• Home
  • »
  • News
  • »
  • sports
  • »
  • IND vs BAN: ನಾಳೆ ಭಾರತ-ಬಾಂಗ್ಲಾ ಸರಣಿ ಆರಂಭ, ಯಾವ ತಂಡ ಹೆಚ್ಚು ಬಲಿಷ್ಠ? ಇಲ್ಲಿದೆ ಉಭಯ ತಂಡಗಳ ಹೆಡ್​ ಟು ಹೆಡ್​

IND vs BAN: ನಾಳೆ ಭಾರತ-ಬಾಂಗ್ಲಾ ಸರಣಿ ಆರಂಭ, ಯಾವ ತಂಡ ಹೆಚ್ಚು ಬಲಿಷ್ಠ? ಇಲ್ಲಿದೆ ಉಭಯ ತಂಡಗಳ ಹೆಡ್​ ಟು ಹೆಡ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs BAN ODI: ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ (Team India) ತಂಡವು ಡಿಸೆಂಬರ್ 4 ರಿಂದ ಬಾಂಗ್ಲಾದೇಶ ವಿರುದ್ಧ (IND vs BAN) 3 ಪಂದ್ಯಗಳ ODI ಸರಣಿಯನ್ನು ಆಡಲಿದೆ. 

  • Share this:

ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ (Team India) ತಂಡವು ಡಿಸೆಂಬರ್ 4 ರಿಂದ ಬಾಂಗ್ಲಾದೇಶ ವಿರುದ್ಧ (IND vs BAN) 3 ಪಂದ್ಯಗಳ ODI ಸರಣಿಯನ್ನು ಆಡಲಿದೆ. ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ ಮತ್ತು ಯಶ್ ದಯಾಳ್ ಅವರಂತಹ ಭರವಸೆಯ ಆಟಗಾರರು ಸೇರಿದಂತೆ ಹಲವು ಹೊಸ ಮುಖಗಳಿಗೆ ಏಕದಿನ ಸರಣಿಗಾಗಿ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ವಿಶ್ರಾಂತಿ ಪಡೆದಿದ್ದ ಕೆಎಲ್ ರಾಹುಲ್ ಜೊತೆಗೆ ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ತಂಡಕ್ಕೆ ವಾಪಸಾಗುತ್ತಿದ್ದಾರೆ.


ಭಾರತ-ಬಾಂಗ್ಲಾ ಹೆಡ್​ ಟು ಹೆಡ್​:


ಭಾರತ ಮತ್ತು ಬಾಂಗ್ಲಾದೇಶ ತಂಡಗಳು (IND vs  BAN Head to Head) ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಾರೆ 36 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಂ ಇಂಡಿಯಾ 30 ಪಂದ್ಯಗಳನ್ನು ಗೆದ್ದಿದ್ದರೆ ಬಾಂಗ್ಲಾದೇಶ 5 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿದೆ. ಪಂದ್ಯವು ಅನಿರ್ದಿಷ್ಟವಾಗಿದೆ. ಭಾರತ ತವರು ನೆಲದಲ್ಲಿ 3 ಏಕದಿನ ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶವು ಅವರ ನೆಲದಲ್ಲಿ 4 ಏಕದಿನ ಪಂದ್ಯಗಳನ್ನು ಗೆದ್ದಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ ತವರಿನಿಂದ 17 ಏಕದಿನ ಪಂದ್ಯಗಳನ್ನು ಗೆದ್ದಿದೆ. ಭಾರತ ತಟಸ್ಥ ಸ್ಥಳಗಳಲ್ಲಿ 10 ಏಕದಿನ ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ ತನ್ನ ಖಾತೆಯಲ್ಲಿ ಒಂದು ಗೆಲುವು ಹೊಂದಿದೆ.


2015ರಲ್ಲಿ ಕೊನೆಯ ಬಾರಿಗೆ ಮುಖಾಮುಖಿ:


ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ನಂತರ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡವನ್ನು ಆತಿಥೇಯ ಬಾಂಗ್ಲಾದೇಶ 2-1 ಅಂತರದಿಂದ ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ ಇದೀಗ ರೋಹಿತ್ ಶರ್ಮಾ ತಂಡಕ್ಕೆ 7 ವರ್ಷದ ಸೋಲಿ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ.


ತಮೀಮ್ ಔಟ್, ಲಿಟನ್ ದಾಸ್ ಗೆ ಕಮಾಂಡ್:


ಬಾಂಗ್ಲಾದೇಶ ಸರಣಿ ಆರಂಭಕ್ಕೂ ಮುನ್ನವೇ ದೊಡ್ಡ ಹೊಡೆತ ನೀಡಿದೆ. ತಂಡದ ನಿಯಮಿತ ನಾಯಕ ತಮೀಮ್ ಇಕ್ಬಾಲ್ ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ತಮೀಮ್ ಬದಲಿಗೆ ಅನುಭವಿ ವಿಕೆಟ್ ಕೀಪರ್ ಲಿಟನ್ ದಾಸ್ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಬಾಂಗ್ಲಾದೇಶ ಕೂಡ ಮೊದಲ ಏಕದಿನ ಪಂದ್ಯದಲ್ಲಿ ವೇಗದ ಬೌಲರ್ ತಸ್ಕಿನ್ ಅಹ್ಮದ್ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ. ಗಾಯದ ಸಮಸ್ಯೆಯಿಂದಾಗಿ ತಸ್ಕಿನ್ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.


ಇದನ್ನೂ ಓದಿ: Dutee Chand: ನಾನು ಗೆಳತಿ, ನೀನೂ ಗೆಳತಿ, ನಮ್ಮಿಬ್ಬರದ್ದು ಸಪ್ತಪದಿ! ಹುಡುಗಿಯನ್ನೇ ವರಿಸಿ ಸಲಿಂಗ ವಿವಾಹವಾದ ಓಟಗಾರ್ತಿ ದ್ಯುತಿ ಚಂದ್!


IND vs BAN ಏಕದಿನ ಸರಣಿಗೆ ತಂಡ:


ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ಇಶಾನ್ ಕಿಶನ್, ರಿಷಭ್ ಪಂತ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಸಿರಾಜ್, ಶಾರ್ದೂಲ್ ಠಾಕೂರ್, ಯಾಸ್ ದಯಾಲ್, ಶಾಬಾಜ್ ಅಹ್ಮದ್, ಶಮಿ, ದೀಪಕ್ ಚಹಾರ್.


ಬಾಂಗ್ಲಾದೇಶ ತಂಡ:  ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್ ಬಿಜೋಯ್, ಶಕಿಬ್ ಅಲ್ ಹಸನ್, ಮುಷ್ಫೀಕುರ್ ರಹೀಮ್, ಅಫೀಫ್ ಹುಸೇನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಎಬಾಡೋತ್ ಹುಸೇನ್, ನಸ್ಮದ್,  ನಸ್ಮದ್ ಶಾಂತೋ, ನೂರುಲ್ ಹಸನ್ ಸೋಹನ್.

Published by:shrikrishna bhat
First published: