• Home
  • »
  • News
  • »
  • sports
  • »
  • IND vs BAN Asia Cup 2022: ಇಂದು ಭಾರತ-ಬಾಂಗ್ಲಾ ಮುಖಾಮುಖಿ, ನಂಬರ್ ಒನ್ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ

IND vs BAN Asia Cup 2022: ಇಂದು ಭಾರತ-ಬಾಂಗ್ಲಾ ಮುಖಾಮುಖಿ, ನಂಬರ್ ಒನ್ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ

IND vs BAN

IND vs BAN

IND vs BAN Asia Cup 2022:  ಭಾರತೀಯ ಮಹಿಳಾ ಕ್ರಿಕೆಟ್ ತಂಡ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋತಿದೆ. ಈ ಪ್ರತಿಷ್ಠಿತ ಟೂರ್ನಿಯ ಇತಿಹಾಸದಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಭಾರತವನ್ನು ಸೋಲಿಸಿತು. ಟೀಂ ಇಂಡಿಯಾ ಇಂದು ಬಾಂಗ್ಲಾದೇಶವನ್ನು ಎದುರಿಸಲಿದೆ.

  • Share this:

ಭಾರತೀಯ ಮಹಿಳಾ ಕ್ರಿಕೆಟ್ ತಂಡವು (Team India Womens) ಮಹಿಳಾ ಏಷ್ಯಾ ಕಪ್‌ನ (Womens  Asia Cup 2022) ಐದನೇ ಲೀಗ್ ಪಂದ್ಯದಲ್ಲಿ ಶನಿವಾರ (ಅಕ್ಟೋಬರ್ 8) ಆತಿಥೇಯ ಬಾಂಗ್ಲಾದೇಶವನ್ನು (IND W vs BAN W) ) ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತ ಭಾರತ ತಂಡದ ನಂಬರ್ ಒನ್ ಸ್ಥಾನ  ಅಪಾಯದಲ್ಲಿದೆ. ಭಾರತವನ್ನು 13 ರನ್‌ಗಳಿಂದ ಸೋಲಿಸುವ ಮೂಲಕ ಪಾಕಿಸ್ತಾನ ತಂಡವು ಭಾರತದ ಗೆಲುವಿನ ಅಭಿಯಾನಕ್ಕೆ ಬ್ರೇಕ್ ಹಾಕಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಏಳು ತಂಡಗಳ ಅಂಕಪಟ್ಟಿಯಲ್ಲಿ ಭಾರತಕ್ಕೆ ಹತ್ತಿರವಾಗಿದೆ. ಹರ್ಮನ್‌ಪ್ರೀತ್ ಕೌರ್ ಅಂಡ್ ಕೋ ತಂಡಕ್ಕೆ ಬಾಂಗ್ಲಾದೇಶದ ವಿರುದ್ಧ ಜಯದ ಅಗತ್ಯವಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರೆ, ಪಾಕಿಸ್ತಾನ ಅಥವಾ ಆತಿಥೇಯ ತಂಡ ಭಾರತದಿಂದ ನಂಬರ್ ಒನ್ ಸ್ಥಾನವನ್ನು ಕಸಿದುಕೊಳ್ಳಬಹುದು.


ಪಂದ್ಯದ ವಿವರ:


ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಇಂದು ಮಹಿಳೆಯರ ಏಷ್ಯಾಕಪ್ 2022ರಲ್ಲಿ ಮಹತ್ವದ ಪಂದ್ಯ ನಡೆಯಲಿದೆ. ಇಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಟಾಸ್ ಮತ್ತು 1:30ಕ್ಕೆ ಪಂದ್ಯ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ+ಹಾಟ್‌ಸ್ಟಾರ್ ನೀವು ಪಂದ್ಯದ ನೇರಪ್ರಸಾರವನ್ನು ನೋಡಬಹುದು.


ಪಿಚ್​ ವರದಿ:


ಈ ಮೇಲ್ಮೈಯಲ್ಲಿ ರನ್ ಗಳಿಸುವುದು ಕಷ್ಟಕರವಾದ ಕಾರಣ ಈ ಪಿಚ್‌ನಲ್ಲಿ ಟಾಸ್ ಪಾತ್ರವನ್ನು ವಹಿಸುತ್ತದೆ. ತಂಡಗಳು ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ನಿರ್ಬಂಧಿಸಲು ನೋಡುತ್ತವೆ ಮತ್ತು ನಂತರ ಅದನ್ನು ಸುಲಭವಾಗಿ ಬೆನ್ನಟ್ಟುತ್ತವೆ. ಇದು ಸ್ಪಿನ್ನರ್ ಸ್ನೇಹಿ ಟ್ರ್ಯಾಕ್ ಆಗಿದೆ. ಹೀಗಾಗಿ ಇಂದು ಟಾಸ್​ ಗೆದ್ದ ತಂಡ ಮೊದಲು  ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: IND vs PAK Asia Cup 2022: ಟೀಂ ಇಂಡಿಯಾ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದ ಪಾಕಿಸ್ತಾನ ವನಿತೆಯರ ತಂಡ


ನಂಬರ್ ಒನ್ ಸ್ಥಾನದಲ್ಲಿ ಭಾರತ:


ಭಾರತ ತಂಡವು ನಾಲ್ಕು ಪಂದ್ಯಗಳಲ್ಲಿ 3 ರಲ್ಲಿ ಗೆದ್ದು ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಕೂಡ ಅಷ್ಟೇ ಸಂಖ್ಯೆಯ ಪಂದ್ಯಗಳಲ್ಲಿ 6 ಅಂಕಗಳನ್ನು ಹೊಂದಿದೆ. ಅಷ್ಟೇ ಅಂಕಗಳನ್ನು ಹೊಂದಿದ್ದರೂ ನಿವ್ವಳ ರನ್ ರೇಟ್ ಆಧಾರದಲ್ಲಿ ಪಾಕಿಸ್ತಾನ ತಂಡ ಭಾರತಕ್ಕಿಂತ ಹಿಂದಿದೆ. ಭಾರತದ ನಿವ್ವಳ ರನ್ ರೇಟ್ +2.480 ಆಗಿದ್ದರೆ ಪಾಕಿಸ್ತಾನವು +1.684 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.


ಮೂರನೇ ಸ್ಥಾನದಲ್ಲಿರುವ ಆತಿಥೇಯ ಬಾಂಗ್ಲಾದೇಶ:


ಇದುವರೆಗೆ 3 ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಬಾಂಗ್ಲಾ ಗೆದ್ದಿದೆ. ಬಾಂಗ್ಲಾದೇಶ ತಂಡ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶದ ನಿವ್ವಳ ದರ +1.829 ಮತ್ತು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಕಳೆದ ಏಷ್ಯಾಕಪ್‌ನಲ್ಲಿ ಭಾರತವನ್ನು ಸೋಲಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. ಇದಲ್ಲದೇ ಗ್ರೂಪ್ ಹಂತದಲ್ಲೂ ಬಾಂಗ್ಲಾದೇಶ ಭಾರತವನ್ನು ಸೋಲಿಸಿತ್ತು.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಆಘಾತ, ಸ್ಟಾರ್ ಬೌಲರ್​ಗೆ ಇಂಜುರಿ


ಭಾರತ vs ಬಾಂಗ್ಲಾದೇಶ T20 ಹೆಡ್ ಟು ಹೆಡ್:


ಭಾರತ ಮತ್ತು ಬಾಂಗ್ಲಾದೇಶದ ತಂಡಗಳು ಇದುವರೆಗೆ T20 ಪಂದ್ಯಗಳಲ್ಲಿ 12 ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ 2 ಪಂದ್ಯಗಳನ್ನು ಗೆದ್ದಿದೆ. ಬಾಂಗ್ಲಾದೇಶದಲ್ಲಿ ಆಡಿದ 4 ಪಂದ್ಯಗಳಲ್ಲಿ ಭಾರತ ಎಲ್ಲವನ್ನು ಗೆದ್ದಿದೆ. ಅದೇ ಸಮಯದಲ್ಲಿ, ಏಷ್ಯಾದಲ್ಲಿ ಆಡಿದ 11 ಪಂದ್ಯಗಳಲ್ಲಿ, ಭಾರತ 9 ಗೆದ್ದಿದ್ದರೆ, ಬಾಂಗ್ಲಾದೇಶ ಎರಡರಲ್ಲಿ ಗೆದ್ದಿದೆ.

Published by:shrikrishna bhat
First published: