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದರು.

ಮೊದಲಾರ್ಧದಲ್ಲಿ ವಿಕೆಟ್​ ಪಡೆಯುವಲ್ಲಿ ಸಾಕಷ್ಟು ಬೆವರಿಳಿಸಿದ್ದ ಟೀಂ ಇಂಡಿಯಾ ಬೌಲರ್​ಗಳು  ಭೋಜನ ವಿರಾಮದ ಬಳಿಕ ಉತ್ತಮ ದಾಳಿ ಸಂಘಟಿಸಿದರು. ಉತ್ತಮ ದಾಳಿ ಮಾಡಿದ ಆರ್.ಅಶ್ವಿನ್ 4 ವಿಕೆಟ್ ಕಬಳಿಸುವಲ್ಲಿ ಯಶ ಕಂಡರೆ, ಸ್ಪಿನ್​ಗೆ ಸಾಥ್ ನೀಡಿದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಇಂಗ್ಲೆಂಡ್ ಪ್ರಮುಖ ಎರಡು ವಿಕೆಟ್​ಗಳನ್ನು ಪಡೆದರು. ಇನ್ನುಳಿದಂತೆ ಭಾರತ ತಂಡಕ್ಕೆ ವಾಪಾಸಾಗಿರುವ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್​ ಉರುಳಿಸಿದರು.

ಇಂಗ್ಲೆಂಡ್ : 285/9

ಜೊ ರೂಟ್ -80
Loading...

ಜಾನಿ ಬೈರ್ಸ್ಟೊ-70

ಭಾರತ

ಆರ್. ಅಶ್ವಿನ್-60/4

ಮೊಹಮ್ಮದ್ ಶಮಿ-64/2
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ