IND vs ENG: ಭಾರತ-ಇಂಗ್ಲೆಂಡ್​ ಮೊದಲ ಏಕದಿನ ಪಂದ್ಯ​, ಈ ಕಾರಣಕ್ಕಾಗಿ ಟೀಂ ಇಂಡಿಯಾದಿಂದ ಕೊಹ್ಲಿ ಔಟ್​!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಸರಣಿಯನ್ನು ಗೆದ್ದುಕೊಂಡಿತ್ತು.

IND vs ENG

IND vs ENG

  • Share this:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯ (IND vs ENG ODI Series) ಇಂದಿನಿಂದ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 (T20) ಸರಣಿಯಲ್ಲಿ 2-1ರಿಂದ ಸರಣಿಯನ್ನು ಗೆದ್ದುಕೊಂಡಿತ್ತು. ಇದೀಗ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ಇದೆ. ಇಂದಿನ ಪಂದ್ಯವು ಇಂಗ್ಲೆಂಡ್​ನ ಓವಲ್‌ನಲ್ಲಿ ನಡೆಯಲಿದೆ. ಇದರ ನಡುವೆ ಟೀಂ ಇಂಡಿಯಾಗೆ ಪಂದ್ಯದ ಆರಂಭಕ್ಕೂ ಮುನ್ನವೇ ಬಿಗ್​ ಶಾಕ್​ ಎದುರಾಗಿದೆ. ಹೌದು, ಭಾರತ ತಂಡದ ಕಿಂಗ್​ ಕೊಹ್ಲಿ (Virat Kohli) ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಗಾಯದ ಕಾರಣ ಕೊಹ್ಲಿ ಮೊದಲ ಏಕದಿನ ಪಂದ್ಯದದಿಂದ ಹೊರಗುಳಿಯಲಿದ್ದಾರೆ ಎಂದು BCCI ಅಧಿಕೃತವಾಗಿ ತಿಳಿಸಿದೆ. ಟೀಂ ಇಂಡಿಯಾ ರೋಹಿತ್​ ಶರ್ಮಾ (Rohit Sharma) ನಾಯಕತ್ವದಲ್ಲಿ ಇಂದು ಕಣಕ್ಕಿಳಿಯಲಿದೆ.

ಪಂದ್ಯದ ವಿವರಗಳು:

ಇಂದು ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯವು ಇಂದು ಇಂಗ್ಲೆಂಡ್​ನ ಓವೆಲ್ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 5:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಕೆನ್ನಿಂಗ್ಟನ್ ಓವಲ್‌ನಲ್ಲಿರುವ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್​ ಎರಡಕ್ಕೂ ಸಹಾಯವಾಗಲಿದೆ. ಆದರೆ ಸಂಜೆಯ ವೇಳೆ ಬ್ಯಾಟಿಂಗ್ ಅವರಿಗೆ ಸಹಾಯವಾಗಲಿದ್ದು, ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: MS Dhoni: ಕಡಕ್‌ನಾತ್ ಕೋಳಿ ಮಾರಾಟಕ್ಕೆ ರೆಡಿಯಾದ ಧೋನಿ, ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಮೊದಲ ಪಂದ್ಯದಿಂದ ಕೊಹ್ಲಿ ಔಟ್​:

ಇನ್ನು, ಮೊದಲೇ ಕಳಪೆ ಫಾರ್ಮ್​ ನಲ್ಲಿರುವ ವಿರಾಟ್​ ಕೊಹ್ಲಿ ಅವರು ಇಂದಿನ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಹೌದು, ಕೊಹ್ಲಿ ಅವರಿಗೆ ಗಾಯದ ಸಮಸ್ಯೆಯಿಂದಾಗಿ ಅವರು ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಕೊಹ್ಲಿ ಅವರಿಗೆ ಕಾಲಿನ ಗಾಯದಿಂದ ಬಳಲುತ್ತಿದ್ದು, ಮೂರನೇ ಟಿ-20 ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. ಹೀಗಾಗಿ ವಿರಾಟ್ ಇಂದಿನ ಪಂದ್ಯದಿಂದ ದೂರ ಉಳಿಯುತ್ತಿದ್ದಾರೆ. ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, 2ನೇ ಏಕದಿನ ಪಂದ್ಯ ಜುಲೈ 14ಕ್ಕೆ ಹಾಗೂ 3ನೇ ಏಕದಿನ ಪಂದ್ಯ ಜುಲೈ 17ಕ್ಕೆ ನಿಗದಿಯಾಗಿದೆ.

ತಂಡಕ್ಕೆ ಮರಳಿದ ಗಬ್ಬರ್ ಸಿಂಗ್:

ಟೀಂ ಇಂಡಿಯಾದ ಹಿರಿಯ ಆಟಗಾರ ಶಿಖರ್ ಧವನ್ ತಂಡಕ್ಕೆ ವಾಪಸಾಗಿದ್ದು, ನಾಯಕ ರೋಹಿತ್ ಜೊತೆಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇದಲ್ಲದೇ ಇಂಗ್ಲೆಂಡ್​ನ ಮೂವರು ಸ್ಟಾರ್ ಆಟಗಾರರಾದ ಬೆನ್​ ಸ್ಟೋಕ್ಸ್, ಜೋ ರೂಟ್ ಮತ್ತು ಬೈರ್‌ಸ್ಟೋವ್ ಆಗಮನದಿಂದ ಇಂಗ್ಲೆಂಡ್ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಇದನ್ನೂ ಓದಿ:  Rohit Sharma: ಕೊಹ್ಲಿ ಬ್ಯಾಟಿಂಗ್​ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಟೀಂ ಇಂಡಿಯಾ ನಾಯಕ ರೋಹಿತ್

ENG vs IND ಸಂಭಾವ್ಯ ತಂಡ:

ಭಾರತ ತಂಡ: ರೋಹಿತ್ ಶರ್ಮಾ (c), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (wk), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್.

ಇಂಗ್ಲೆಂಡ್​ ತಂಡ: ಜೋಸ್ ಬಟ್ಲರ್ (c/wk), ಜಾನಿ ಬೈರ್‌ಸ್ಟೋವ್, ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರೇಗ್ ಓವರ್‌ಟನ್, ಡೇವಿಡ್ ವಿಲ್ಲಿ, ಮ್ಯಾಟ್ ಪಾರ್ಕಿನ್ಸನ್, ರೀಸ್ ಟೋಪ್ಲಿ.
Published by:shrikrishna bhat
First published: