• Home
  • »
  • News
  • »
  • sports
  • »
  • IND vs BAN 3rd ODI: ವೈಟ್​ವಾಶ್ ಸುಳಿಯಲ್ಲಿ ಟೀಂ ಇಂಡಿಯಾ; 3 ಆಟಗಾರರು ಔಟ್​, ಯಾರಿಗೆಲ್ಲಾ ಸಿಗಲಿದೆ ಚಾನ್ಸ್?

IND vs BAN 3rd ODI: ವೈಟ್​ವಾಶ್ ಸುಳಿಯಲ್ಲಿ ಟೀಂ ಇಂಡಿಯಾ; 3 ಆಟಗಾರರು ಔಟ್​, ಯಾರಿಗೆಲ್ಲಾ ಸಿಗಲಿದೆ ಚಾನ್ಸ್?

IND vs BAN ODI

IND vs BAN ODI

IND vs BAN 3rd ODI: ಬಾಂಗ್ಲಾದೇಶ ವಿರುದ್ಧದ ಮೂರನೇ (IND vs BAN 3rd ODI) ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ. ಟೀಂ ಇಂಡಿಯಾ (Team India) ಆಟಗಾರರಾದ ರೋಹಿತ್ ಶರ್ಮಾ (Rohit Sharma), ದೀಪಕ್ ಚಹಾರ್, ಕುಲದೀಪ್ ಸೇನ್ ಆಡುವುದಿಲ್ಲ ಎಂದು BCCI ಹೇಳಿದೆ.

  • Share this:

    ಬಾಂಗ್ಲಾದೇಶ ವಿರುದ್ಧದ ಮೂರನೇ (IND vs BAN 3rd ODI) ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ. ಟೀಂ ಇಂಡಿಯಾ (Team India) ಆಟಗಾರರಾದ ರೋಹಿತ್ ಶರ್ಮಾ (Rohit Sharma), ದೀಪಕ್ ಚಹಾರ್, ಕುಲದೀಪ್ ಸೇನ್ ಆಡುವುದಿಲ್ಲ ಎಂದು BCCI ಹೇಳಿದೆ. ಆದರೆ ಈಗಾಗಲೇ ಸರಣಿ ಗೆದ್ದಿರುವ ಬಾಂಗ್ಲಾ ತಂಡವು ನಾಳಿನ ಪಂದ್ಯವನ್ನೂ ಗೆದ್ದು ಭಾರತವನ್ನು ವೈಟ್​ ವಾಷ್​ ಮಾಡಲು ಹವಣಿಸುತ್ತಿದ್ದರೆ, ಭಾರತ ವೈಟ್​ವಾಶ್​ನಿಂದ ತಪ್ಪಿಸಲಿಕೊಳ್ಳಲು ನಾಳಿನ ಪಂದ್ಯದಲ್ಲಿ ಗೆಲ್ಲಲೇ ಬೇಕಾಗಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಅನೇಕ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.


    ಕೆಎಲ್ ರಾಹುಲ್​ಗೆ ನಾಯಕತ್ವ?:


    ದೀಪಕ್ ಚಹಾರ್ ಮತ್ತು ಕಲ್ದೀಪ್ ಸೇನ್ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಇದರ ಫಲವಾಗಿ ಬಾಂಗ್ಲಾದೇಶ ಈಗಾಗಲೇ ಮೂರು ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸರಣಿ ಗೆದ್ದಿದೆ. ಹೀಗಿರುವಾಗ ನಾಳೆ ನಡೆಯಲಿರುವ ಮೂರನೇ ಏಕದಿನ ಪಂದ್ಯವನ್ನು ಗೆದ್ದು ಗೌರವ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿ ಟೀಂ ಇಂಡಿಯಾ ಇದೆ. ಆದರೆ, ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಇದೇ ವೇಳೆ ಮೂರನೇ ಏಕದಿನ ಪಂದ್ಯದ ಗೆಲುವೂ ಸಹ ಅಷ್ಟೇ ಕಷ್ಟವಾಗಿದ್ದು, ಕೆಎಲ್ ರಾಹುಲ್​ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.


    ಪಂದ್ಯದ ವಿವರ:


    ನಾಳೆ ಭಾರತ ಮತ್ತು ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ 3ನೇ ಏಕದಿನ ಪಂದ್ಯ ನಡೆಯಲಿದೆ. ನಾಳಿನ ಪಂದ್ಯ ಬಾಂಗ್ಲಾದ ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ 11:30ಕ್ಕೆ ಆರಂಭವಾಗಲಿದ್ದು, 11 ಗಂಟೆಗೆ ಟಾಸ್​ ಆಗಲಿದೆ. ಈ ಪಂದ್ಯಗಳನ್ನು ಸೋನಿ ನೆಟ್‌ವರ್ಕ್ ನೇರ ಪ್ರಸಾರ ಮಾಡಲಿದೆ. ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೀವು ಈ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು.


    ಇದನ್ನೂ ಓದಿ: Rohit Sharma: ಗಾಯದ ನಡುವೆಯೇ ದಾಖಲೆ ಬರೆದ ಹಿಟ್​ಮ್ಯಾನ್​, ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್​


    ಪಿಚ್​ ರಿಪೋರ್ಟ್​:


    ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಳೆದ ಐದು ODI ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 212 ರನ್ ಆಗಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ಮೂರು ಪಂದ್ಯಗಳನ್ನು ಗೆದ್ದಿದೆ. ಈ ಪಂದ್ಯದಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಟಾಸ್​ ಮಹತ್ವದ ಪಾತ್ರ ನಿರ್ವಹಿಸಲಿದೆ.


    ಭಾರತದ ಗಾಯಾಳುಗಳ ಪಟ್ಟಿ:


    • ರೋಹಿತ್ ಶರ್ಮಾ (ಹೆಬ್ಬೆರಳಿಗೆ ಗಾಯ)

    • ರಿಷಭ್ ಪಂತ್ (ಬೆನ್ನುನೋವು)

    • ಮೊಹಮ್ಮದ್ ಶಮಿ (ಭುಜದ ಗಾಯ)

    • ದೀಪಕ್ ಚಹಾರ್ (ಮಂಡಿರಜ್ಜು ಗಾಯ)

    • ಕುಲದೀಪ್ ಸೇನ್ (ಗಟ್ಟಿಯಾದ ಬೆನ್ನು)


    IND vs BAN ಸಂಭಾವ್ಯ ಪ್ಲೇಯಿಂಗ್ 11:


    ಭಾರತ ಸಂಭಾವ್ಯ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (WK), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.


    ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್​ 11: ಅನಾಮುಲ್ ಹಕ್, ಲಿಟ್ಟನ್ ದಾಸ್ (ಸಿ), ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆ), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಹಸನ್ ಮಹಮೂದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರೆಹಮಾನ್.

    Published by:shrikrishna bhat
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು