• Home
  • »
  • News
  • »
  • sports
  • »
  • T20 WC 2022 IND vs BAN: ಟಾಸ್​ ಗೆದ್ದ ಬಾಂಗ್ಲಾದೇಶ, ಓಪನಿಂಗ್​ ಬ್ಯಾಟ್ಸ್​ಮನ್ ‘ವಿರಾಟ‘ ಎಂಟ್ರಿ?

T20 WC 2022 IND vs BAN: ಟಾಸ್​ ಗೆದ್ದ ಬಾಂಗ್ಲಾದೇಶ, ಓಪನಿಂಗ್​ ಬ್ಯಾಟ್ಸ್​ಮನ್ ‘ವಿರಾಟ‘ ಎಂಟ್ರಿ?

IND vs BAN

IND vs BAN

T20 WC 2022 IND vs BAN: ಈಗಾಗಲೇ ಟಾಸ್​ ಗೆದ್ದ ಬಾಂಗ್ಲಾದೇಶದ ನಾಯಕ ಶಕಿಬ್ ಅಲ್​ ಹಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿದ್ದು, ಭಾರತ ತಂಡ ಬ್ಯಾಟಿಂಗ್​ ಆರಿಂಭಿಸಲಿದೆ.

  • Share this:

ಇಂದು ಟಿ20 ವಿಶ್ವಕಪ್​ನ (T20 WC 2022) 35ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ (IND vs BAN) ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯವು ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ಯಾವ ತಂಡ ಗೆಲ್ಲಲಿದೆಯೋ ಆ ತಂಡಕ್ಕೆ ಸೆಮೀಸ್​ ಹಾದಿ ಇನ್ನಷ್ಟು ಸುಲಭವಾಗಲಿದೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಮತ್ತೊಂದು ರಣ ರೋಚಕ ಪಂದ್ಯಕ್ಕಾಗಿ ಆಸೀಸ್​ನ ಅಡಿಲೇಡ್​ (Adelaide) ಮೈದಾನ ಸಿದ್ಧವಾಗಿದೆ. ಈಗಾಗಲೇ ಟಾಸ್​ ಗೆದ್ದ ಬಾಂಗ್ಲಾದೇಶದ ನಾಯಕ ಶಕಿಬ್ ಅಲ್​ ಹಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿದ್ದು, ಭಾರತ ತಂಡ (Team India) ಬ್ಯಾಟಿಂಗ್​ ಆರಂಭಿಸಲಿದೆ. ಆದರೆ ಕಳೆದ 2 ಪಂದ್ಯಗಳಲ್ಲಿಯೂ ವಿಫಲವಾದ ರಾಹುಲ್ ಬದಲಿಗೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ ಎಂದು ಕಾದು ನೊಡಬೇಕಿದೆ.


ಪಂದ್ಯದ ವಿವರ:


ಇಂದು ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ.  ಈ ಪಂದ್ಯವನ್ನು ಉಚಿತವಾಗಿ ಡಿಡಿ ಸ್ಪೋರ್ಟ್ಸ್ ನಲ್ಲಿ ವೀಕ್ಷಿಸಬಹುದು. ಅಲ್ಲದೇ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮತ್ತು ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.ಪಿಚ್​ ರಿಪೋರ್ಟ್:


ಇಂದು ಟಿ20 ವಿಶ್ವಕಪ್​ನ 35ನೇ ಪಂದ್ಯದಲ್ಲಿ ಭಾರತ-ಬಾಂಗ್ಲಾ ಮುಖಾಮುಖಿ ಆಗಲಿದ್ದು, ಈ ಪಂದ್ಯವು ಅಡಿಲೇಡ್‌ನಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಬ್ಯಾಟಿಂಗ್ ಗೆ ಹೆಚ್ಚು ಉತ್ತಮವಾಗಿದೆ. ಈ ಪಿಚ್​ನಲ್ಲಿ 160 ರನ್ ಸರಾಸರಿ ಸ್ಕೋರ್​ ಆಗಿದ್ದು, ವೇಗಿಗಳಿಗೆ ಹೆಚ್ಚು ಲಾಭವಾಗಲಿದೆ. ಹೀಗಾಗಿ ಮೊದಲು ಬ್ಯಾಟ್​ ಮಾಡಲಿರುವ ಭಾರತ ತಂಡ ದೊಡ್ಡ ಮೊತ್ತದ ಸ್ಕೋರ್​ ಮಾಡುವ ಸಾಧ್ಯತೆ ಇದೆ.


ಇದನ್ನೂ ಓದಿ: Virat Kohli: ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ಕಿಂಗ್​ ಕೊಹ್ಲಿ, ಇಲ್ಲಿವರೆಗೂ ಎಂದು ನಡೆಯದ ಕ್ಷಣಕ್ಕೆ ಸಾಕ್ಷಿಯಾಗಲಿದೆ ಅಡಿಲೇಡ್​


ಟೀಂ ಇಂಡಿಯಾದಲ್ಲಿ ಬದಲಾವಣೆ:


ಇನ್ನು, ಭಾರತ ತಂಡದಲ್ಲಿ ಇಂದು ಪ್ಲೇಯಿಂಗ್​ 11ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಅದರಂತೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ದೀಪಕ್ ಹೂಡಾ ಅವರನ್ನು ಕೈಬಿಡಲಾಗಿದ್ದು, ಅವರ  ಬದಲಿಗೆ ಮತ್ತೆ ಅಕ್ಷರ್ ಪಟೇಲ್ ಅವರಿಗೆ ಸ್ಥಾನ ನೀಡಲಾಗಿದೆ. ಅದರಂತೆ ಬಾಂಗ್ಲಾದೇಶ ತಂಡದಲ್ಲಿಯೂ ಒಂದು ಚೆಂಜ್​ ಮಾಡಲಾಗಿದ್ದು, ಸೌಮ್ಯ ಸರ್ಕಾರ್ ಬದಲಿಗೆ ಶರೀಫುಲ್ ಇಸ್ಲಾಂ ಅವರು ಪ್ಲೇಯಿಂಗ್​11ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ: IND vs BAN: ನಾವು ವಿಶ್ವಕಪ್ ಗೆಲ್ಲಲು ಇಲ್ಲಿಗೆ ಬಂದಿಲ್ಲ, ಬಾಂಗ್ಲಾ ನಾಯಕನ ಶಾಕಿಂಗ್​ ಹೇಳಿಕೆ


ಭಾರತ-ಬಾಂಗ್ಲಾದೇಶ ಪ್ಲೇಯಿಂಗ್​ 11:


ಭಾರತ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ (C), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್​ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಹೂಡಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್


ಪಾಕಿಸ್ತಾನ ತಂಡ: ನಜ್ಮುಲ್ ಹೊಸೈನ್, ಶರೀಫುಲ್ ಇಸ್ಲಾಂ, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್, ಯಾಸಿರ್ ಅಲಿ, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್.

Published by:shrikrishna bhat
First published: