• Home
  • »
  • News
  • »
  • sports
  • »
  • IND vs BAN: ಬಾಂಗ್ಲಾದೇಶ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಜಡೇಜಾ ಔಟ್, ಎಡಗೈ ಆಲ್‌ರೌಂಡರ್‌ಗೆ ಸಿಕ್ತು ಚಾನ್ಸ್ ​

IND vs BAN: ಬಾಂಗ್ಲಾದೇಶ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಜಡೇಜಾ ಔಟ್, ಎಡಗೈ ಆಲ್‌ರೌಂಡರ್‌ಗೆ ಸಿಕ್ತು ಚಾನ್ಸ್ ​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs BAN: ನ್ಯೂಜಿಲೆಂಡ್ ಪ್ರವಾಸದ ನಂತರ ಭಾರತ ತಂಡ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸಕ್ಕೆ ಇಂದು ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಆದರೆ ತಂಡದಿಂದ ಸ್ಟಾರ್​ ಆಲ್​ರೌಂಡರ್​ ಔಟ್​ ಆಗಿದ್ದಾರೆ.

  • Share this:

ಟೀಂ ಇಂಡಿಯಾ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಭಾರತ ಟಿ-20 ಸರಣಿಯನ್ನು ಗೆದ್ದುಕೊಂಡಿದ್ದು, ಇನ್ನೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ನ್ಯೂಜಿಲೆಂಡ್ ಪ್ರವಾಸದ ನಂತರ ಭಾರತ ತಂಡ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದೆ. ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದ್ದು, ತಂಡದಿಂದ ಸ್ಟಾರ್​ ಆಲ್​ರೌಂಡರ್​ನ್ನು ಕೈಬಿಟ್ಟಿದೆ. ಅಲ್ಲದ ಅವರ ಬದಲಿಗೆ ಎಡಗೈ ಆಲ್​ರೌಂಡರ್​ ಅವರಿಗೆ ಅವಕಾಶ ನೀಡಿದೆ. ರವೀಂದ್ರ ಜಡೇಜಾ ಮತ್ತು ಯಶ್ ದಯಾಲ್ ಬದಲಿಗೆ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಮತ್ತು ವೇಗದ ಬೌಲರ್ ಕುಲದೀಪ್ ಸೇನ್ ಅವರಿಗೆ ಈ ಬಾರಿ ಚಾನ್ಸ್ ನೀಡಲಾಗಿದೆ.


ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ  ಟೀಂ ಇಂಡಿಯಾ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್ ಮತ್ತು ಕುಲದೀಪ್ ಸೇನ್.ಏಕದಿನ ಸರಣಿಯಿಂದ ಜಡ್ಡು ಔಟ್​:


ಇನ್ನು, ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿಲ್ಲ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಇದ್ದಾರೆ. ನವೆಂಬರ್ 25 ರಿಂದ ಆಕ್ಲೆಂಡ್‌ನಲ್ಲಿ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ODI ಸರಣಿಗಾಗಿ ಕುಲದೀಪ್ ಸೇನ್ ಮತ್ತು ಶಹಬಾಜ್ ಅಹ್ಮದ್ ಅವರನ್ನು ಆರಂಭದಲ್ಲಿ ತಂಡದಲ್ಲಿ ಹೆಸರಿಸಲಾಯಿತು. ಆದರೆ ಈಗ ಈ ಇಬ್ಬರೂ ಆಟಗಾರರು ಬಾಂಗ್ಲಾದೇಶಕ್ಕೆ ತೆರಳುವ ತಂಡದ ಭಾಗವಾಗಲಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿಗೆ ತೆರಳಿದ್ದ ಭಾರತ ತಂಡದಲ್ಲಿ ಈ ಇಬ್ಬರು ಆಟಗಾರರಿಗೆ ಬದಲಿ ಆಟಗಾರನಾಗಿ ಬೇರೆ ಯಾವುದೇ ಆಟಗಾರ ಸೇರ್ಪಡೆಗೊಂಡಿಲ್ಲ.


ಇದನ್ನೂ ಓದಿ: KL Rahul: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕೆಎಲ್ ರಾಹುಲ್​, ಬಾಂಗ್ಲಾ ವಿರುದ್ಧ ಅಬ್ಬರಿಸೋದು ಪಕ್ಕಾ ಅಂದ್ರು ಫ್ಯಾನ್ಸ್


ಭಾರತದ ಬಾಂಗ್ಲಾದೇಶ ಪ್ರವಾಸ:


ಬಾಂಗ್ಲಾದೇಶ ಪ್ರವಾಸದಲ್ಲಿ ಟೀಂ ಇಂಡಿಯಾ ಎರಡು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಬೇಕಿದೆ. ರೋಹಿತ್ ಶರ್ಮಾ ನಾಯಕತ್ವದ ಬಲಿಷ್ಠ ತಂಡ ಈ ಪ್ರವಾಸಕ್ಕೆ ತೆರಳಲಿದೆ. ಟೀಂ ಇಂಡಿಯಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಏಕದಿನ ಸರಣಿಯ ನಂತರ ಡಿಸೆಂಬರ್ 14 ರಿಂದ 18ರ ವರೆಗೆ ಚಿತ್ತಗಾಂಗ್ ಮತ್ತು ಡಿಸೆಂಬರ್ 22 ರಿಂದ 26ರ ವರೆಗೆ ಮೀರ್ಪುರದಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಸದ್ಯ ಬಿಸಿಸಿಐ ಏಕದಿನ ಸರಣಿಗೆ ಮಾತ್ರ ತಂಡವನ್ನು ಪ್ರಕಟಿಸಿದ್ದು, ಟೆಸ್ಟ್ ಸರಣಿಗೆ ತಂಡ ಇನ್ನಷ್ಟೇ ಪ್ರಕಟಿಸಬೇಕಿದೆ.


ಭಾರತ A ತಂಡ ಸಹ ಪ್ರಕಟ:


ಅಷ್ಟೇ ಅಲ್ಲ, ಬಾಂಗ್ಲಾದೇಶ ಎ ವಿರುದ್ಧದ ಎರಡು ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ ಎ ತಂಡವನ್ನು ಭಾರತೀಯ ಆಯ್ಕೆಗಾರರು ಆಯ್ಕೆ ಮಾಡಿದ್ದಾರೆ.


ಮೊದಲ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಎ ತಂಡ: ಅಭಿಮನ್ಯು ಈಶ್ವರನ್ (ಸಿ), ರೋಹನ್ ಕುನ್ನುಮಲ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಉಪೇಂದ್ರ ಯಾದವ್ (ವಾಕ್), ಸೌರಭ್ ಕುಮಾರ್, ರಾಹುಲ್ ಚಹಾರ್, ಜಯಂತ್ ಯಾದವ್, ಮುಖೇಶ್ ಕುಮಾರ್, ನವದೀಪ್ ಸೈನಿ ಮತ್ತು ಅತಿತ್ ಸೇಠ್.ಎರಡನೇ ಚತುರ್ದಿನ ಪಂದ್ಯಕ್ಕೆ ಭಾರತ ಎ ತಂಡ: ಅಭಿಮನ್ಯು ಈಶ್ವರನ್ (ಸಿ), ರೋಹನ್ ಕುನ್ನುಮಲ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಸರ್ಫರಾಜ್ ಖಾನ್, ಸರ್ಫರಾಜ್ ಖಾನ್, ಉಪೇಂದ್ರ ಯಾದವ್ (WK), ಸೌರಭ್ ಕುಮಾರ್, ರಾಹುಲ್ ಚಾಹರ್, ಜಯಂತ್ ಯಾದವ್, ಮುಖೇಶ್ ಕುಮಾರ್, ನವದೀಪ್ ಸೈನಿ, ಅತಿತ್ ಶೇಠ್, ಚೇತೇಶ್ವರ್ ಪೂಜಾರ, ಕೆಎಸ್ ಭರತ್ (WK), ಉಮೇಶ್ ಯಾದವ್.

Published by:shrikrishna bhat
First published: